ನವದೆಹಲಿ: ದೆಹಲಿಯಲ್ಲಿ ಕೊರೊನಾ ನಾಲ್ಕನೇ ಅಲೆ ಹಾವಳಿ ಆರಂಭವಾಗಿದ್ದು, ಶುಕ್ರವಾರದಂದು ಆರೋಗ್ಯ ಇಲಾಖೆ  ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ ಸುಮಾರು 1,042 ಹೊಸ ಕೋವಿಡ್ ಪ್ರಕರಣಗಳು ಶೇಕಡಾ 4.64 ರ ಸಕಾರಾತ್ಮಕ ದರದೊಂದಿಗೆ ದಾಖಲಾಗಿವೆ ಮತ್ತು ಇಬ್ಬರು ವ್ಯಕ್ತಿಗಳು ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.


COMMERCIAL BREAK
SCROLL TO CONTINUE READING

ಒಂದು ದಿನದ ಹಿಂದೆ ಸುಮಾರು 22,442 ಪರೀಕ್ಷೆಗಳನ್ನು ಮಾಡಲಾಗಿತ್ತು, ಈಗ ಸಾವಿರಕ್ಕೂ ಅಧಿಕ ಹೊಸ ಪ್ರಕರಣಗಳು ಕಂಡು ಬಂದಿರುವ ಹಿನ್ನಲೆಯಲ್ಲಿ ದೆಹಲಿಯಲ್ಲಿನ ಒಟ್ಟು ಪ್ರಕರಣಗಳ ಸಂಖ್ಯೆ 18,72,699 ಆಗಿದ್ದರೆ, ಸಾವಿನ ಸಂಖ್ಯೆ 26,164 ಕ್ಕೆ ಏರಿದೆ ಎನ್ನಲಾಗಿದೆ.


ದೆಹಲಿಯಲ್ಲಿ ಗುರುವಾರದಂದು ಒಂದು ಸಾವು ಮತ್ತು 965 ಕೋವಿಡ್ ಪ್ರಕರಣಗಳು ಶೇಕಡಾ 4.71 ರಷ್ಟು ಪಾಸಿಟಿವಿಟಿಯನ್ನು ವರದಿ ಮಾಡಿದೆ.ಇನ್ನೂ ಬುಧುವಾರದಂದು ಒಂದು ಸಾವು ಮತ್ತು 1,009 ಕೋವಿಡ್ ಪ್ರಕರಣಗಳ ಮೂಲಕ ಶೇ  5.7 ರಷ್ಟು ಪಾಸಿಟಿವಿಟಿ ದಾಖಲಾಗಿದೆ.


ಇದನ್ನೂ ಓದಿ: ಮಗಳ ಮದುವೆಯಲ್ಲಿ ಕೋವಿಡ್-19 ಬಗ್ಗೆ ಜಾಗೃತಿ ಮೂಡಿಸಿದ ಕುಟುಂಬ


ಕಳೆದ ಕೆಲವು ದಿನಗಳಲ್ಲಿ ದೆಹಲಿಯಲ್ಲಿ ಕೋವಿಡ್-19 ಪ್ರಕರಣಗಳಲ್ಲಿ ತೀವ್ರ ಏರಿಕೆ ಕಂಡುಬಂದಿದ್ದು, ಏಪ್ರಿಲ್ 11 ರಂದು ಸಕ್ರಿಯ ಪ್ರಕರಣಗಳ ಸಂಖ್ಯೆ 601 ರಿಂದ 3,253 ಕ್ಕೆ ಏರಿದೆ.ಆದಾಗ್ಯೂ, ಆಸ್ಪತ್ರೆಯ ಪ್ರಮಾಣವು ಇಲ್ಲಿಯವರೆಗೆ ಕಡಿಮೆಯಾಗಿದೆ ಎನ್ನಲಾಗಿದೆ.ಪ್ರಸ್ತುತ ದೆಹಲಿಯಲ್ಲಿ 58 ಕೋವಿಡ್-19 ರೋಗಿಗಳನ್ನು ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದೆ,ಆದರೆ 2,173 ಜನರು ಮನೆಯಲ್ಲಿ ಪ್ರತ್ಯೇಕವಾಗಿ ಚೇತರಿಸಿಕೊಳ್ಳುತ್ತಿದ್ದಾರೆ.


ಈ ರಾಜ್ಯದಲ್ಲಿ ಈಗ ಮಾಸ್ಕ ಧರಿಸುವುದು ಕಡ್ಡಾಯ, ತಪ್ಪಿದಲ್ಲಿ 500 ರೂ.ದಂಡ...!


ಪ್ರಕರಣಗಳು ಇಳಿಮುಖವಾದ ಕಾರಣ ಸರ್ಕಾರವು ಏಪ್ರಿಲ್ 12 ರಂದು ಮಾಸ್ಕ್ ಧರಿಸದಿದ್ದಕ್ಕಾಗಿ ದಂಡವನ್ನು ತೆಗೆದುಹಾಕಿತ್ತು. ಈಗ ದೆಹಲಿ ವಿಪತ್ತು ನಿರ್ವಹಣಾ ಸಭೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯ ನಿಯಮವನ್ನು ಉಲ್ಲಂಘಿಸುವವರಿಗೆ 500 ರೂ,ದಂಡವನ್ನು ವಿಧಿಸಲು ತೀರ್ಮಾನಿಸಲಾಗಿದೆ.


ಸರ್ಕಾರಿ ಲಸಿಕೆ ಕೇಂದ್ರಗಳಲ್ಲಿ 18-59 ವಯೋಮಾನದ ಫಲಾನುಭವಿಗಳಿಗೆ ಉಚಿತ ಕೋವಿಡ್-19 ಮುನ್ನೆಚ್ಚರಿಕೆ ಡೋಸ್‌ಗಳನ್ನು ನೀಡಲು ದೆಹಲಿ ಗುರುವಾರ ಆರಂಭಿಸಿದೆ ಎಂದು ನಗರ ಆರೋಗ್ಯ ಇಲಾಖೆ ತಿಳಿಸಿದೆ.ದೆಹಲಿಯು XE ಯಂತಹ ಹೊಸ ರೂಪಾಂತರವು ನಗರದಲ್ಲಿ ಹರಡಿದೆಯೇ ಎಂದು ಖಚಿತಪಡಿಸಿಕೊಳ್ಳಲು ಎಲ್ಲಾ ಕೋವಿಡ್ ಸೋಂಕಿತ ಜನರ ಮಾದರಿಗಳ ಜೀನೋಮ್ ಅನುಕ್ರಮವನ್ನು ಪ್ರಾರಂಭಿಸಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.