Coronavirus: ಮತ್ತೆ ಸ್ಥಗಿತಗೊಳ್ಳಲಿದೆಯೇ ರೈಲು ಸೇವೆ, ಗಂಭೀರ ಹೇಳಿಕೆ ನೀಡಿದ ರೈಲು ವಿಭಾಗ
Indian Railways - ದೇಶಾದ್ಯಂತ ಹೆಚ್ಚಾಗುತ್ತಿರುವ ಕರೋನಾ (Covid-19) ಪ್ರಕರಣಗಳ ಹಿನ್ನೆಲೆ, ಭಾರತೀಯ ರೈಲ್ವೆ ವಿಭಾಗ ಮುಂಬೈ ಸೆಂಟ್ರಲ್ನಿಂದ ಅಹಮದಾಬಾದ್ ನಡುವಿನ ತೇಜಸ್ ಎಕ್ಸ್ಪ್ರೆಸ್ ಕಾರ್ಯಾಚರಣೆಯನ್ನು ಒಂದು ತಿಂಗಳ ಕಾಲ ಸ್ಥಗಿತಗೊಳಿಸಿದೆ. ಇಂತಹ ಪರಿಸ್ಥಿತಿಯಲ್ಲಿ ದೇಶದಲ್ಲಿ ರೈಲು ಸೇವೆ ಪುನಃ ಸ್ಥಗಿತಗೊಳ್ಳಲಿದೆಯೇ ಎಂಬ ಪ್ರಶ್ನೆ ಇದೀಗ ಮತ್ತೆ ಕಾಡಲಾರಂಭಿಸಿದೆ.
ನವದೆಹಲಿ: Indian Railways - ದೇಶಾದ್ಯಂತ ಕೊರೊನಾ ವೈರಸ್ ಮತ್ತೊಮ್ಮೆ ತನ್ನ ಪಾದಗಳನ್ನು ಪಸರಿಸಲಾರಂಭಿಸಿದೆ. ಹೆಚ್ಚಾಗುತ್ತಿರುವ ಕೊರೊನಾ ಪ್ರಕರಣಗಳ ಹಿನ್ನೆಲೆ ರಾಜ್ಯಗಳೂ ಕೂಡ ಇದೀಗ ಮತ್ತೆ ನಿರ್ಬಂಧಗಳನ್ನು ಹೇರಲು ಪ್ರಾರಂಭಿಸಿವೆ. ದೇಶದ ಹಲವು ರಾಜ್ಯಗಳಲ್ಲಿ ನೈಟ್ ಕರ್ಫ್ಯೂ ಜಾರಿಗೊಳಿಸಿವೆ. ಹಲವೆಡೆ ಕೆಲ ನಗರಗಳಲ್ಲಿ ಸಂಪೂರ್ಣ ಲಾಕ್ ಡೌನ್ (Lockdown News) ವಿಧಿಸಲಾಗಿದ್ದರೆ, ಕೆಲವೆಡೆ ವಾರಾಂತ್ಯದಲ್ಲಿ ಲಾಕ್ ಡೌನ್ ಘೋಷಿಸಲಾಗಿದೆ. ಹೀಗಾಗಿ ಕೆಚ್ಚುತ್ತಿರುವ ಕೊರೊನಾ ಪ್ರಕರಣಗಳನ್ನು ಗಮನಿಸಿ, ಭಾರತೀಯ ರೈಲು ಇಲಾಖೆ ಮುಂಬೈ ಮತ್ತು ಅಹ್ಮದಾಬಾದ್ ನಡುವೆ ಸಂಚರಿಸುತ್ತಿದ್ದ ತೇಜಸ್ ಎಕ್ಸ್ ಪ್ರೆಸ್ ರೈಲು (Special Train) ಸಂಚಾರವನ್ನು 30 ದಿನಗಳ ಕಾಲ ಸ್ಥಗಿತಗೊಳಿಸಿದೆ. ಇಂತಹ ಪರಿಸ್ಥಿತಿಯಲ್ಲಿ ದೇಶಾದ್ಯಂತ ಮತ್ತೆ ರೈಲುಗಳ ಸಂಚಾರ ಸ್ಥಗಿತಗೊಳ್ಳಲಿದೆಯೇ ಎಂಬ ಪ್ರಶ್ನೆ ಜನರನ್ನು ಕಾಡಲಾರಂಭಿಸಿದೆ.
ಭಾರತೀಯ ರೈಲು ವಿಭಾಗ ಹೇಳಿದ್ದೇನು?
