ಪ್ರಯಾಗರಾಜ್: 2005ರ ಜುಲೈ 5ರಂದು ಉತ್ತರಪ್ರದೇಶದ ಅಯೋಧ್ಯೆ ಭಯೋತ್ಪಾದಕ ದಾಳಿ ಪ್ರಕರಣದ ತೀರ್ಪನ್ನು ಪ್ರಯಾಗರಾಜ್‌ನ ವಿಶೇಷ ನ್ಯಾಯಾಲಯ ಮಂಗಳವಾರ ಪ್ರಕಟಿಸಲಿದೆ. 


COMMERCIAL BREAK
SCROLL TO CONTINUE READING

ವಿಶೇಷ ನ್ಯಾಯಾಧೀಶ ದಿನೇಶ್ ಚಂದ್ರ ಈ ಪ್ರಕರಣದ ವಿಚಾರಣೆ ನಡೆಸುತ್ತಿದ್ದು, ಭದ್ರತಾ ಕಾರಣಗಳಿಗಾಗಿ ಆರೋಪಿಗಳನ್ನು ಬಂಧನದಲ್ಲಿ ಇರಿಸಲಾಗಿರುವ ನೈನಿ ಸೆಂಟ್ರಲ್ ಜೈಲಿನಲ್ಲಿ ತೀರ್ಪು ಪ್ರಕಟಿಸಲು ನ್ಯಾಯಾಲಯ ತೀರ್ಮಾನಿಸಿದೆ.


2005ರ ಜೂನ್‌ 5ರಂದು ಮಾತಾ ಸೀತಾ ರಸೋಯಿಗೆ ಉಗ್ರರು ಗುಂಡಿನ ದಾಳಿ ನಡೆಸಿದ್ದರು. ಇವರ ದಾಳಿಯನ್ನು ಅತ್ಯಂತ ಬಲವಾಗಿ ಪ್ರತಿರೋಧಿಸಿದ ಸಿಆರ್‌ಪಿಎಫ್‌ ತಂಡ ಐವರನ್ನು ಕೊಂದು ಹಾಕಿತ್ತು. ಈ ಘಟನೆಯಲ್ಲಿ ಮಂದಿರದ ಆವರಣದಲ್ಲಿದ್ದ ಓರ್ವ ಮಹಿಳೆ ತೀವ್ರವಾಗಿ ಗಾಯಗೊಂಡಿದ್ದರು. ಬಳಿಕದ ನಡೆದ ತನಿಖೆ ವೇಳೆ ನಾಲ್ವರನ್ನು ಬಂಧಿಸಲಾಗಿತ್ತು.