Coronavirus Alert! Coronavirus ನಿಂದ ಶರೀರದಲ್ಲಿ ಯಾವ ಬದಲಾವಣೆಗಳಾಗುತ್ತವೆ?
ಈ ವೈರಸ್ ಸೋಂಕು ತಗುಲಿ ಚೀನಾದಲ್ಲಿ ಮೃತಪಟ್ಟ ವ್ಯಕ್ತಿಗಳಲ್ಲಿ ಕಂಡು ಬಂದ ಲಕ್ಷಣಗಳ ಕುರಿತು ನಾವು ಇಲ್ಲಿ ಉಲ್ಲೇಖಿಸಿದ್ದೇವೆ.
Coronavirus Alert! ಚೀನಾದಲ್ಲಿ ಕೊರೊನಾ ವೈರಸ್ ಮಹಾಮಾರಿಗೆ ಸಾವಿರಾರು ಜನ ಮೃತಪಟ್ಟಿದ್ದಾರೆ. ಸದ್ಯ ಈ ಮಾರಕ ವೈರಸ್ ಭಾರತಕ್ಕೆ ಲಗ್ಗೆ ಇಟ್ಟಿದೆ. ಕೆಲವೇ ನಿಮಿಷಗಳಲ್ಲಿ ಒಬ್ಬರಿಂದ ಸಾವಿರಾರು ಜನರಿಗೆ ಹರಡುವ ಈ ವೈರಸ್ ನ ಸೋಂಕಿನಿಂದ ಬಚಾವಾಗಲು ಒಂದೇ ಒಂದು ಉಪಾಯವಿದೆ.
ಆದರೆ ಈ ಎಲ್ಲ ಸುದ್ದಿಗಳ ಮಧ್ಯೆ ನಮ್ಮ ನಿತ್ಯದ ಜೀವನ ನಡೆಯಲೇ ಬೇಕು. ಹೀಗಿರುವಾಗ ಈ ವೈರಸ್ ನ ಸೋಂಕು ಯಾವುದೇ ಓರ್ವ ವ್ಯಕ್ತಿಗೆ ತಗುಲಿದೆ ಅಥವಾ ನೀವೇ ಈ ವೈರಸ್ ನ ದಾಳಿಗೆ ತುತ್ತಾಗಿರುವಿರಿ ಎಂಬುದು ಹೇಗೆ ತಿಳಿಯಬೇಕು? ಈ ವೈರಸ್ ತಮ್ಮ ಶರೀರ ಪ್ರವೇಶಿಸುತ್ತಿದ್ದಂತೆ ನಮ್ಮ ಶರೀರದಲ್ಲಿ ಯಾವ ಯಾವ ಬದಲಾವಣೆಗಳು ಸಂಭವಿಸುತ್ತವೆ?
ಈ ಕುರಿತು ವೈದ್ಯರು ಹೇಳುವ ಪ್ರಕಾರ ಈ ವೈರಸ್ ನ ಸೋಂಕು ತಗುಲಿದ ವ್ಯಕ್ತಿಯಲ್ಲಿ ನೆಗಡಿ, ಕೆಮ್ಮು, ಗಂಟಲಿನಲ್ಲಿ ಕಿರಿಕಿರಿ ಹಾಗೂ ಉಸಿರಾಟದ ತೊಂದರೆಗಳಂತಹ ಲಕ್ಷಣಗಳು ಕಂಡುಬರುತ್ತವೆ ಎನ್ನಲಾಗಿದೆ. ಆದರೆ, ನಾವು ನಿಮಗೆ ಇಲ್ಲಿ ಹೇಳಲು ಹೊರಟಿರುವ ಲಕ್ಷಣಗಳು ಚೀನಾದಲ್ಲಿ ಈ ವೈರಸ್ ಸೋಂಕಿಗೆ ಬಲಿಯಾದ ರೋಗಿಗಳಲ್ಲಿ ಕಂಡುಬಂದಿವೆ.
ಕೊರೊನಾ ವೈರಸ್ ಸೊಂಕಿನಿಂದ ಬಳಲಿದ ಮೊದಲ 99 ರೋಗಿಗಳ ಚಿಕಿತ್ಸೆಯ ವಿಸ್ತ್ರತ ವರದಿ ಲಾನ್ಸೆಟ್ ಮೆಡಿಕಲ್ ಜರ್ನಲ್ ನಲ್ಲಿ ಪ್ರಕಟಗೊಂಡಿದೆ. ಇದರಲ್ಲಿ ಹಲವು ವಿಷಯಗಳ ಮೇಲೆ ಬೆಳಕು ಚೆಲ್ಲಲಾಗಿದೆ.