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಭಾರತೀಯ ರೈಲು ವಿಭಾಗ ರೈಲುಗಳನ್ನು ಸ್ಥಗಿತಗೊಳಿಸುವ ಅಥವಾ ರೈಲು ಸೇವೆಯನ್ನು ಸ್ಥಗಿತಗೊಳಿಸುವ ಪ್ರಸ್ತಾಪ ಇದುವರೆಗೆ ವಿಭಾಗದ ಮುಂದೆ ಇಲ್ಲ ಎಂದು ಹೇಳಿದೆ.
ಇದನ್ನೂ ಓದಿ-
ಈ ಕುರಿತು ಮಾಹಿತಿ ನೀಡಿರುವ ಭಾರತೀಯ ರೈಲು ಮಂಡಳಿಯ ಚೇರ್ಮನ್ ಸುನೀತ್ ಶರ್ಮಾ, ಜನರು ಯಾತ್ರೆಕೈಗೊಳ್ಳಲು ಬಯಸುತ್ತಿದ್ದಾರೆ, ಅವರಿಗೆ ರೈಲುಗಳ ಕೊರತೆ ಎದುರಾಗುವುದುಲ್ಲ. ಬೇಡಿಕೆಗೆ ಅನುಗುಣವಾಗಿ ರೈಲುಗಳನ್ನು ಬಿಡುಗಡೆ ಮಾಡಲಾಗುವುದು ಎಂಬ ಭರವಸೆ ನೀಡುತ್ತೇನೆ ಎಂದಿದ್ದಾರೆ. ಕಳೆದ ತಿಂಗಳಿಗೆ ಹೋಲಿಸಿದರೆ ಈ ತಿಂಗಳೂ ಕೂಡ ರೈಲು ನಿಲ್ದಾಣಗಳಲ್ಲಿ ಯಾತ್ರಿಗಳ ಸಂಖ್ಯೆ ಸಾಮಾನ್ಯವಾಗಿದೆ. ಹೀಗಾಗಿ ನಾವು ಅವಶ್ಯಕತೆಗೆ ಅನುಗುಣವಾಗಿ ರೈಲುಗಳ ಸಂಖ್ಯೆಯನ್ನು ಹೆಚ್ಚಿಸಲಿದ್ದೇವೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ-
ರೈಲಿನಲ್ಲಿ ಸಂಚರಿಸಲು ಕೊರೊನಾ ಋಣಾತ್ಮಕ ವರದಿ ಬೇಕಿಲ್ಲ
ರೈಲುಗಳಲ್ಲಿ ಯಾತ್ರೆ ಕೈಗೊಳ್ಳಲು ಕೊರೊನಾ ನೆಗೆಟಿವ್ ವರದಿ ನೀಡುವುದು ಕಡ್ಡಾಯ ಎಂದ ಎಲ್ಲ ಮಾಧ್ಯಮಗಳ ವರದಿಯನ್ನು ಶರ್ಮಾ ಅಲ್ಲಗಳೆದಿದ್ದಾರೆ. ಇನ್ನೊಂದೆಡೆ ಮಹಾರಾಷ್ಟ್ರದಲ್ಲಿ ಹೇಳಲಾಗುತ್ತಿರುವ ಕಾರ್ಮಿಕರ ವಲಸೆ, ಕಾರ್ಮಿಕರ ವಲಸೆ ಅಲ್ಲ ಮತ್ತು ಅವರು ಸಾಮಾನ್ಯ ಯಾತ್ರಿಗಳಾಗಿದ್ದಾರೆ ಎಂದು ಶರ್ಮಾ ಹೇಳಿದ್ದಾರೆ. ಕೇವಲ ನೈಟ್ ಕರ್ಫ್ಯೂನಿಂದ ಪಾರಾಗಲು ಅವರು ಬೇಗನೆ ರೈಲು (IRCTC) ನಿಲ್ದಾಣಕ್ಕೆ ಬರುತ್ತಿದ್ದಾರೆ. ಹೀಗಾಗಿ ನಿಲ್ದಾಣಗಳಲ್ಲಿ ಜನಸಂದಣಿ ಕಾಣಸಿಗುತ್ತಿದೆ ಎಂದು ಶರ್ಮಾ ಹೇಳಿದ್ದಾರೆ. ರೈಲುಗಳ ಆವಾಗಮನ ನಿಲ್ಲಿಸಲು ಅಥವಾ ಕಡಿಮೆ ಮಾಡಲು ಇದುವರೆಗೆ ಯಾವುದೇ ರೀತಿಯ ಮನವಿ ಮಾಡಲಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.