ರಾಯಪುರ: ದೇಶಾದ್ಯಂತ ಕರೋನವೈರಸ್ ಸೋಂಕು ಹೆಚ್ಚುತ್ತಿದ್ದು ಇತ್ತೀಚಿಗೆ ಅದು ಛತ್ತೀಸ್‌ಗಢದ ನಕ್ಸಲ್ ಕ್ಯಾಂಪ್‌ಗಳಿಗೂ ಲಗ್ಗೆ ಇಟ್ಟಿದೆ ಎಂದು ಹೇಳಲಾಗುತ್ತಿದೆ. ದಕ್ಷಿಣ ಬಸ್ತಾರ್‌ನ ಕಾಡುಗಳಲ್ಲಿ ವಿಷ ಆಹಾರ ಮತ್ತು ಕೊರೊನಾ ಸೋಂಕಿನಿಂದ ಹತ್ತಕ್ಕೂ ಹೆಚ್ಚು ನಕ್ಸಲರು ಸಾವನ್ನಪ್ಪಿದ್ದಾರೆ ಎಂದು ದಾಂತೇವಾಡ ಎಸ್‌ಪಿ ಅಭಿಷೇಕ್ ಪಲ್ಲವ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಕರೋನಾವೈರಸ್ ಸೋಂಕಿತ 100ಕ್ಕೂ ಹೆಚ್ಚು ನಕ್ಸಲೈಟ್‌ಗಳು: 
ಮೂಲಗಳಿಂದ ಪಡೆದ ಮಾಹಿತಿಯ ಪ್ರಕಾರ, ದಕ್ಷಿಣ ಬಸ್ತಾರ್‌ನ ಕಾಡುಗಳಲ್ಲಿ ಬಸ್ತಾರ್‌ನಲ್ಲಿರುವ ಕೊರೊನಾವೈರಸ್‌ನ ಸ್ಥಿತಿ ಭಯಾನಕವಾಗಿದೆ ಎಂದು ದಂತೇವಾಡ ಎಸ್‌ಪಿ ಡಾ. ಅಭಿಷೇಕ್ ಪಲ್ಲವ ಹೇಳಿದ್ದಾರೆ. 100 ಕ್ಕೂ ಹೆಚ್ಚು  ನಕ್ಸಲೈಟ್‌ಗಳು ಇಲ್ಲಿ ಕೋವಿಡ್ -19 (Covid 19) ನಿಂದ ಬಳಲುತ್ತಿದ್ದಾರೆ ಎಂದು ಎಂದವರು ಮಾಹಿತಿ ನೀಡಿದ್ದಾರೆ. 


ಇದನ್ನೂ ಓದಿ- ಬೆಂಗಳೂರು ತಲುಪಿದ ಕೇಂದ್ರದ 120 ಟನ್ ಆಕ್ಸಿಜನ್ ಹೊತ್ತ ವಿಶೇಷ ರೈಲು..!


ನಕ್ಸಲ್ ಶರಣಾದರೆ, ಚಿಕಿತ್ಸೆ ಲಭ್ಯ: ಬಸ್ತಾರ್ ಐಜಿ
ಈ ಬಗ್ಗೆ ಪ್ರತಿಕ್ರಿಯಿಸಿರುವ ಬಸ್ತಾರ್ ಇನ್ಸ್‌ಪೆಕ್ಟರ್ ಜನರಲ್ (ಐಜಿ) ಸುಂದರರಾಜ್ ಪಿ, 'ನಕ್ಸಲರಿಗೆ ಚಿಕಿತ್ಸೆ ನೀಡಲು ಸರ್ಕಾರ ವೈದ್ಯರನ್ನು ಕಳುಹಿಸಲು ಸಾಧ್ಯವಿಲ್ಲ. ಗಾಯಗೊಂಡ ನಕ್ಸಲರಿಗೆ ಪೊಲೀಸರು ಚಿಕಿತ್ಸೆ ನೀಡುತ್ತಾರೆ. ನಕ್ಸಲರು ಬಂದೂಕುಗಳಿಂದ ಸರ್ಕಾರದ ವಿರುದ್ಧ ಹೋರಾಡುತ್ತಿದ್ದಾರೆ. ಅವರು ಶರಣಾದರೆ, ಅವರಿಗೆ ಚಿಕಿತ್ಸೆ ನೀಡಲಾಗುತ್ತದೆ. ಆರೋಗ್ಯ ಸಿಬ್ಬಂದಿಯನ್ನು  ಅವರ ಬಳಿ ಕಳುಹಿಸುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.


ಇದನ್ನೂ ಓದಿ- Lockdown-ಲಾಕ್‌ಡೌನ್‌ನಲ್ಲಿ ನೀವು ಮನೆಯಲ್ಲಿಯೇ ಕುಳಿತು Alcohol ಖರೀದಿಸಲು ಈ ಆಪ್ಸ್ ಬಳಸಿ


ಛತ್ತೀಸ್‌ಗಢದಲ್ಲಿ 1.25 ಲಕ್ಷ ಸಕ್ರಿಯ ಪ್ರಕರಣಗಳಿವೆ:
ಛತ್ತೀಸ್‌ಗಢ ಆರೋಗ್ಯ ಇಲಾಖೆಯ ಪ್ರಕಾರ, ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 11867 ಜನರಲ್ಲಿ ಕರೋನಾವೈರಸ್ (Coronavirus) ಸೋಂಕು ದೃಢಪಟ್ಟಿದೆ. ಇದರ ನಂತರ, ವೈರಸ್ ಸೋಂಕಿತರ ಸಂಖ್ಯೆ ಈಗ 8,63,343 ಕ್ಕೆ ಏರಿದೆ.  ಛತ್ತೀಸ್‌ಗಢದಲ್ಲಿ ಇದುವರೆಗೆ 8 ಲಕ್ಷ 63 ಸಾವಿರ 343 ಜನರು ಸೋಂಕಿಗೆ ಒಳಗಾಗಿದ್ದಾರೆ ಎಂದು ರಾಜ್ಯ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಅವರಲ್ಲಿ, 7 ಲಕ್ಷ 27 ಸಾವಿರ 497 ರೋಗಿಗಳು ಸೋಂಕು ಮುಕ್ತರಾಗಿದ್ದಾರೆ. ಪ್ರಸ್ತುತ, ರಾಜ್ಯದಲ್ಲಿ 1 ಲಕ್ಷ 25 ಸಾವಿರ 104 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತು ಕರೋನಾ ಸೋಂಕಿನಿಂದಾಗಿ 10 ಸಾವಿರ 742 ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.