ವರದಿಯ ಪ್ರಕಾರ ವುಹಾನ್ ನ ಜಿನಿಯಂತಾನಾ ಆಸ್ಪತ್ರೆಯಲ್ಲಿ ತರಲಾಗಿದ್ದ 99 ರೋಗಿಗಳಲ್ಲಿ ಮೊದಲು ನಿಮೋನಿಯಾ ಲಕ್ಷಣಗಳು ಕಂಡುಬಂದಿದ್ದವು ಎನ್ನಲಾಗಿದೆ. 11 ರೋಗಿಗಳು ವಿಪರೀತ ಸ್ನಾಯುನೋವಿನಿಂದ ಬಳಲುತ್ತಿದ್ದರು. 9 ರೋಗಿಗಳಿಗೆ ತಮಗೆ ಏನಾಗಿದೆ ಎಂಬುದು ಅರ್ಥವೇ ಆಗುತ್ತಿರಲಿಲ್ಲ. 8 ರೋಗಿಗಳು ವಿಪರೀತ ತಲೆನೋವಿನಿಂದ ಬಳಲುತ್ತಿದ್ದರು ಹಾಗೂ 5 ರೋಗಿಗಳು ಗಂಟಲು ರೋಗದಿಂದ ಬಳಲುತ್ತಿದ್ದರು ಎನ್ನಲಾಗಿದೆ.
ಓರ್ವ ರೋಗಿ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಆತನನ್ನು ವೆಂಟಿಲೇಟರ್ ಮೇಲೆ ಇಡಲಾಗಿತ್ತು. ಇದರಿಂದ ಆತನ ಶ್ವಾಸಕೋಶ ಕಾರ್ಯ ಮಾಡುವುದನ್ನು ನಿಲ್ಲಿಸಿತು. ಬಳಿಕ ಕ್ರಮೇಣವಾಗಿ ಆತನ ಹೃದಯ ಬಡಿತ ನಿಂತುಹೋಗಿದೆ. ಇತರೆ ವ್ಯಕ್ತಿಗಳು ನಿಮೊನಿಯಾದ ಕಾರಣ ಮೃತಪಟ್ಟಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಸಮುದ್ರದ ಆಹಾರ ಕಾರಣವಾಗಿತ್ತೆ?
ವುಹಾನ್ ನ ಹುಆನಾನ್ ಸೀಫುಡ್ ಮಾರುಕಟ್ಟೆಯಲ್ಲಿ ಸಿಕ್ಕ ಸಮುದ್ರದ ಒಂದು ಜೀವದಲ್ಲಿ ಈ ವೈರಸ್ ಪತ್ತೆಯಾಗಿರುವುದೇ ಇದಕ್ಕೆ ಕಾರಣ ಎನ್ನಾಗಿದೆ. ಜಿನಿಯಂತಾನ ಆಸ್ಪತ್ರೆಗೆ ತರಲಾಗಿದ್ದ ಮೊದಲ 99 ರೋಗಿಗಳ ಪೈಕಿ 49 ರೋಗಿಗಳು ಈ ಮಾರುಕಟ್ಟೆಯ ಜೊತೆಗೆ ಸಂಪರ್ಕದಲ್ಲಿದ್ದರು ಎನ್ನಲಾಗಿದೆ.
ಮೊದಲಿನಿಂದ ಅನಾರೋಗ್ಯಕ್ಕೆ ತುತ್ತಾಗಿರುವವರಿಗೆ ಹೆಚ್ಚಿನ ತೊಂದರೆ ಆಗಲಿದೆ
ಮೊದಲಿನಿಂದ ಅನಾರೋಗ್ಯದಿಂದ ಬಳಲುತ್ತಿರುವವರಲ್ಲಿ ಈ ಸೋಂಕು ಹರಡುವ ಸಾಧ್ಯತೆ ಹೆಚ್ಚು ಎಂದು ವರದಿಯಲ್ಲಿ ಹೇಳಲಾಗಿದೆ. ಆಸ್ಪತ್ರೆಗೆ ತರಲಾಗಿದ್ದ ಈ 99 ರೋಗಿಗಳ ಪೈಕಿ ಹಲವರು ಮೊದಲೇ ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ. ರೋಗಪ್ರತಿರೋಧಕ ಶಕ್ತಿ ಕಡಿಮೆ ಇರುವ ಜನರಲ್ಲಿ ಈ ವೈರಸ್ ಹೆಚ್ಚು ಮಾರಕವಾಗಿದೆ.