Coronavirus: Work From Homeಗಾಗಿ ಈ ಉಚಿತ ಟೂಲ್ಸ್ ಗಳ ಬಳಕೆ ಮಾಡಿ
ಕೊರೊನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಒಂದು ವೇಳೆ ನಿಮಗೂ ಕೂಡ ನಿಮ್ಮ ಕಂಪನಿ ಮನೆಯಿಂದಲೆ ಕಾರ್ಯನಿರ್ವಹಿಸಲು ಸೂಚನೆ ನೀಡಿದ್ದರೆ, ಕೆಲ ಆನ್ಲೈನ್ ಉಚಿತ ಟೂಲ್ ಗಳು ನಿಮ್ಮ work from home ಅನುಭವವನ್ನು ಸುಲಭಗೊಲಿಸಲಿವೆ. ಇವುಗಳ ಬಳಕೆಯಿಂದ ನೀವು ನಿಮ್ಮ ಕೆಲಸವನ್ನು ಇನ್ನಷ್ಟು ಉತ್ತಮವಾಗಿ ಮಾಡಬಹುದು.
ಕೊರೊನಾ ವೈರಸ್ ನಿಂದ ಹೆಚ್ಚಾಗುತ್ತಿರುವ ಪ್ರಕರಣಗಳ ಹಿನ್ನೆಲೆ ಭಾರತ ಸೇರಿದಂತೆ ವಿಶ್ವಾದ್ಯಂತ ಕೊರೊನಾ ಸೋಂಕಿಗೆ ಗುರಿಯಾಗಿರುವ ದೇಶಗಳಲ್ಲಿ ಜನರು ಮನೆಯಿಂದ ಹೊರಬರಲು ಭಯಪಡುತ್ತಿದ್ದಾರೆ. ಈ ದೇಶಗಳಲ್ಲಿ ಸರ್ಕಾರ ಸೇರಿದಂತೆ WHO ಕೂಡ ಜನ ಸಂದಣಿ ಇರುವ ಪ್ರದೇಶಗಳಿಂದ ದೂರವಿರಲು ತಮ್ಮ ನಾಗರಿಕರಿಗೆ ಸೂಚಿಸಿವೆ. ಇದೆ ಕಾರಣದಿಂದ ಹಲವು ದೇಶಗಳಲ್ಲಿ ಮಾಲ್, ಸಿನೆಮಾ ಹಾಲ್, ಶಾಲೆಗಳು ಹಾಗೂ ಕಾಲೇಜುಗಳನ್ನು ಬಂದ್ ಮಾಡಲಾಗಿದೆ. ಖಾಸಗಿ ಸಂಸ್ಥೆಗಳಲ್ಲಿಯೂ ಕೂಡ ನೌಕರರನ್ನು ಮನೆಯಿಂದಲೇ ಕೆಲಸ ಮಾಡಲು ಸೂಚಿಸಲಾಗಿದೆ. ಕೊರೊನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಒಂದು ವೇಳೆ ನಿಮಗೂ ಕೂಡ ನಿಮ್ಮ ಕಂಪನಿ ಮನೆಯಿಂದಲೆ ಕಾರ್ಯನಿರ್ವಹಿಸಲು ಸೂಚನೆ ನೀಡಿದ್ದರೆ, ಕೆಲ ಆನ್ಲೈನ್ ಉಚಿತ ಟೂಲ್ ಗಳು ನಿಮ್ಮ work from home ಅನುಭವವನ್ನು ಸುಲಭಗೊಲಿಸಲಿವೆ. ಇವುಗಳ ಬಳಕೆಯಿಂದ ನೀವು ನಿಮ್ಮ ಕೆಲಸವನ್ನು ಇನ್ನಷ್ಟು ಉತ್ತಮವಾಗಿ ಮಾಡಬಹುದು. ಹಾಗಾದರೆ ಬನ್ನಿ ಯಾವ ಉಚಿತ ಆಪ್ ಹಾಗೂ ಉಚಿತ ಸಾಫ್ಟ್ವೇರ್ ಗಳನ್ನು ಬಳಸಿ ನೀವು work from home ಅನ್ನು ಸುಲಭವನ್ನಾಗಿಸಬಹುದು ನೋಡೋಣ.
