ಜೋಧ್ಪುರ: ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪು ವಿರುದ್ಧದ ಅತ್ಯಾಚಾರ ಪ್ರಕರಣದ ಅಂತಿಮ ವಿಚಾರಣೆಯನ್ನು ವಿಶೇಷ ಎಸ್ಸಿ, ಎಸ್ಟಿ ಕೋರ್ಟ್ ಶನಿವಾರ ಪೂರ್ಣಗೊಳಿಸಿದ್ದು, ಏಪ್ರಿಲ್ 25ಕ್ಕೆ ತೀರ್ಪು ಕಾಯ್ದಿರಿಸಿದೆ.


COMMERCIAL BREAK
SCROLL TO CONTINUE READING

ಆರೋಪಿ ಅಸಾರಾಂ ಬಾಪು ಪರ ವಕೀಲ ಪಿ.ಸಿ.ಸೋಲಂಕಿ ಮತ್ತು ಸರ್ಕಾರಿ ವಕೀಲರು ಮಂಡಿಸಿದ ವಾದ-ಪ್ರತಿವಾದಗಳನ್ನು ಕಳೆದ 5 ತಿಂಗಳಿನಿಂದ ಆಲಿಸಿ, ಅಂತಿಮ ವಿಚಾರಣೆ ಪೂರ್ಣಗೊಳಿಸಿದ ವಿಶೇಷ ಕೋರ್ಟ್ ನ್ಯಾಯಾಧೀಶ ಮಧುಸುದನ್ ಶರ್ಮಾ ಅವರು ತೀರ್ಪುನ್ನು ಏ.25ಕ್ಕೆ ಕಾಯ್ದಿರಿಸಿದ್ದಾರೆ. 


ಆಶ್ರಮದಲ್ಲಿ ಅಸಾರಾಂ 16 ವರ್ಷದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ ಆರೋಪಿ ಎದುರಿಸುತ್ತಿದ್ದಾರೆ. 1997–2006ರ ನಡುವೆ ಅಹಮದಾಬಾದ್‌ ಹೊರ ವಲಯದ ಆಶ್ರಮದಲ್ಲಿ ವಾಸ್ತವ್ಯ ಇದ್ದಾಗ ಅಸಾರಾಂ ಲೈಂಗಿಕ ಶೋಷಣೆ ನಡೆಸಿದ್ದಾಗಿ ಸೂರತ್‌ ಮೂಲದ ಮಹಿಳೆ ಪ್ರಕರಣ ದಾಖಲಿಸಿದ್ದರು. ಈ ಸಂಬಂಧ 2013ರ ಆಗಸ್ಟ್ ನಲ್ಲಿ ಜೋಧಪುರ ಪೊಲೀಸರು ಅಸಾರಾಂನನ್ನು  ಬಂಧಿಸಿದ್ದರು. ಅಂದಿನಿಂದಲೂ ಅವರು ಜೈಲಿನಲ್ಲಿದ್ದಾರೆ.