ನವದೆಹಲಿ: ಜಾಗತಿಕ ಮಹಾಮಾರಿ ಕೋವಿಡ್ -19 ನಿಂದ ಉದ್ಭವಿಸಿರುವ ಪರಿಸ್ಥಿತಿಯ ಹಿನ್ನೆಲೆ ಆಧಾರ್-ಪ್ಯಾನ್ ಜೋಡಣೆಯ ಗಡುವನ್ನು ವಿಸ್ತರಿಸಲಾಗಿದೆ. ದೇಶಾದ್ಯಂತ ಕೊರೊನಾ ವೈರಸ್ ಪ್ರಕೋಪವನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಪ್ಯಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್ ಜೊತೆಗೆ ಜೋಡಿಸುವ ಅಂತಿಮ ಗಡುವನ್ನು ಮುಂದಿನ ವರ್ಷ ಮಾರ್ಚ್ 31ರವರೆಗೆ ವಿಸ್ತರಿಸಿದೆ. ಈ ಕುರಿತು ಆದಾಯ ತೆರಿಗೆ ಇಲಾಖೆ ಸೋಮಾವಾರ ಮಾಹಿತಿ ನೀಡಿದೆ.



COMMERCIAL BREAK
SCROLL TO CONTINUE READING

ಹೀಗಾಗಿ ಇಲಾಖೆಯ ಪ್ರಕಾರ ಇನ್ಮುಂದೆ ಮಾರ್ಚ್ 31, 2021ರವರೆಗೆ ನೀವು ನಿಮ್ಮ ಪ್ಯಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್ ಜೊತೆಗೆ ಲಿಂಕ್ ಮಾಡಬಹುದಾಗಿದೆ. ಇದಕ್ಕೂ ಮೊದಲು ಕೂಡ ಹಲವು ಬಾರಿ ಈ ಗಡುವನ್ನು ವಿಸ್ತರಿಸಲಾಗಿದೆ. 


ಈ ಬಾರಿ ಕೊರೊನಾ ಮಹಾಮಾರಿ ಹಾಗೂ ಇತರ ಯಾವುದೇ ಕಾರಣದಿಂದ ತಮ್ಮ ಪ್ಯಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್ ಗೆ ಲಿಂಕ್ ಮಾಡದೆ ಇರುವ ನಾಗರಿಕರನ್ನು ಗಮನದಲ್ಲಿಟ್ಟುಒಂದು ಸಿಬಿಡಿಟಿ ಈ ನಿರ್ಧಾರ ಕೈಗೊಂಡಿದೆ.


ಇದಕ್ಕೂ ಮೊದಲು ಪ್ಯಾನ್ ಮತ್ತು ಆಧಾರ್ ಕಾರ್ಡ್ ಜೋಡಿಸಲು ಜೂನ್ 30 ಅಂತಿಮ ಗಡುವು ನೀಡಲಾಗಿತ್ತು. ಅಷ್ಟೇ ಅಲ್ಲ ಜೂನ್ 30ರವರೆಗೆ ಈ ಕೆಲಸ ಮಾಡದೆ ಇರುವ ಪ್ಯಾನ್ ಕಾರ್ಡ್ ಧಾರಕರಿಗೆ 10 ಸಾವಿರ ದಂಡ ವಿಧಿಸುವ ಪ್ರಸ್ತಾವನೆ ಕೂಡ ಮಾಡಲಾಗಿತ್ತು.