ನವದೆಹಲಿ: ದೇಶ ನಡೆಯುವುದು ಸಂವಿಧಾನದ ಮಾರ್ಗದರ್ಶನದಂತೆ ಹೊರತು ಬಿಜೆಪಿ ನಾಯಕರ  ಹೇಳಿಕೆಗಳಿಂದಲ್ಲ ಎಂದು  ಎಐಎಂಐಎಂ ನಾಯಕ ಅಸಾದುದ್ದೀನ್ ಓವೈಸಿ ಕಿಡಿಕಾರಿದ್ದಾರೆ.


COMMERCIAL BREAK
SCROLL TO CONTINUE READING

ರಾಮಮಂದಿರ ವಿವಾದ ವಿಚಾರಣೆ ಜನೆವರಿಗೆ ಮುಂದೂಡಿರುವ ಕಾರಣ ಹಲವು ಬಿಜೆಪಿ ಮತ್ತು ಸಂಘ ಪರಿವಾರದ ನಾಯಕರು ಅಸಮಾಧಾನಕೊಂಡಿರುವುದಕ್ಕೆ ಪ್ರತಿಕ್ರಿಯಿಸಿರುವ ಓವೈಸಿ ಮಂದಿರ ನಿರ್ಮಿಸಲು ಸುಗ್ರೀವಾಜ್ಞೆ ಹೊರಡಿಸಲು ಸರ್ಕಾರ ಮುಂದಾಗಿದ್ದೆ ಆದಲ್ಲಿ ಅದು ಅದು ಸಂವಿಧಾನ ವಿರೋಧಿಯಾಗಲಿದೆ ಎಂದು ಅವರು ಎಚ್ಚರಿಸಿದ್ದಾರೆ.


ರಾಮಮಂದಿರ ವಿಚಾರವಾಗಿ ಸುಪ್ರಿಂಕೋರ್ಟ್ ಜನವರಿಗೆ ಮುಂದೂಡಿರುವ ಕ್ರಮಕ್ಕೆ ಪ್ರತಿಕ್ರಿಯಿಸಿದ ಒವೈಸಿ "ಪ್ರತಿಯೊಬ್ಬರೂ ಕೂಡ ಸುಪ್ರಿಂಕೋರ್ಟ್ ನೀಡಿರುವ ಆದೇಶವನ್ನು ಗೌರವಿಸುವ ಬುದ್ದಿಮತ್ತೆ ಹೊಂದಬೇಕು ಎಂದು ಸಲಹೆ ನೀಡಿದ್ದಾರೆ.


ಇದುವರೆಗೆ ಯಾರಾದರು ರಾಮಮಂದಿರದ ಮೂಲಕ ರಾಜಕೀಯ ಮಾಡಿದ್ದರೆ ಅದು ಬಿಜೆಪಿ ಮಾತ್ರ, ಏಕೆಂದರೆ ಅದು ಎಲ್ಲಾ ವಿಷಯಗಳಲ್ಲಿ ವಿಫಲವಾಗಿದೆ.ಅದು ಜಮ್ಮು ಕಾಶ್ಮ್ನಿರ್.ಪೆಟ್ರೋಲ್ ಡಿಸೇಲ್ ದರವಿರಬಹುದು ಎಂದು ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದರು.ಇಲ್ಲಿ ಬಹುಮತದ ರಾಜಕೀಯ ನಡೆಯುವುದಿಲ್ಲ,ಭಾರತದಲ್ಲಿರುವುದು ಕ್ರಿಯಾತ್ಮಕ ಪ್ರಜಾಪ್ರಭುತ್ವ ಇದೆ ಎಂದು ಒವೈಸಿ ತಿಳಿಸಿದರು.