ಅರಿಶಿಣದಿಂದ ಕೂಡಿದ ಹಾಲು ಮತ್ತು ಈ ವಸ್ತುಗಳು Coronavirusಗೆ ಪರಿಣಾಮಕಾರಿ ಮದ್ದು ಎಂದ Ayush Ministry
ಒಂದೆಡೆ ದೇಶಾದ್ಯಂತ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಆಯುಶ್ ಮಂತ್ರಾಲಯ ಈ ಕುರಿತು ತನ್ನ ಅಡ್ವೈಸರಿ ಜಾರಿಗೊಳಿಸಿದೆ.
ಒಂದೆಡೆ ದೇಶಾದ್ಯಂತ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಆಯುಶ್ ಮಂತ್ರಾಲಯ ಈ ಕುರಿತು ತನ್ನ ಅಡ್ವೈಸರಿ ಜಾರಿಗೊಳಿಸಿದೆ. ಈ ಅಡ್ವೈಸರಿಯಲ್ಲಿ ಯಾವ ಆಹಾರ ಪದಾರ್ಥಗಳ ಸೇವನೆಯಿಂದ ರೋಗಪ್ರತಿರೋಧಕ ಶಕ್ತಿ ವೃದ್ಧಿಯಾಗುತ್ತದ ಎಂಬುದನ್ನು ಹೇಳಲಾಗಿದೆ.
ದೇಶಾದ್ಯಂತ ಕೊರೊನಾ ವೈರಸ್ ನ ಹೆಚ್ಚಾಗುತ್ತಿರುವ ಪ್ರಕೋಪದ ಹಿನ್ನೆಲೆ ಆಯುಶ್ ಮಂತ್ರಾಲಯ ಶ್ವಾಸ ಸಂಬಂಧಿ ಆರೋಗ್ಯದ ವಿಶೇಷ ಸಂದರ್ಭದ ಜೊತೆಗೆ ರೋಗ ಪ್ರತಿರೋಧಕ ಶಕ್ತಿ ವೃದ್ಧಿಸುವ ಹಾಗೂ ಆರೋಗ್ಯ ರಕ್ಷಣೆಗಾಗಿ ಹಲವು ರೀತಿಯ ಪರಾಮರ್ಶೆಗಳನ್ನು ಜಾರಿಗೊಳಿಸಿದೆ. ಆದರೆ, ಈ ಸಲಹೆಗಳು ಕೊವಿಡ್-19 ನ ಚಿಕಿತ್ಸೆಗಾಗಿ ಅಲ್ಲ ಹಾಗೂ ಇವು ಕೇವಲ ನಿಮ್ಮನ್ನು ರಕ್ಷಿಸಲಿವೆ ಎಂದು ಸ್ಪಷ್ಟಪಡಿಸಿದೆ. ಈ ಕುರಿತು ಹೇಳಿಕೆ ನೀಡಿರುವ ಸಚಿವಾಲಯ, "ಆಯುರ್ವೇದಿಕ್ ಸಾಹಿತ್ಯ ಹಾಗೂ ವೈಜ್ಞಾನಿಕ ದಾಖಲೆಗಳನ್ನು ಆಧರಿಸಿ ಈ ಶಿಫಾರಸ್ಸುಗಳನ್ನು ಮಾಡಲಾಗಿದೆ" ಎಂದು ಹೇಳಿದೆ.
ಆಯುಶ್ ಸಚಿವಾಲಯ ಜಾರಿಗೊಳಿಸಿರುವ ಈ ಅಡ್ವೈಸರಿಗಳಲ್ಲಿ ಸಂಪೂರ್ಣ ದಿನ ಬಿಸಿನೀರು ಸೇವನೆ, ನಿತ್ಯ ಕನಿಷ್ಠ 30 ನಿಮಿಷ ಯೋಗಾಸನ, ಪ್ರಾಣಾಯಾಮ ಹಾಗೂ ಧ್ಯಾನ. ಆಹಾರ ತಯಾರಿಕೆಯಲ್ಲಿ ಅರಿಶಿಣ, ಜೀರಿಗೆ, ಧನಿಯಾ ಹಾಗೂ ಬೆಳ್ಳುಳ್ಳಿ ಬಳಕೆ ಹೆಚ್ಚಾಗಿ ಮಾಡಲು ಸಲಹೆಗಳನ್ನು ನೀಡಲಾಗಿದೆ.
