ನವದೆಹಲಿ : CoronaVirus Third Wave: ಅಂದಹಾಗೆ , ಭಾರತದಲ್ಲಿ ಹೊಸ ಕೊರೊನಾ ವೈರಸ್ (Coronavirus) ಪ್ರಕರಣಗಳು ಗಣನೀಯವಾಗಿ ಕಡಿಮೆಯಾಗಿವೆ. ಮಂಗಳವಾರ ಬೆಳಿಗ್ಗೆ ಬಿಡುಗಡೆಯಾದ ಡಾಟಾ ಪ್ರಕಾರ, ಕಳೆದ 24 ಗಂಟೆಗಳಲ್ಲಿ 18,346 ಹೊಸ ಪ್ರಕರಣಗಳು ವರದಿಯಾಗಿವೆ. ಇದು ಕಳೆದ 209 ದಿನಗಳಲ್ಲಿ ಅತಿ ಕಡಿಮೆ ಕೊರೊನಾ ಪ್ರಕರಣವಾಗಿದೆ. ಇದೀಗ ಕರೋನಾ (COVID-19) ಬಗ್ಗೆ, ಏಕಾಏಕಿ ಜನ ಅಸಡ್ಡೆ ತೋರುತ್ತಿರುವುದು ಕೂಡ ಕಂಡು ಬರುತ್ತಿದೆ.  ಹಬ್ಬದ ಸೀಸನ್ ಬೇರೆ ಕೆಲವೇ ದಿನಗಳಲ್ಲಿ ಆರಂಭವಾಗುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (  ICMR) ಹೊಸ ಎಚ್ಚರಿಕೆಯನ್ನು ನೀಡಿದೆ ಮತ್ತು ಮೂರನೇ ತರಂಗದ ಬಗ್ಗೆ ಅಸಡ್ಡೆ ತೋರುವುದು ಸರಿಯಲ್ಲ ಎಂದು ಹೇಳಿದೆ. ಈಗಲೇ ಮುನ್ನೆಚ್ಚರಿಕೆ ವಹಿಸದಿದ್ದಲ್ಲಿ, ಮತ್ತೆ ಲಾಕ್‌ಡೌನ್ (Lockdown) ವಿಧಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ. 


COMMERCIAL BREAK
SCROLL TO CONTINUE READING

ಭಾರತದಲ್ಲಿ ಫೆಬ್ರವರಿ-ಮಾರ್ಚ್‌ನಲ್ಲಿ ಮತ್ತೆ ಪ್ರಕರಣ ಹೆಚ್ಚಾಗುವ ಸಾಧ್ಯತೆ : 
ಐಸಿಎಂಆರ್ (ICMR) ಮತ್ತು ಲಂಡನ್‌ನಇಂಪೀರಿಯಲ್ ಕಾಲೇಜಿನ ಸಂಶೋಧಕರು 'revenge travel ನಿಂದ ಭಾರತದಲ್ಲಿ COVID-19 ಮೂರನೇ ಅಲೆಯ ಸ್ಥಿತಿ ಮತ್ತಷ್ಟು ಹದಗೆಡಬಹುದು ಎಂದು ಅಧ್ಯಯನವೊಂದರಲ್ಲಿ ತಿಳಿಸಲಾಗಿದೆ. ಈ ಅಧ್ಯಯನದಲ್ಲಿ ಮುಂದಿನ ವರ್ಷ ಫೆಬ್ರವರಿ ಮತ್ತು ಮಾರ್ಚ್ ನಡುವೆ ಭಾರತದಲ್ಲಿ ಕರೋನಾ (Coronavirus) ಪ್ರಕರಣ ಅಧಿಕವಾಗುವ ಎಲ್ಲಾ ಸಾಧ್ಯತೆಗಳಿವೆ ಎನ್ನಲಾಗಿದೆ.  ಕಳೆದ ಒಂದೂವರೆ ವರ್ಷಗಳಿಂದ ತಮ್ಮ ಮನೆಯೊಳಗಿದ್ದ ಜನರು, ಈಗ ಪ್ರವಾಸೋದ್ಯಮಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಸೇರುವುದರಿಂದ ವೈರಸ್ (Virus) ಹರಡುವಿಕೆಗೆ ಕಾರಣವಾಗಬಹುದು. 


