ಮಕ್ಕಳಿಗೆ ಕೋವಾಕ್ಸಿನ್ ಲಸಿಕೆ: ಆರರಿಂದ ಹನ್ನೆರಡು ವರ್ಷದೊಳಗಿನ ಮಕ್ಕಳ ಲಸಿಕೆಗೆ ಸಂಬಂಧಿಸಿದಂತೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಮಹತ್ವದ ನಿರ್ಧಾರ ಕೈಗೊಂಡಿದೆ. 6 ರಿಂದ 12 ವರ್ಷ ವಯಸ್ಸಿನ ಮಕ್ಕಳಿಗೆ ಲಸಿಕೆ ನೀಡಲು ಭಾರತ್ ಬಯೋಟೆಕ್‌ನ ಕೋವಾಕ್ಸಿನ್ ಅನ್ನು ಅನುಮೋದಿಸಿದೆ. ಮೂಲಗಳಿಂದ ಪಡೆದ ಮಾಹಿತಿಯ ಪ್ರಕಾರ, ಕೋವ್ಯಾಕ್ಸಿನ್‌ನ ತುರ್ತು ಬಳಕೆಯನ್ನು ಅನುಮೋದಿಸಲಾಗಿದೆ ಎಂದು ತಿಳಿದು ಬಂದಿದೆ.


ಮಕ್ಕಳಿಗೆ ಲಸಿಕೆ ಹಾಕಲು ಪ್ರಾರಂಭಿಸಲಾಗಿದೆ. ಆದರೆ ಈಗ ಲಸಿಕೆಯ ವ್ಯಾಪ್ತಿಯನ್ನು ನಿರಂತರವಾಗಿ ಹೆಚ್ಚಿಸಲಾಗುತ್ತಿದೆ ಮತ್ತು ಪ್ರತಿ ವಯಸ್ಸಿನ ಮಕ್ಕಳಿಗೆ ಲಸಿಕೆ ನೀಡಲು ಸರ್ಕಾರ ಪ್ರಯತ್ನಿಸುತ್ತಿದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ- ಕೋವಿಡ್ 4ನೇ ಅಲೆ ಆತಂಕ: ಮಾಸ್ಕ್, ಸಾಮಾಜಿಕ ಅಂತರ ಕಡ್ಡಾಯ.. ಹೀಗಿದೆ ಸಭೆಯ ಹೈಲೈಟ್ಸ್‌


ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾದ (ಡಿಸಿಜಿಐ) ವಿಷಯ ತಜ್ಞರ ಸಮಿತಿಯು ಕಳೆದ ವಾರ ಕಾರ್ಬೆವಾಕ್ಸ್ ಲಸಿಕೆಯನ್ನು ತುರ್ತು ಬಳಕೆಗೆ ಶಿಫಾರಸು ಮಾಡಿದೆ. 5 ರಿಂದ 11 ವರ್ಷ ವಯಸ್ಸಿನ ಮಕ್ಕಳಿಗೆ ಈ ಶಿಫಾರಸು ಮಾಡಲಾಗಿದೆ. ಹೈದರಾಬಾದ್ ಮೂಲದ ಸಂಸ್ಥೆಯಾದ ಬಯೋಲಾಜಿಕಲ್-ಇ ಅಭಿವೃದ್ಧಿಪಡಿಸಿದ ಕಾರ್ಬೆವ್ಯಾಕ್ಸ್, ಕರೋನಾ ವಿರುದ್ಧ ದೇಶೀಯವಾಗಿ ಅಭಿವೃದ್ಧಿಪಡಿಸಿದ ಆರ್ಬಿಡಿ ಪ್ರೊಟೀನ್ ಉಪ-ಘಟಕ ಲಸಿಕೆಯಾಗಿದೆ. 


