ಲಕ್ನೋ: ಕರೋನಾ ಸೋಂಕಿನ ಪ್ರಕರಣಗಳು ದಿನೇ ದಿನೇ ತಾರಕಕ್ಕೇರುತ್ತಿದ್ದು ಸೋಂಕನ್ನು ನಿಯಂತ್ರಿಸಲು ರಾಜ್ಯ ಸರ್ಕಾರಗಳು ವಾರಾಂತ್ಯದ ಕರ್ಫ್ಯೂನಂತಹ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ. ಕೊರೊನಾವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದಲ್ಲೂ ವೀಕೆಂಡ್ ಕರ್ಫ್ಯೂ ವಿಧಿಸಲಾಗಿದೆ. 


COMMERCIAL BREAK
SCROLL TO CONTINUE READING

ಈ ಕರ್ಫ್ಯೂ ಏಪ್ರಿಲ್ 23 ಶುಕ್ರವಾರದಿಂದ ಸೋಮವಾರದವರೆಗೆ ಜಾರಿಗೆಯಲ್ಲಿರಲಿದೆ. ಈ ಸಮಯದಲ್ಲಿ ಜನರು ಅನಗತ್ಯವಾಗಿ ಮನೆಯಿಂದ ಹೊರಗೆ ಹೋಗಲು ಅನುಮತಿಸುವುದಿಲ್ಲ. ಉತ್ತರ ಪ್ರದೇಶದಲ್ಲಿ, ವಾರಾಂತ್ಯದ ಕರ್ಫ್ಯೂ (Weekend Curfew) ಶುಕ್ರವಾರ ರಾತ್ರಿ 8 ರಿಂದ ಸೋಮವಾರ ಬೆಳಿಗ್ಗೆ 7 ರವರೆಗೆ ಜಾರಿಯಲ್ಲಿರಲಿದೆ. 


ಇದನ್ನೂ ಓದಿ - Oxygen Level In Body - ಶರೀರದಲ್ಲಿ ಯಾವ ರೀತಿ Oxygen ಹೀರುತ್ತಿದೆ Coronavirus ಗೊತ್ತಾ? ವೈರಸ್ ನ ಈ ರೂಪಾಂತರಿಗೆ ಬೆಚ್ಚಿಬಿದ್ದ ವೈದ್ಯರು


ಉತ್ತರ ಪ್ರದೇಶದಲ್ಲಿ ಈ ನಿರ್ಬಂಧಗಳು ಮುಂದುವರೆಯಲಿವೆ: 
ಉತ್ತರ ಪ್ರದೇಶದಲ್ಲಿ (Uttar Pradesh) ಶನಿವಾರ ಮತ್ತು ಭಾನುವಾರ ಮದುವೆಗೆ ಅವಕಾಶವಿದೆ, ಆದರೆ ಅದಕ್ಕೆ ಕೆಲವು ನಿರ್ಬಂಧಗಳನ್ನು ವಿಧಿಸಲಾಗಿದೆ. ಮದುವೆ ಸಭಾಂಗಣದಂತಹ ಮುಚ್ಚಿದ ಸ್ಥಳಗಳಲ್ಲಿ ನಡೆಯುತ್ತಿದ್ದರೆ ಕೇವಲ 50 ಜನರು ಮದುವೆಗೆ ಹಾಜರಾಗಲು ಸಾಧ್ಯವಾಗುತ್ತದೆ, ಆದರೆ ಮುಕ್ತ ಪ್ರದೇಶಗಳಲ್ಲಿ ಜರುಗುವ ವಿವಾಹಗಳಿಗೆ 100 ಅತಿಥಿಗಳನ್ನು ಆಹ್ವಾನಿಸಬಹುದು. ಇದಲ್ಲದೆ, ಪ್ರತಿಯೊಬ್ಬರೂ COVID-19 ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿದೆ. 


ಇದನ್ನೂ ಓದಿ - Covid-19 Crisis: ಮಹಾರಾಷ್ಟ್ರದಲ್ಲಿ ಒಂದೇ ದಿನದಲ್ಲಿ 773 ಜನರು ಸಾವು, 66 ಸಾವಿರಕ್ಕೂ ಅಧಿಕ ಪ್ರಕರಣ ದಾಖಲು


ಪೂರ್ವ ನಿರ್ಧಾರಿತ ಎಲ್ಲಾ ಪರೀಕ್ಷೆಗಳನ್ನು ವಾರಾಂತ್ಯದ ಕರ್ಫ್ಯೂ ಸಮಯದಲ್ಲಿ ನಡೆಸಲಾಗುವುದು ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಆದಾಗ್ಯೂ, ಅಭ್ಯರ್ಥಿಗಳು ಪರೀಕ್ಷಾ ಕೇಂದ್ರವನ್ನು ತಲುಪಲು ಐಕಾರ್ಡ್ ತೋರಿಸಬೇಕಾಗುತ್ತದೆ. ಅದೇ ಸಮಯದಲ್ಲಿ, ಸಾರ್ವಜನಿಕ ಸಾರಿಗೆಯನ್ನು 50 ಪ್ರತಿಶತ ಸಾಮರ್ಥ್ಯದೊಂದಿಗೆ ಚಲಾಯಿಸಲು ಅನುಮತಿಸಲಾಗಿದೆ.


ವೈದ್ಯಕೀಯ ಸೇವೆಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ : 
ವಾರಾಂತ್ಯದ ಕರ್ಫ್ಯೂ ಸಮಯದಲ್ಲಿ ವೈದ್ಯಕೀಯ ಮತ್ತು ಆರೋಗ್ಯ ಸಂಬಂಧಿತ ತುರ್ತು ಸೇವೆಗಳು ಮುಕ್ತವಾಗಿರುತ್ತವೆ ಎಂದು ಉತ್ತರಪ್ರದೇಶ ಸರ್ಕಾರ ಸ್ಪಷ್ಟಪಡಿಸಿದೆ. ಅದೇ ಸಮಯದಲ್ಲಿ, ಕೊನೆಯ ವಿಧಿಗಳಿಗಾಗಿ ಶವಸಂಸ್ಕಾರ ಅಥವಾ ಸ್ಮಶಾನಕ್ಕೆ ಹೋಗಲು 20 ಕ್ಕೂ ಹೆಚ್ಚು ಜನರನ್ನು ಅನುಮತಿಸಲಾಗುವುದಿಲ್ಲ. ವಾರಾಂತ್ಯದ ಕರ್ಫ್ಯೂ ಜೊತೆಗೆ, COVID-19 ನ 500 ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿರುವ ಪ್ರದೇಶಗಳಲ್ಲಿ ಪ್ರತಿದಿನ ರಾತ್ರಿ 8 ರಿಂದ ಬೆಳಿಗ್ಗೆ 7 ರವರೆಗೆ ರಾತ್ರಿ ಕರ್ಫ್ಯೂ ಮುಂದುವರಿಯುತ್ತದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.