ನವದೆಹಲಿ : ಭಾರತದಲ್ಲಿ ಕೊರೊನಾವೈರಸ್‌ನ (Coronavirus) ಹೊಸ ಪ್ರಕರಣಗಳು ಕಡಿಮೆಯಾದ ಹಿನ್ನೆಲೆಯಲ್ಲಿ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ ಈ ಮಧ್ಯೆ ಕೋವಿಡ್ -19 ನ ಹೊಸ ರೂಪಾಂತರವು ದೇಶದ ಕದ ತಟ್ಟಿದೆ. ಕರೋನಾ ವೈರಸ್‌ನ ಈ ಹೊಸ ರೂಪಾಂತರವು (New Corona Variant)  ಡೆಲ್ಟಾ ಮತ್ತು ಓಮಿಕ್ರಾನ್ ರೂಪಾಂತರಗಳು ಸೇರಿ ರೂಪುಗೊಂಡಿವೆ ಎನ್ನಲಾಗಿದೆ. ಡೆಲ್ಟಾ (Delta) ಮತ್ತು ಓಮಿಕ್ರಾನ್‌ನಿಂದ (Omicron) ಮಾಡಲ್ಪಟ್ಟ ಡೆಲ್ಟಾಕ್ರಾನ್ ರೂಪಾಂತರವು ಇದೀಗ ಭಾರತದ ಕೆಲವು ರೋಗಿಗಳಲ್ಲಿ ಪತ್ತೆಯಾಗಿದೆ. 


COMMERCIAL BREAK
SCROLL TO CONTINUE READING

ದೇಶದ ಈ ರಾಜ್ಯಗಳಲ್ಲಿ ಡೆಲ್ಟಾಕ್ರಾನ್  :
 ವರದಿಯ ಪ್ರಕಾರ, ಭಾರತದ ಕೋವಿಡ್ ಜಿನೋಮಿಕ್ಸ್ ಕನ್ಸೋರ್ಟಿಯಂ (INSACOG) ಮತ್ತು GSAID ಗಳು ದೇಶದಲ್ಲಿ 568 ಪ್ರಕರಣಗಳ ಬಗ್ಗೆ ಅಧ್ಯಯನ ನಡೆಸುತ್ತಿದೆ. ವರದಿಯ ಪ್ರಕಾರ, ಕರ್ನಾಟಕದಲ್ಲಿ 221 ಪ್ರಕರಣಗಳಲ್ಲಿ ಡೆಲ್ಟಾಕ್ರಾನ್ (Deltacron) ರೂಪಾಂತರಗಳ ಲಕ್ಷಣಗಳಿವೆ ಎನ್ನಲಾಗಿದೆ. ತಮಿಳುನಾಡಿನಲ್ಲಿ 90, ಮಹಾರಾಷ್ಟ್ರದಲ್ಲಿ 66, ಗುಜರಾತ್‌ನಲ್ಲಿ 33, ಪಶ್ಚಿಮ ಬಂಗಾಳದಲ್ಲಿ 32 ಮತ್ತು ತೆಲಂಗಾಣದಲ್ಲಿ 25 ಮತ್ತು ನವದೆಹಲಿಯಲ್ಲಿ 20 ಪ್ರಕರಣಗಳು ಅಧ್ಯಯನದ ಹಂತದಲ್ಲಿವೆ.
 
 ಇದನ್ನೂ ಓದಿ : ಸರ್ಕಾರದಿಂದ ಮಲ್ಯ, ನೀರವ್ ಮತ್ತು ಚೋಕ್ಸಿಯಿಂದ ₹19,000 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು!


ಡೆಲ್ಟಾಕ್ರಾನ್,  ಡೆಲ್ಟಾ ಮತ್ತು ಓಮಿಕ್ರಾನ್‌ನ ಹೈಬ್ರಿಡ್ ರೂಪಾಂತರ : 
ತಜ್ಞರ ಪ್ರಕಾರ, ಇದು ಸೂಪರ್-ಮ್ಯುಟೆಂಟ್ ವೈರಸ್. ಇದರ ವೈಜ್ಞಾನಿಕ ಹೆಸರು BA.1 + B.1.617.2.ಇದು  ಡೆಲ್ಟಾ ಮತ್ತು ಓಮಿಕ್ರಾನ್‌ನಿಂದ ಮಾಡಲ್ಪಟ್ಟ ಹೈಬ್ರಿಡ್ ಸ್ಟ್ರೈನ್ ಎನ್ನುವುದು ತಜ್ಞರ ಅಭಿಪ್ರಾಯ. ಇದನ್ನು ಕಳೆದ ತಿಂಗಳು ಸೈಪ್ರಸ್‌ನ ಸಂಶೋಧಕರು ಮೊದಲು ಪತ್ತೆ ಹಚ್ಚಿದ್ದರು.  ಈಗ ಬ್ರಿಟನ್ ನಲ್ಲಿ ಈ ಪ್ರಕರಣಗಳು ಮುನ್ನೆಲೆಗೆ ಬರುತ್ತಿವೆ. ಡೆಲ್ಟಾಕ್ರಾನ್ (Deltacron) ಎಂಬುದು ಕರೋನಾ ವೈರಸ್‌ನ (Coronavirus) ಹೈಬ್ರಿಡ್ ರೂಪಾಂತರವಾಗಿದೆ. 


ಕೋವಿಡ್‌ನ ಹೊಸ ರೂಪಾಂತರಗಳೊಂದಿಗೆ ಸೋಂಕು ಹೆಚ್ಚಾಗುವ ಸಾಧ್ಯತೆ : 
ಡೆಲ್ಟಾ ಮತ್ತು ಓಮಿಕ್ರಾನ್‌ನಿಂದ (omicron) ಕೂಡಿದ ಹೊಸ ವೈರಸ್ ಎಷ್ಟು ಅಪಾಯಕಾರಿ ಎಂಬುದರ ಕುರಿತು ಅನೇಕ ಅಧ್ಯಯನಗಳು ನಡೆಯುತ್ತಿವೆ. ವರದಿಗಳ ಪ್ರಕಾರ, ಈ ವೈರಸ್‌ನ ಮೊದಲ ಪ್ರಕರಣ ಫ್ರಾನ್ಸ್‌ನಲ್ಲಿ ಜನವರಿ 2022 ರಲ್ಲಿ ಪತ್ತೆಯಾಯಿತು. SARSCov2 ನ Omicron ಮತ್ತು Delta ರೂಪಾಂತರಗಳು ಒಟ್ಟಿಗೆ ಹರಡುವ ಸಾಧ್ಯತೆಯಿದೆ ಎಂದು WHO ವಿಜ್ಞಾನಿ ಮಾರಿಯಾ ವ್ಯಾನ್ ಕಾರ್ಖೋವ್ ಹೇಳಿದ್ದಾರೆ. 


 ಇದನ್ನೂ ಓದಿ : Vikramaditya Singh : ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ ಮತ್ತೊಬ್ಬ ನಾಯಕ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.