ನವದೆಹಲಿ: ಪ್ರಸ್ತುತ ವಿಶ್ವಾದ್ಯಂತ ತಲ್ಲಣ ಸೃಷ್ಟಿಸಿರುವ COVID-19  ಕರೋನಾ ವೈರಸ್ ಪ್ರಕರಣ ದಿನದಿಂದ ದಿನಕ್ಕೆ ಭಾರತದಲ್ಲೂ ಹೆಚ್ಚಾಗುತ್ತಿದೆ.  ಅಂತಹ ಪರಿಸ್ಥಿತಿಯಲ್ಲಿ, ನೀವು ಎಟಿಎಂನಿಂದ ಹಣವನ್ನು ಹಿಂಪಡೆಯಲು ಹೋದರೆ, ನೀವು ವಿಶೇಷವಾಗಿ ಜಾಗರೂಕರಾಗಿರಬೇಕು. ಈ ಸಮಯದಲ್ಲಿ, ಎಸ್‌ಬಿಐ ಎಟಿಎಂನಿಂದ ಹಣವನ್ನು ಹಿಂತೆಗೆದುಕೊಳ್ಳುವಾಗ ವಿಶೇಷ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲು ಸಲಹೆಯನ್ನು ನೀಡಿದೆ, ಅದನ್ನು ನೀವು ಪರಿಗಣಿಸಬೇಕು. ಇದರಿಂದಾಗಿ ನಿಮ್ಮ ಆರೋಗ್ಯಕ್ಕೂ ಒಳ್ಳೆಯದು.

COMMERCIAL BREAK
SCROLL TO CONTINUE READING

* ಎಟಿಎಂನಲ್ಲಿ ಯಾರಾದರೂ ಇದ್ದರೆ ಒಳಗೆ ಪ್ರವೆಶಿಸಬೇಡಿ:
ಕೊರೊನಾವೈರಸ್ನಿಂದ ತಪ್ಪಿಸಿಕೊಳ್ಳುವುದನ್ನು ಗಮನದಲ್ಲಿಟ್ಟುಕೊಂಡು, ಎಟಿಎಂ ಒಳಗೆ ಒಬ್ಬ ವ್ಯಕ್ತಿ ಇದ್ದರೆ, ಒಳಗೆ ಹೋಗಬೇಡಿ, ವ್ಯಕ್ತಿ ಎಟಿಎಂನಿಂದ ಹೊರಗೆ ಬರುವವರೆಗೂ ಕಾಯಿರಿ ಎಂದು ಎಸ್‌ಬಿಐ ಹೇಳಿದೆ.


* ಯಾವಾಗಲೂ ಸ್ವಚ್ಛತೆ ಕಾಯ್ದುಕೊಳ್ಳಿ:
ವಿಶೇಷ ಅಗತ್ಯಗಳಿಂದಾಗಿ ನೀವು ಎಟಿಎಂಗೆ ಹೋಗುತ್ತಿದ್ದರೆ, ನಂತರ ನಿಮ್ಮ ಕೈಗಳನ್ನು ತಕ್ಷಣವೇ ಸ್ವಚ್ಛಗೊಳಿಸಿ. 


ಗಮನಿಸಿ: ಎಟಿಎಂ ಕೋಣೆಯೊಳಗಿನ ವಸ್ತುಗಳನ್ನು ಮುಟ್ಟಬೇಡಿ. ಅದರಿಂದ ದೂರವಿರಿ


* ಫ್ಲೂ ಇದ್ದಲ್ಲಿ ಎಟಿಎಂಗೆ ಹೋಗಬೇಡಿ: 
ನಿಮಗೆ ಮೊದಲೇ ಜ್ವರ(ಫ್ಲೂ) ಇದ್ದರೆ ನೀವು ಎಟಿಎಂಗೆ ತೆರಳದಿರುವುದು ಉತ್ತಮ. ಇದರಿಂದ ಇನ್ನೊಬ್ಬರಿಗೂ ಫ್ಲೂ ಹರಡಬಹುದು. ನಿಮಗೆ ಹೆಚ್ಚು ಅಗತ್ಯವಿದೆಯೆಂದು ಭಾವಿಸಿದರೆ, ನೀವು ನಿಮ್ಮ ಕುಟುಂಬದ ಇತರ ಸದಸ್ಯರಿಂದ ಹಣ ತರಿಸಿಕೊಳ್ಳಬಹುದು. 


* ಬಾಯಿ ಮತ್ತು ಮೂಗು ಮುಚ್ಚಿ:
ಕೆಮ್ಮುವಾಗ ಅಥವಾ ಸೀನುವಾಗ, ನಿಮ್ಮ ಬಾಯಿ ಮತ್ತು ಮೂಗನ್ನು ಕರವಸ್ತ್ರ ಅಥವಾ ನಿಮ್ಮ ತೋಳಿನಿಂದ ಮುಚ್ಚಿ. ನೀವು ಬಯಸಿದರೆ ನೀವು ಟಿಶ್ಯೂ ಪೇಪರ್ ಅನ್ನು ನಿಮ್ಮೊಂದಿಗೆ ಇಟ್ಟುಕೊಳ್ಳಬಹುದು. ಇದರೊಂದಿಗೆ ನೀವು ಇತರರ ಸುರಕ್ಷತೆಯ ಬಗ್ಗೆಯೂ ಕಾಳಜಿ ವಹಿಸುತ್ತೀರಿ.


* ಎಟಿಎಂ ಒಳಗೆ ಇದನ್ನು ಮಾಡಬೇಡಿ:
ನೀವು ಎಟಿಎಂಗೆ ಹೋಗುತ್ತಿದ್ದರೆ, ಬಳಸಿದ ಟಿಶ್ಯೂ ಪೇಪರ್ ಅಥವಾ ಮಾಸ್ಕ್ ಅನ್ನು ಎಟಿಎಂ ಒಳಗೆ ಒಯ್ಯಬೇಡಿ. 


* ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳನ್ನು ಬಳಸಿ:
ನಗದು ವಹಿವಾಟಿನ ಬದಲಿಗೆ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳನ್ನು ಬಳಸುವುದು ಉತ್ತಮ. ಎಸ್‌ಬಿಐ ಸಲಹೆಯ ಪ್ರಕಾರ, ನೀವು ಎಸ್‌ಬಿಐ ಯೋನೊ (YONO) ಅಪ್ಲಿಕೇಶನ್, ಇಂಟರ್ನೆಟ್ ಬ್ಯಾಂಕಿಂಗ್, ಭೀಮಾ ಎಸ್‌ಬಿಐ ಇತ್ಯಾದಿಗಳನ್ನು ಬಳಸಬಹುದು