ನವ ದೆಹಲಿ/ಶಿಮ್ಲಾ: ಇಂದು ಬೆಳಿಗ್ಗೆ ಆರಂಭವಾದ ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆ ಮತ ಎಣಿಕೆಯಲ್ಲಿ ಬಿಜೆಪಿ 39 ಹಾಗೂ ಕಾಂಗ್ರೆಸ್ 21 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಆದರೂ ಸಿಎಂ ಪ್ರೇಮ್ ಕುಮಾರ್ ಧುಮಾಲ್ ಸುಜಾನ್ಫುರ್ ಕ್ಷೇತ್ರದಲ್ಲಿ ಹಿನ್ನಡೆ ಸಾಧಿಸಿದ್ದಾರೆ.


COMMERCIAL BREAK
SCROLL TO CONTINUE READING

68 ಕ್ಷೇತ್ರಗಳ ಮತಎಣಿಕೆಯು 48 ಮತ ಕೇಂದ್ರಗಳಲ್ಲಿ ಪ್ರಾರಂಭವಾದ ಎಣಿಕೆಯಲ್ಲಿ ಆರಂಭದಲ್ಲಿ ಬಿಜೆಪಿ 26 ಕ್ಷೇತ್ರಗಳಲ್ಲಿ ಮತ್ತು ಕಾಂಗ್ರೆಸ್ 21 ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿತ್ತು. ಇತ್ತೀಚಿನ ವರದಿಗಳ ಪ್ರಕಾರ ಬಿಜೆಪಿ ಮುನ್ನಡೆ ಸಾಧಿಸುವ ಮೂಲಕ ಕಾಂಗ್ರೆಸ್ನೊಂದಿಗೆ ಅಂತರ ಕಾಯ್ದುಕೊಂಡಿದೆ. 


ಎಕ್ಸಿಟ್ ಸಮೀಕ್ಷೆಗಳ ಪ್ರಕಾರ ಈಗಿರುವ ಕಾಂಗ್ರೆಸ್ ಆಡಳಿತವನ್ನು ಬಿಜೆಪಿ ಪಾಲಾಗಲಿದೆ ಎನ್ನಲಾಗಿದೆ. ಆದರೆ ಈ ಉಉಹೆ ಅದೆಷ್ಟರ ಮಟ್ಟಿಗೆ ನಿಖರವಾಗಿದೆ? ವೀರಭದ್ರ ಸಿಂಗ್ ತನ್ನ ಪಕ್ಷ ಅಧಿಕಾರದಲ್ಲೇ ಇರುವಂತೆ ಮಾಡಲು ಪ್ರಯತ್ನಿಸುತ್ತಾರಾ ಅಥವಾ ಪ್ರೇಮ್ ಕುಮಾರ್ ಧುಮಾಲ್ ಐದು ವರ್ಷಗಳ ನಂತರ ಮತ್ತೆ ಆಗಮಿಸುತ್ತಾರಾ? ಎಂದು ಕಾದು ನೋಡಬೇಕಿದೆ. ಒಟ್ಟು 337 ಅಭ್ಯರ್ಥಿಗಳ ಭವಿಷ್ಯ ಇಂದು ಮಧ್ಯಾಹ್ನದೊಳಗೆ ಸ್ಪಷ್ಟವಾಗಲಿದೆ. 


ಪಕ್ಷಾಧಾರಿತ ಮತವಿಂಗಡಣೆ ಈ ರೀತಿ ಇದೆ.