ನವದೆಹಲಿ: ಕೊರೊನಾ ವೈರಸ್ ಕುರಿತು ಪಸರಿಸಿರುವ ಭ್ರಾಂತಿಯನ್ನು ದೂರಗೊಳಿಸಲು ಇದೀಗ ಮತ್ತೊಮ್ಮೆ ವಿಶ್ವ ಆರೋಗ್ಯ ಸಂಸ್ಥೆ ಮುಂದೆ ಬಂದಿದೆ. ಈ ಕುರಿತು ಶುಕ್ರವಾರ ಹೇಳಿಕೆ ಪ್ರಕಟಿಸಿರುವ ವಿಶ್ವ ಆರೋಗ್ಯ ಸಂಘಟನೆ, ಕೊವಿಡ್ 19 ಗೆ ಕಾರಣವಾಗಿರುವ ವೈರಸ್ ಪ್ರಮುಖವಾಗಿ ಶ್ವಾಸದ ಹನಿಗಳು ಹಾಗೂ ನಿಕಟ ಸಂಪರ್ಕದಿಂದ ಮಾತ್ರ ಹರಡುತ್ತದೆ ಮತ್ತು ಗಾಳಿಯಲ್ಲಿ ಇದು ಹೆಚ್ಚು ಕಾಲ ಬದುಕುವುದಿಲ್ಲ ಎಂದು ಹೇಳಿದೆ.


COMMERCIAL BREAK
SCROLL TO CONTINUE READING

ಕೊರೊನಾ ಸೋಂಕಿಗೆ ಕಾರಣವಾಗಿರುವ ವೈರಸ್ ರೋಗಿಯ ಶ್ವಾಸದಿಂದ ಪಸರಿಸುವ ಹನಿಗಳಿಂದ ಹರಡುತ್ತದೆ ಮತ್ತು ಇದು ಗಾಳಿಯಲ್ಲಿ ಹಲವು ಗಂಟೆಗಳ ಕಾಲ ಬದುಕುತ್ತದೆ ಎಂಬ ಗುಲ್ಲೆಬ್ಬಿಸಲಾಗಿದೆ. ಈ ಕುರಿತು ಶುಕ್ರವಾರ ಈ ಕುರಿತು ಸ್ಪಷ್ಟನೆ ನೀಡಿರುವ WHO, ಇದನ್ನು ಅರ್ಧ ಸತ್ಯ ಎಂದು ಹೇಳಿದ್ದು, ಈ ವೈರಸ್ ಗಾಳಿಯಲ್ಲಿ ಹೆಚ್ಚುಕಾಲ ಬಳುಕಲು ಸಾಧ್ಯವಿಲ್ಲ ಎಂದಿದೆ.


ಇದಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿರುವ WHO ಶ್ವಾಸ ಕೋಶದ ಸೋಂಕಿನ ವಿಭಿನ್ನ ಆಕಾರದ ಸೂಕ್ಸ್ಮ ಹನಿಗಳ ಮಾಧ್ಯಮದಿಂದ ಇದು ಹರಡುವ ಸಾಧ್ಯತೆ ಇದೆ. ಸೀನು ಇತ್ಯಾದಿಗಳಿಂದ ಈ ವೈರಸ್ ಪಸರಿಸುವ ಸಾಧ್ಯತೆ ಇದ್ದು , ಈ ಸೋಂಕಿನಿಂದ ಬಳಲುತ್ತಿರುವ ವ್ಯಕ್ತಿಯ ನಿಕಟ ಸಂಪರ್ಕದಿಂದ ಮಾತ್ರ ಇದು ಸಾಧ್ಯ ಎಂದು ಸಂಘಟನೆ ಸ್ಪಷ್ಟಪಡಿಸಿದೆ. ಈ ಸೋಂಕಿಗೆ ಗುರಿಯಾದ ವ್ಯಕ್ತಿಯ ಒಂದು ಮೀಟರ್ ಪರದಿಯ ಒಳಗಡೆ ನೀವು ಇದ್ದರೆ, ಆ ವ್ಯಕ್ತಿಯ ಶ್ವಾಸ ಹಾಗೂ ಸೀನಿನಲ್ಲಿ ಈ ವೈರಸ್ ನ ಲಕ್ಷಣಗಳಿರುತ್ತವೆ. ಇಂತಹ ಸಂದರ್ಭಗಳಲ್ಲಿ ಒಂದು ವೇಳೆ ಆ ಸೋಂಕಿತ ವ್ಯಕ್ತಿಯ ಹನಿಗಳು ನಿಮ್ಮ ಮೈಗೆ ತಗುಲಿದರೆ, ವೈರಸ್ ನಿಮ್ಮ ದೇಹ ಪ್ರವೇಶಿಸುವ ಸಾಧ್ಯ್ಯತೆ ಹೆಚ್ಚಾಗಿರುತ್ತದೆ ಎಂದು WHO ಹೇಳಿದೆ. ಅಷ್ಟೇ ಅಲ್ಲ ಈ ಹನಿಗಳ ಆಕಾರ ಸಾಮಾನ್ಯವಾಗಿ 5-10 ಮೈಕ್ರಾನ್ ಗಳಷ್ಟು ಇರುತ್ತದೆ ಎಂದು ಹೇಳಿದೆ.