ಇದನ್ನೂ ಓದಿ- ಮಕ್ಕಳಿಗೆ ಲಸಿಕೆ: ಐದು ವರ್ಷ ಮೇಲ್ಪಟ್ಟವರಿಗೆ ಶೀಘ್ರವೇ ಲಸಿಕೆ


ಕರೋನಾ ವಿರುದ್ಧ ಹೋರಾಡಲು ದೇಶಾದ್ಯಂತ ವ್ಯಾಕ್ಸಿನೇಷನ್ ಅಭಿಯಾನ:
ಇಡೀ ವಿಶ್ವವನ್ನೇ ತನ್ನ ಕಪಿಮುಷ್ಠಿಯಲ್ಲಿ ಬಂಧಿಸಿದ್ದ ಮಹಾಮಾರಿ ಸಾಂಕ್ರಾಮಿಕ ಕರೋನಾವೈರಸ್ ವಿರುದ್ಧ ಹೋರಾಡಲು 2021ರ ಜನವರಿ 16 ರಂದು ದೇಶಾದ್ಯಂತ ವ್ಯಾಕ್ಸಿನೇಷನ್ ಅಭಿಯಾನವನ್ನು ಪ್ರಾರಂಭಿಸಲಾಯಿತು. 
* ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಯಿತು.  * 2021ರ  ಫೆಬ್ರವರಿ 2 ರಿಂದ ಮುಂಚೂಣಿ ಕಾರ್ಯಕರ್ತರ ಲಸಿಕೆ ಪ್ರಾರಂಭವಾಯಿತು. 
* ಕೋವಿಡ್-19 ವ್ಯಾಕ್ಸಿನೇಷನ್‌ನ ಮುಂದಿನ ಹಂತವು  2021ರ   ಮಾರ್ಚ್ 1 ರಂದು 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮತ್ತು ಅನಾರೋಗ್ಯದಿಂದ ಬಳಲುತ್ತಿರುವವರಿಗಾಗಿ ಆರಂಭವಾಯಿತು. 
* ನಂತರ ಮುಂದಿನ ಹಂತದಲ್ಲಿ 2021ರ ಏಪ್ರಿಲ್ 1 ರಿಂದ 45 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ಜನರಿಗೆ ಲಸಿಕೆಯನ್ನು ಪ್ರಾರಂಭಿಸಿತು.
* ಕಳೆದ ವರ್ಷ ಮೇ 1 ರಿಂದ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ  ಕರೋನಾ ಲಸಿಕೆ ಹಾಕಲು ಅವಕಾಶ ನೀಡುವ ಮೂಲಕ ತನ್ನ ಲಸಿಕೆ ಅಭಿಯಾನವನ್ನು ವಿಸ್ತರಿಸಿತು. 
* ಈ ವರ್ಷ ಅಂದರೆ 2022 ರ ಜನವರಿ ಮೂರರಿಂದ  15-18 ವರ್ಷ ವಯಸ್ಸಿನ ಹದಿಹರೆಯದವರಿಗೆ ಮುಂದಿನ ಹಂತದ ಲಸಿಕೆಯನ್ನು ಪ್ರಾರಂಭಿಸಲಾಯಿತು. *
* ಇದರ ಬೆನ್ನಲ್ಲೇ ಭಾರತವು ಜನವರಿ 10 ರಿಂದ ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕೆಲಸಗಾರರಿಗೆ ಮತ್ತು 60 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಮುನ್ನೆಚ್ಚರಿಕೆ ಡೋಸ್‌ಗಳ ಲಸಿಕೆಗಳನ್ನು ನೀಡಲು ಪ್ರಾರಂಭಿಸಿತು. ಇದಲ್ಲದೆ, 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ  ಏಪ್ರಿಲ್ 10 ರಿಂದ ಖಾಸಗಿ ಲಸಿಕೆ ಕೇಂದ್ರಗಳಲ್ಲಿ ಕೋವಿಡ್-19 ಲಸಿಕೆಗಳ ಮುನ್ನೆಚ್ಚರಿಕೆ ಡೋಸ್‌ಗಳನ್ನು ಪಡೆಯಲು ಅನುಮತಿಸಲಾಗಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.