ನವದೆಹಲಿ: ದೇಶದಲ್ಲಿ ಕೊರೊನಾ ವೈರಸ್ ಮತ್ತೆ ರಣಕೇಕೆ ಹಾಕುತ್ತಿದೆ. ಕೋವಿಡ್‌ನ ಪಾಸಿಟಿವಿಟಿ ಪ್ರಮಾಣವೂ ಹೆಚ್ಚಾಗಿದೆ. ಕಳೆದ 24 ಗಂಟೆಗಳಲ್ಲಿ 6,155 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಸಕ್ರಿಯ ರೋಗಿಗಳ ಸಂಖ್ಯೆ 31,194ಕ್ಕೆ ಏರಿಕೆಯಾಗಿದೆ. ಶನಿವಾರ ಬೆಳಗ್ಗೆ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ಭಾರತದಲ್ಲಿ ಇದುವರೆಗೆ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 4,47,51,259ಕ್ಕೆ ಏರಿದೆ.


COMMERCIAL BREAK
SCROLL TO CONTINUE READING

ಮಾರಕ ಕೊರೊನಾ ಸೋಂಕಿನಿಂದ 11 ರೋಗಿಗಳು ಸಾವನ್ನಪ್ಪಿದ್ದು, ಒಟ್ಟು ಸಾವಿನ ಸಂಖ್ಯೆ 5,30,954ಕ್ಕೆ ಏರಿಕೆಯಾಗಿದೆ. ಕೊರೊನಾ ಭೀತಿ ಹೆಚ್ಚುತ್ತಿದ್ದರೂ ಜನರು ಮಾಸ್ಕ್ ಧರಿಸುವ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದ್ದು, ಆರೋಗ್ಯ ತಜ್ಞರು ಎಚ್ಚರಿಕೆ ನೀಡಿದ್ದಾರೆ.


ಇದನ್ನೂ ಓದಿ: Knowledge News: ವಿಮಾನ ಹಾರಾಟಕ್ಕೂ ಮುನ್ನ ಮೊಬೈಲ್’ನ್ನು ಏರೋಪ್ಲೇನ್ ಮೋಡ್’ಗೆ ಹಾಕೋದು ಏಕೆ ಗೊತ್ತಾ?


ಕೋವಿಡ್ ಪ್ರೋಟೋಕಾಲ್ ಬಗ್ಗೆ ದೊಡ್ಡ ನಿರ್ಲಕ್ಷ್ಯ


ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ದೆಹಲಿ ಸರ್ಕಾರವು ಆಸ್ಪತ್ರೆಗಳಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿದೆ. ಮೆಟ್ರೋದಲ್ಲಿ ಕೊರೊನಾ ಪ್ರೋಟೋಕಾಲ್ ಬಗ್ಗೆ ಎಚ್ಚರಿಕೆ ಸಂದೇಶಗಳು ಮತ್ತೆ ರಿಂಗಣಿಸಲು ಪ್ರಾರಂಭಿಸಿವೆ. ಮಾರುಕಟ್ಟೆಯಿಂದ ಹಿಡಿದು ಕಚೇರಿಗಳವರೆಗೆ ಜನರು ಮಾಸ್ಕ್‌ಗಳ ಅಗತ್ಯತೆಯ ಬಗ್ಗೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ಏತನ್ಮಧ್ಯೆ ಏಮ್ಸ್‌ನ ಕಾರ್ಡಿಯೋ-ಥೊರಾಸಿಕ್ ಸರ್ಜರಿ ವಿಭಾಗದ ಮುಖ್ಯಸ್ಥ ಡಾ.ಸಂಜೀವ್ ಕುಮಾರ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ‘ಕಳೆದ ಕೆಲವು ವಾರಗಳಲ್ಲಿ ನಾವು ಕೋವಿಡ್ ಪ್ರಕರಣಗಳಲ್ಲಿ ಹೆಚ್ಚಳವನ್ನು ನೋಡುತ್ತಿದ್ದೇವೆ. ವೈರಸ್ ಹರಡುವುದನ್ನು ತಡೆಯಲು ಮಾಸ್ಕ್ ಧರಿಸುವುದು ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ’ ಎಂದು ಹೇಳಿದ್ದಾರೆ.