ಇದನ್ನೂ ಓದಿ :  Indian Railway Recruitment: 4,000ಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿ ಸಲ್ಲಿಸಿ, ಇಲ್ಲಿದೆ ವಿವರ


ಈ ಕಾರಣದಿಂದಲೇ ಹೆಚ್ಚುತ್ತಿದೆ ಚಿಂತೆ : 
ಅಂತಾರಾಜ್ಯ ಪ್ರಯಾಣದಲ್ಲಿ ನೀಡುವ ವಿನಾಯಿತಿಯನ್ನು ನೀಡುತ್ತಿರುವುದು ಕರೋನಾ ಮೂರನೇ ಅಲೆಗೆ (Corona third wave) ಕಾರಣವಾಗಬಹುದು ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. ಪ್ರವಾಸೋದ್ಯಮ,  ಸಾಮಾಜಿಕ, ರಾಜಕೀಯ ಅಥವಾ ಧಾರ್ಮಿಕ ಕಾರ್ಯಕ್ರಮಗಳು ಮೂರನೇ ಅಲೆ  ಹರಡಲು ಕಾರಣವಾಗಬಹುದು ಎನ್ನಲಾಗಿದೆ. ಅಧ್ಯಯನದ ಪ್ರಕಾರ, ಈ ಹಬ್ಬದ ಕಾಲದಲ್ಲಿ ಮೂರನೇ ಅಲೆಯ ಅಪಾಯ  47% ಹೆಚ್ಚಾಗಬಹುದು. ಇದು ಮಾತ್ರವಲ್ಲ, ಎರಡು ವಾರಗಳ ಮೊದಲೇ ಮೂರನೆ ಅಲೆ ಕಾಣಿಸಿಕೊಳ್ಳಲೂಬಹುದು ಎನ್ನಲಾಗಿದೆ. 


ಮಾರ್ಗಸೂಚಿಗಳನ್ನು ತಪ್ಪದೇ ಅನುಸರಿಸಿ, ನಿರ್ಲಕ್ಷ್ಯ ಬೇಡ : 
ಪ್ರವಾಸಿಗರು ಜವಾಬ್ದಾರಿಯುತವಾಗಿ ಪ್ರಯಾಣಿಸಬೇಕು ಮತ್ತು ಕೋವಿಡ್ ನಿಯಮಗಳನ್ನು (COVID Guidelines) ಅನುಸರಿಸಬೇಕು ಎಂದು ಸಂಶೋಧಕರು ತಿಳಿಸಿದ್ದಾರೆ. ಪ್ರಯಾಣದ ಸಮಯದಲ್ಲಿ, ಇತ್ತೀಚಿನ ಕೋವಿಡ್ ನೆಗೆಟಿವ್ ಪರೀಕ್ಷಾ ವರದಿಯ ಜೊತೆಗೆ, ಲಸಿಕೆಯ ಪುರಾವೆಗಳನ್ನು (Vaccination certificate) ಸಹ ಒಯ್ಯಬೇಕು. ಇದರೊಂದಿಗೆ, ಪ್ರಯಾಣಕ್ಕೆ ಸಂಬಂಧಿಸಿದ ಅಪಾಯಗಳನ್ನು ಹೇಗೆ ಕಡಿಮೆ ಮಾಡಬಹುದು ಎಂಬುದರ ಕುರಿತು ರಾಜ್ಯಗಳಿಗೆ ಸಲಹೆ ನೀಡಬೇಕು.


ಇದನ್ನೂ ಓದಿ :  Alert : ಹಬ್ಬದ ಋತುವಿನಲ್ಲಿ online shopping ಮಾಡುವ ಮುನ್ನ ಜೋಪಾನ..! ಈ ವಿಚಾರಗಳ ಬಗ್ಗೆ ಇರಲಿ ಎಚ್ಚರ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.