ಈ ಕುರಿತು WHO ವರದಿಯನ್ನೂ ಸಹ ಸಿದ್ಧಪಡಿಸಿದ್ದು, ವರದಿಯಲ್ಲಿ ಸಂಕ್ರಮಿತ ವ್ಯಕ್ತಿಯ ಹತ್ತಿರದಲ್ಲಿರುವ ಮೇಲ್ಮೈ ಅಥವಾ ವಸ್ತುಗಳನ್ನು ಸ್ಪರ್ಶಿಸುವುದರಿಂದಲೂ ಕೂಡ ಈ ಸೋಂಕು ಹರಡುವ ಸಾಧ್ಯತೆ ಇರುತ್ತದೆ ಎಂದು ಹೇಳಿದೆ. ಗಾಳಿಯಲ್ಲಿ ಪಸರಿಸುವ ಸೋಂಕು 'ಡ್ರಾಪ್ ಲೆಟ್ಸ್ ಟ್ರಾನ್ಸ್ ಮಿಷನ್'ಗಿಂತ ಭಿನ್ನವಾಗಿರುತ್ತದೆ. ಏಕೆಂದರೆ ಇದು ಸೂಕ್ಸ್ಮ ಹನಿಗಳ ನಡುವೆ ಜೀವಾನುಗಳ ಅಸ್ತಿತ್ವವನ್ನು ಎತ್ತಿ ತೋರಿಸುತ್ತದೆ ಹಾಗೂ ಜೀವಾಣುಗಳು ಸಾಮಾನ್ಯವಾಗಿ ಆಕಾರದಲ್ಲಿ 5 ಮೈಕ್ರಾನ್ ಗಿಂತ ಕಡಿಮೆ ಗಾತ್ರಗಳ ಕಾಣದ ರೂಪದಲ್ಲಿರುತ್ತವೆ ಎಂದು ವರದಿಯಲ್ಲಿ ಹೇಳಲಾಗಿದೆ.


ಚೀನಾದಲ್ಲಿ ಕೊರೊನಾ ವೈರಸ್ ಸೋಂಕಿತ 75,465 ರೋಗಿಗಳ ವಿಶ್ಲೇಷಣೆಯಲ್ಲಿ ಗಾಳಿಯಿಂದ ಸೋಂಕು ಪಸರಿಸಿರುವ ಯಾವುದೇ ಪ್ರಕರಣ ಪತ್ತೆಯಾಗಿಲ್ಲ ಎಂದೂ ಕೂಡ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಸದ್ಯ ಲಭಿಸಿರುವ ತಥ್ಯಗಳ ಆದಾರದ ಮೇಲೆ ಈ ವೈರಸ್ ವಿರುದ್ಧ ಹೋರಾಟ ನಡೆಸುತ್ತಿರುವ ಆರೋಗ್ಯ ಸೇವಕರು ಸೋಂಕಿತ ವ್ಯಕ್ತಿಯ ಸೀನು ಅಥವಾ ಕೆಮ್ಮಿನಿಂದ ಎಚ್ಚರಿಕೆ ವಹಿಸಲು ಸಲಹೆ ನೀಡಿದೆ.