ಈ ಲಕ್ಷಣಗಳು ಕಂಡುಬಂದರೆ ಎಚ್ಚರ!


ತಜ್ಞರ ಪ್ರಕಾರ ಓಮಿಕ್ರಾನ್ ವೈರಸ್‌ನ ಉಪ-ವೇರಿಯಂಟ್ ಎಕ್ಸ್‌ಬಿಬಿ 1.16 ಕಾರಣ ಕೊರೊನಾ ಪ್ರಕರಣಗಳಲ್ಲಿ ಅನಿರೀಕ್ಷಿತ ಹೆಚ್ಚಳ ಕಂಡುಬಂದಿದೆ. ಕೋವಿಡ್‌ನ ಈ ಹೊಸ ರೂಪಾಂತರವು ತುಂಬಾ ಸಾಂಕ್ರಾಮಿಕವಾಗಿದೆ ಎಂದು ಹೇಳಲಾಗುತ್ತದೆ. ಹೀಗಾಗಿ ಈ ಬಗ್ಗೆ ವೈದ್ಯರ ಕಾಳಜಿ ಹೆಚ್ಚಿದೆ. XBB 1.16 ರೂಪಾಂತರದ ಪ್ರಮುಖ ರೋಗಲಕ್ಷಣಗಳ ಬಗ್ಗೆ ಹೇಳುವುದಾದರೆ, ಉಸಿರಾಟದ ಕಾಯಿಲೆಗಳ ಲಕ್ಷಣ, ತಲೆನೋವು, ನೋಯುತ್ತಿರುವ ಗಂಟಲು, ಮೂಗಿನ ದಟ್ಟಣೆ, ಜ್ವರ ಮತ್ತು ಸ್ನಾಯು ನೋವು ಸೇರಿವೆ. ಇದರ ಸೋಂಕು ಜೀರ್ಣಾಂಗ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಈ ಸಂದರ್ಭದಲ್ಲಿ ರೋಗಪೀಡಿತ ವ್ಯಕ್ತಿಯು ಅತಿಸಾರವನ್ನು ಹೊಂದಿರಬಹುದು.


ಇದನ್ನೂ ಓದಿ: Aiplane Milage: ಒಂದು ಲೀಟರ್ ಇಂಧನದಲ್ಲಿ ವಿಮಾನ ಎಷ್ಟು ದೂರ ಪ್ರಯಾಣಿಸುತ್ತೆ? ಇದರ ಮೈಲೇಜ್ ಬಗ್ಗೆ ತಿಳಿದರೆ ಶಾಕ್ ಆಗ್ತೀರ!


ಅಪಾಯವೇ ಹೊಸ ಚಿಕಿತ್ಸೆ!


ಸೋಂಕಿನಿಂದ ದೂರವಿರಲು ನಿಮ್ಮ ರೋಗನಿರೋಧಕ ಶಕ್ತಿ ಹೆಚ್ಚಿಸುವುದರ ಜೊತೆಗೆ ಹಳೆಯ ನಿಯಮಗಳನ್ನೇ ಪಾಲಿಸಬೇಕು. ತಜ್ಞರ ಪ್ರಕಾರ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು, ಪದೇ ಪದೇ ಕೈಗಳನ್ನು ಸಾಬೂನಿನಿಂದ ತೊಳೆಯುವುದು ಮತ್ತು ಸ್ಯಾನಿಟೈಸರ್‌ ಬಳಸುವುದು, ಜನಸಂದಣಿ ಇರುವ ಸ್ಥಳಗಳಿಗೆ ಅನಗತ್ಯವಾಗಿ ಹೋಗದಿರುವುದು ಮುಂತಾದ ನಿಯಮಗಳನ್ನು ಪಾಲಿಸುವ ಮೂಲಕ ರೋಗದಿಂದ ನೀವು ದೂರವಿರಬಹುದು.  


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.