ರೋಗ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಲಹೆ ನೀಡಿರುವ ದೇಶದ ಖ್ಯಾತ ವೈದ್ಯರು, " ನಿತ್ಯ ಬೆಳಗ್ಗೆ 1 ಚ. ಅಥವಾ 10 ಗ್ರಾಂ ಚವನ್ಪ್ರಾಶ್ ಸೇವಿಸಬೇಕು. ಅದರಲ್ಲೂ ವಿಶೇಷವಾಗಿ ಸಕ್ಕರೆ ಕಾಯಿಲೆ ಇರುವವರು ಶುಗರ್ ಫ್ರೀ ಚವನ್ ಪ್ರಾಶ್ ಸೇವಿಸಬೇಕು ಎಂದಿದ್ದಾರೆ. ತುಳಸಿ, ದಾಲ್ಚಿನಿ, ಕರಿಮೆಣಸು, ಶುಂಠಿ ಹಾಗೂ ಒಣ ದ್ರಾಕ್ಷಿಯಿಂದ ತಯಾರಿಸಲಾದ ಕಷಾಯವನ್ನು ಪ್ರತಿ ದಿನ ಒಂದರಿಂದ ಎರಡು ಬಾರಿ ಸೇವಿಸಬೇಕು ಎಂದು ಹೇಳಲಾಗಿದೆ. ಒಂದು ವೇಳೆ ಅವಶ್ಯಕ ಎನಿಸಿದರೆ ಇದರಲ್ಲಿ ಸ್ವಲ್ಪ ಬೆಲ್ಲ ಅಥವಾ ತಾಜಾ ನಿಂಬೆಹಣ್ಣಿನ ರಸ ಕೂಡ ಬೇರೆಸುವಂತೆ ಸೂಚಿಸಲಾಗಿದೆ.
ಅಷ್ಟೇ ಅಲ್ಲ 150 ಮಿಲಿ ಹದ ಬಿಸಿ ಹಾಲಿಗೆ ಅರ್ಧ ಚಮಚೆ ಅರಿಶಿಣ ಪೌಡರ್ ಬೆರೆಸಿ ನಿತ್ಯ ಒಂದರಿಂದ ಎರಡು ಬಾರಿ ಸೇವಿಸಲು ಕೂಡ ವೈದ್ಯರು ಸಲಹೆ ನೀಡಿದ್ದಾರೆ. ಸರಳ ಆಯುರ್ವೇದದ ಭಾಗವಾಗಿ ನಿತ್ಯ ಬೆಳಗ್ಗೆ ಹಾಗೂ ಸಂಜೆ ಮೂಗಿನ ಹೊರಳೆಯ ಒಳಭಾಗಕ್ಕೆ ಎಳ್ಳೆಣ್ಣೆ ಅಥವಾ ಕೊಬ್ಬರಿ ಎಣ್ಣೆ ಅಥವಾ ತುಪ್ಪ ಸವರಲೂ ಕೂಡ ಸೂಚಿಸಲಾಗಿದೆ. ಆಯಿಲ್ ಪುಲ್ಲಿಂಗ್ ಥೆರಪಿಗಾಗಿ ನಿತ್ಯ ಒಂದು ಚಮಚೆ ಎಳ್ಳೆಣ್ಣೆ ಅಥವಾ ಕೊಬ್ಬರಿ ಎಣ್ಣೆಯಿಂದ ಸುಮಾರು 2 ರಿಂದ 3 ನಿಮಿಷ ಬಾಯಿ ಮುಕ್ಕಳಿಸಿ ಉಗಿಯಲೂ ಕೂಡ ಸೂಚಿಸಲಾಗಿದೆ. ಇದಾದ ನಂತರ ಬಿಸಿ ನೀರಿನಿಂದ ಬಾಯಿಮುಕ್ಕಳಿಸಬೇಕು. ಈ ಪ್ರಕ್ರಿಯೆಯನ್ನು ದಿನದಲ್ಲಿ ಎರಡು ಬಾರಿ ಪುನರಾವರ್ತಿಸಲು ಹೇಳಲಾಗಿದೆ.
ಒಣ ಕೆಮ್ಮು ಹಾಗೂ ಗಂಟಲ ಕೆರೆತ ಉಂಟಾದ ಸಂದರ್ಭದಲ್ಲಿ ತಾಜಾ ಪುದಿನಾ ಎಳೆಗಳು ಹಾಗೂ ಅಜ್ವಾಯಿನ್ ಬಳಸಿ ದಿನದಲ್ಲಿ ಒಂದು ಬಾರಿ ಆವಿ ಸ್ವೀಕರಿಸಬೇಕು. ಗಂಟಲ ಉರಿಯೂತ ನಿವಾರಣೆಗೆ ಲವಂಗ್ ಪೌಡರ್ ಅನ್ನು ಜೇನುತುಪ್ಪದ ಜೊತೆಗೆ ಬೆರೆಸಿ ನಿತ್ಯ 2 ರಿಂದ 3 ಬಾರಿ ಸೇವಿಸಬೇಕು. ಸಾಮಾನ್ಯವಾಗಿ ಒಣ ಕೆಮ್ಮು ಹಾಗೂ ಗಂಟಲ ಕೆರತ ನಿವಾರಣೆಗೆ ಈ ಉಪಾಯ ಮಾಡಲಾಗುತ್ತದೆ ಆದರೆ. ಈ ಲಕ್ಷಣಗಳು ಮುಂದುವರೆದರೆ ವೈದ್ಯರನ್ನು ಸಂಪರ್ಕಿಸಬೇಕು ಎಂದು ಸೂಚಿಸಲಾಗಿದೆ.