ಬಹುತೇಕ ಕಂಪನಿಗಳಲ್ಲಿ ಆಂತರಿಕ ಸಂಪರ್ಕಕ್ಕಾಗಿ ಆಪ್ ಇರುತ್ತವೆ. ಆದರೆ, ಒಂದು ವೇಳೆ ನೀವು ವರ್ಕ್ ಫ್ರಾಮ್ ಹೋಮ್ ಮಾಡುತ್ತಿದ್ದಾರೆ GOOGLE HANGOUT ನಿಮಗಾಗಿ ಒಂದು ಉತ್ತಮ ಆಯ್ಕೆಯಾಗಿರಲಿದೆ. ಈ ಆಪ್ ಅನ್ನು ಬಳಸಿ ನೀವು ಕೆಲಸದ ವೇಳೆ ನಿಮ್ಮ ಕಚೇರಿಯ ಇತರೆ ನಿಮ್ಮ ಸಹಪಾತಿಗಳ ಜೊತೆಗೆ ಸಂಪರ್ಕ ಸುಲಭವನ್ನಾಗಿಸಬಹುದು. ಹ್ಯಾಂಗ್ ಔಟ್ ನಲ್ಲಿ ಒಂದು ವೇಳೆ ನೀವು ನಿಮ್ಮ ಕಚೇರಿಯ ಅಕೌಂಟ್ ನಿಂದ ಲಾಗಿನ್ ಆದರೆ, ನಿಮ್ಮ ಎಲ್ಲ ಸಂಪರ್ಕಗಳು ಖುದ್ದಾಗಿ ಕನೆಕ್ಟ್ ಮತ್ತು ಸಿಂಕ್ ಆಗಲಿವೆ. ಇದರ ಸಹಾಯದಿಂದ ನೀವು ಸುಲಭವಾಗಿ ನಿಮ್ಮ ಕೋ ವರ್ಕರ್ಸ್ ಗಳಿಗೆ ಮೆಸೇಜ್ ಕಳುಹಿಸಿ ನಿಮ್ಮ ಕೆಲಸವನ್ನು ಮುಂದುವರೆಸಬಹುದಾಗಿದೆ.
ಇದನ್ನು ಹೊರತುಪಡಿಸಿದರೆ ಹೆಚ್ಚಾಗಿ ಬಳಸಲಾಗುವ ಫ್ರೀ ಆಪ್ ಅಂದರೆ SLACK. ಇದೂ ಕೂಡ ಗೂಗಲ್ ಹ್ಯಾಂಗ್ ಔಟ್ ರೀತಿಯೇ ಡೆಸ್ಕ್ ಟಾಪ್ ಆಗೂ ಮೊಬೈಲ್ ಎರಡರಲ್ಲಿಯೂ ಕೂಡ ಸುಲಭವಾಗಿ ಲಭ್ಯವಿದೆ. ಇದರಿಂದ ನೀವು ನಿಮ್ಮ ಆಫಿಸ್ ನಲ್ಲಿ ಕೆಲಸ ಮಾಡುವ ಸಹವರ್ತಿಗಳ ಜೊತೆ ಪರ್ಸನಲ್ ಚಾಟ್ ಕೂಡ ಮಾಡಬಹುದು. ಇದರಲ್ಲಿ ವಿವಿಧ ವಿಭಾಗಗಳು, ತಂಡಗಳ ಗ್ರೂಪ್ ಕೂಡ ಇರಲಿವೆ. ತಂಡದ ಕಮ್ಯೂನಿಕೇಶನ್ ಗೆ ಇದೊಂದು ಉತ್ತಮ ಆಪ್ ಆಗಿದೆ.
Facebook ನ ವರ್ಕ್ ಪ್ಲೇಸ್ ಕೂಡ work from home ಗಾಗಿ ಒಂದು ಉತ್ತಮ ಆಯ್ಕೆಯಾಗಲಿದೆ. ವರ್ಕ್ ಪ್ಲೇಸ್ ನಲ್ಲಿಯೂ ಕೂಡ ನಿಮಗೆ ಗ್ರೂಪ್, team, ಪರ್ಸನಲ್ ಚಾಟ್ ಆಯ್ಕೆಗಳಿವೆ. ಇತರೆ ಆಪ್ ಗಳ ಹೋಲಿಕೆಯಲ್ಲಿ ಈ ಆಪ್ ತುಂಬಾ ಯುಸರ್ ಫ್ರೆಂಡ್ಲಿ ಆಪ್ ಆಗಿದೆ. ಏಕೆಂದರೆ, Facebook ಮಾದರಿಯಲ್ಲಿಯೇ ಇದರಲ್ಲಿ ನೀವು ಸಂಪರ್ಕ ಏರ್ಪಡಿಸಬಹುದು. ಹೀಗಾಗಿ ಇದನ್ನು ನೀವು ಸುಲಭವಾಗಿ ಬಳಸಬಹುದು.
work list ಅಥವಾ memo ಗಾಗಿ ನೀವು ಯಾವುದಾದರೊಂದು ಆಪ್ ಬಳಸಲು ಬಯಸುತ್ತಿದ್ದರೆ, ಗೂಗಲ್ ಕೀಪ್ ಹಾಗೂ Trello ಉತ್ತಮ ಆಯ್ಕೆಗಲಾಗಿವೆ. ಗೂಗಲ್ ನ ಕೀಪ್ ಆಪ್ ಬಳಕೆಯಲ್ಲಿ ಸುಲಭವಾಗಿದೆ. ಇನ್ನೊಂದೆಡೆ work list ತಯಾರಿಸಲು trello ನಿಮಗೆ ಹಲವು ಆಪ್ಶನ್ ಗಳನ್ನು ನೀಡುತ್ತದೆ. ಇವುಗಳಲ್ಲದೆ Work From Homeಗಾಗಿ ನೀವು Google Sheets, Google Docs ಹಾಗೂ Google Slider ಗಳು ಕೂಡ ಉತ್ತಮ ಆಯ್ಕೆಗಳಾಗಿವೆ.