ನವದೆಹಲಿ : ಕರೋನಾ  ಲಸಿಕೆ ಕೊವಾಕ್ಸಿನ್  (Covaxin)  ಕರೋನಾ ರೂಪಾಂತರಿ ವೈರಸ್ ಗಳ ವಿರುದ್ಧವೂ ಪರಿಣಾಮಕಾರಿಯಾಗಿದೆ. ಭಾರತದಲ್ಲಿ ಕಂಡುಬಂದಿರುವ  ಬಿ .1.617 ಮತ್ತು ಯುಕೆಯಲ್ಲಿ ಕಂಡುಬಂದಿರುವ ಬಿ .1.1.7 ರೂಪಾಂತರಗಳ ವಿರುದ್ಧವೂ ಕೋವಾಕ್ಸಿನ್ ರಕ್ಷಣೆ ನೀಡುತ್ತದೆ. ಕರೋನಾದ (Coronavirus) ಎರಡನೇ ಅಲೆಯಲ್ಲಿ ಕಾಣಿಸಿಕೊಂಡಿರುವ ಸೋಂಕು, ಮತ್ತು ಸಂಭವಿಸಿರುವ  ಸಾವಿನ ಪ್ರಕರಣಗಳಿಗೆ B.1.617 ರೂಪಾಂತರಿ ವೈಸರ್ ಕಾರಣವಾಗಿದೆ. ಇದು ಇಡೀ ಜಗತ್ತಿಗೆ ಅಪಾಯಕಾರಿ ಎಂದು ಡಬ್ಲ್ಯುಎಚ್‌ಒ (WHO) ಕೂಡ ಹೇಳಿತ್ತು. ರೂಪಾಂತರಿ ವೈರಸ್ ವಿರುದ್ಧವೂ ಕೋವಾಕ್ಸಿನ್ ಪರಿಣಾಕಾರಿಯಾಗಿ ಕೆಲಸ ಮಾಡುತ್ತದೆ ಎಂಬ ಅಂಶವನ್ನು ಕೋವಾಕ್ಸಿನ್  ಲಸಿಕೆಯನ್ನು ಅಭಿವೃದ್ಧಿಪಡಿಸಿದ ಭಾರತ್‌ಬಯೋಟೆಕ್ (BharatBiotech) ಕಂಪನಿಯ ಸಹ ಸಂಸ್ಥಾಪಕರಾದ ಸುಸಿತ್ರಾ ಇಲ್ಲಾ ಬಹಿರಂಗಪಡಿಸಿದ್ದಾರೆ.


COMMERCIAL BREAK
SCROLL TO CONTINUE READING

ಅಂತರರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ : 
'ಕೋವಾಕ್ಸಿನ್ (Covaxin) ಲಸಿಕೆಗೆ ಮತ್ತೊಮ್ಮೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಸಿಕ್ಕಿದೆ ಎಂದು ಸುಸಿತ್ರಾ ಇಲ್ಲಾ ಟ್ವಿಟ್ಟರ್ ನಲ್ಲಿ ಬರೆದಿದ್ದಾರೆ. ಇತ್ತೀಚೆಗೆ ಪ್ರಕಟವಾದ ಸಂಶೋಧನಾ ಮಾಹಿತಿಯ ಪ್ರಕಾರ, ಕೋವಾಕ್ಸಿನ್ ಹೊಸ ರೂಪಾಂತರಗಳ ವಿರುದ್ಧ ರಕ್ಷಣೆ ನೀಡುತ್ತದೆ ಎಂಬ ಅಂಶ ಬೆಳಕಿಗೆ ಬಂದಿದೆ ಎಂದು ಹೇಳಿದ್ದಾರೆ. 


ದೇಶದಲ್ಲಿ ಕೊರೊನಾ ಪರಿಸ್ಥಿತಿ ಸ್ಥಿರವಾಗುತ್ತಿದೆ- ಕೇಂದ್ರ ಸರ್ಕಾರ


NIV ಮತ್ತು ICMR ಸಹಯೋಗದಲ್ಲಿ ನಡೆದಿತ್ತು ಅಧ್ಯಯನ : 
ಕೋವಿಡ್ -19 ಸೋಂಕನ್ನು ತಡೆಗಟ್ಟಲು ಬಳಸುತ್ತಿರುವ ಲಸಿಕೆ ಕೋವಾಕ್ಸಿನ್ ರೂಪಾಂತರಿ ವೈರಸ್ ವಿರುದ್ಧವೂ ಪರಿಣಾಮಕಾರಿಯಾಗಿದೆ ಎಂಬುದನ್ನು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ (NIV)  ಮತ್ತು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಸಹಯೋಗದೊಂದಿಗೆ ನಡೆಸಿದ  ಅಧ್ಯಯನ ಬಹಿರಂಗಪಡಿಸಿದೆ. ಇದು ಭಾರತದಲ್ಲಿ ಕಂಡುಬರುವ B.1.617 ಮತ್ತು ಯುಕೆಯಲ್ಲಿ ಕಂಡುಬರುವ B.1.1.7 ರೂಪಾಂತರದ ವಿರುದ್ಧವೂ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂಬುದು ಅಧ್ಯಯನದಿಂದ ತಿಳಿದುಬಂದಿದೆ. 


ಐಸಿಎಂಆರ್ ಮತ್ತು ಎನ್ಐವಿ ಸಹಯೋಗದೊಂದಿಗೆ ಕೋವಾಕ್ಸಿನ್ ಅನ್ನು ಭಾರತ್ ಬಯೋಟೆಕ್ (Bharat Biotech) ಅಭಿವೃದ್ಧಿಪಡಿಸಿತ್ತು. ಕಂಪನಿಯು ಈ ಲಸಿಕೆಯನ್ನು ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸುತ್ತಿದೆ.  ಜನವರಿ 16 ರಿಂದ ಕೋವಾಕ್ಸಿನ್ ಅನ್ನು ಬಳಸಲು ಆರಂಭಿಸಲಾಗಿತ್ತು. 


ಇದನ್ನೂ ಓದಿ : ಮೊದಲನೇ ಕೊರೊನಾ ಅಲೆಯ ನಂತರ ಜನ, ಮತ್ತು ಸರ್ಕಾರ ನಿರ್ಲಕ್ಷ್ಯ ತೋರಿತು- ಮೋಹನ್ ಭಾಗವತ್


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.