ನವದೆಹಲಿ: ಚೀನಾ ಸೇರಿದಂತೆ ಹಲವು ದೇಶಗಳಲ್ಲಿ ಹೆಚ್ಚುತ್ತಿರುವ ಕೊರೊನಾವೈರಸ್ ಸೋಂಕಿನ ಮಧ್ಯೆ Omicronನ ಹೊಸ ಉಪ-ವೇರಿಯಂಟ್ BF.7 ಬಗ್ಗೆ ಜನರಲ್ಲಿ ಭಯವಿದೆ. ದೇಶದಲ್ಲಿ COVID-19 ಸೋಂಕು ಹರಡುವುದನ್ನು ತಡೆಯಲು ವಿದೇಶದಿಂದ ಬರುವ ಪ್ರಯಾಣಿಕರನ್ನು ವಿಮಾನ ನಿಲ್ದಾಣದಲ್ಲಿ ಕಡ್ಡಾಯವಾಗಿ ಪರೀಕ್ಷೆ ಮಾಡಲಾಗುತ್ತಿದೆ. ಪಾಸಿಟಿವ್ ವರದಿ ಬಂದರೆ ಪ್ರಯಾಣಿಕರನ್ನು ಕ್ವಾರಂಟೈನ್ ಮಾಡಲಾಗುತ್ತದೆ. ಕೊರೊನಾವೈರಸ್ ಬಗ್ಗೆ ಜನರು ಹೆಚ್ಚು ಜಾಗರೂಕರಾಗಿರಬೇಕು ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಹೇಳಿದ್ದಾರೆ. ಇದರೊಂದಿಗೆ ಯಾರೇ ಆಗಲಿ ಅನಗತ್ಯವಾಗಿ ಗುಂಪು ಗುಂಪಾಗಿ ಸಂಚರಿಸದಂತೆ ಮನವಿ ಮಾಡಿದ್ದಾರೆ.


COMMERCIAL BREAK
SCROLL TO CONTINUE READING

BF.7 ರೂಪಾಂತರದಿಂದ ಸೋಂಕಿನ ಅಪಾಯ!


ಕೊರೊನಾ ವೈರಸ್‌ನ ಹೊಸ ರೂಪಾಂತರ BF.7 ಚೀನಾದಲ್ಲಿ ಜನರನ್ನು ಮತ್ತೊಮ್ಮೆ ಹೈರಾಣಾಗಿಸಿದೆ. ಈ ರೂಪಾಂತರದ 4 ಪ್ರಕರಣಗಳು ಭಾರತದಲ್ಲಿಯೂ ವರದಿಯಾಗಿವೆ. ಕೋವಿಡ್-19 ವೈರಸ್ ನಿರಂತರವಾಗಿ ರೂಪಾಂತರಗೊಳ್ಳುತ್ತಿದ್ದು, ಈ ಕಾರಣದಿಂದ ಅದರ ರೋಗಲಕ್ಷಣಗಳು ಸಹ ಬದಲಾಗುತ್ತಿವೆ. ಆದ್ದರಿಂದ ಚೀನಾದಲ್ಲಿ ವಿನಾಶವನ್ನು ಉಂಟುಮಾಡುವ Omicron ರೂಪಾಂತರದ ಹೊಸ ಉಪ-ವೇರಿಯಂಟ್ BF.7ನ ರೋಗ ಲಕ್ಷಣಗಳು ಯಾವುವು ಎಂಬುದರ ಮಾಹಿತಿ ಇಲ್ಲಿದೆ ನೋಡಿ.


ಇದನ್ನೂ ಓದಿ: Kanpur Money Heist!: 10 ಅಡಿ ಆಳದ ಸುರಂಗ ಕೊರೆದು SBIನಿಂದ 1 ಕೋಟಿ ಮೌಲ್ಯದ ಚಿನ್ನಾಭರಣ ಲೂಟಿ!


ಈ ಲಕ್ಷಣ ಕಂಡುಬಂದರೆ ತಕ್ಷಣ ಎಚ್ಚರದಿಂದಿರಿ!


ಕೊರೊನಾ ವೈರಸ್‌ನ ಓಮಿಕ್ರಾನ್ ರೂಪಾಂತರದಂತೆ ಅದರ ಉಪ-ರೂಪ BF.7 ಹಲವಾರು ರೋಗಲಕ್ಷಣಗಳನ್ನು ಹೊಂದಿದೆ. ಜ್ವರ, ಕೆಮ್ಮು, ಗಂಟಲು ನೋವು, ದೌರ್ಬಲ್ಯ, ವಾಕರಿಕೆ ಮತ್ತು ಅತಿಸಾರ ಇದರಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ. ಸೋಂಕಿತ ರೋಗಿಗಳಿಗೆ ಕಫದೊಂದಿಗೆ ಕೆಮ್ಮು ಅಥವಾ ಕಫ ಇಲ್ಲದ ಕೆಮ್ಮು ಇರಬಹುದು. ಇದಲ್ಲದೆ ಎದೆಯ ಮೇಲ್ಭಾಗದಲ್ಲಿ ಮತ್ತು ಗಂಟಲಿನ ಬಳಿ ನೋವು ಉಂಟಾಗುತ್ತದೆ. ಉಸಿರಾಟದ ವ್ಯವಸ್ಥೆಯು ಸೋಂಕಿಗೆ ಒಳಗಾಗುತ್ತದೆ. ಇದಲ್ಲದೆ ಸೋಂಕಿತ ರೋಗಿಯು ಸೀನುವಿಕೆ, ನೆಗಡಿ ಅಥವಾ ಮೂಗು ಕಟ್ಟುವಿಕೆ ಸಮಸ್ಯೆಗಳನ್ನು ಸಹ ಉಂಟಾಗಬಹುದು.


ರೋಗಲಕ್ಷಣ ಕಾಣಿಸಿಕೊಂಡ ತಕ್ಷಣ ಕೊರೊನಾ ಪರೀಕ್ಷೆ ಮಾಡಿಸಿ


ನಿಮ್ಮಲ್ಲೂ ಈ ಕೊರೊನಾ ವೈರಸ್‌ನ ಲಕ್ಷಣಗಳು ಕಂಡುಬಂದರೆ, ತಕ್ಷಣವೇ ಎಚ್ಚೆತ್ತುಕೊಂಡು ಕೋವಿಡ್-19 ಪರೀಕ್ಷೆ ಮಾಡಿಸಿ. ಇದರೊಂದಿಗೆ ನಿಮ್ಮನ್ನು ಕ್ವಾರಂಟೈನ್ ಮಾಡಿಕೊಳ್ಳಿ. ವೈದ್ಯರೊಂದಿಗೆ ಸಂಪರ್ಕದಲ್ಲಿರಿ ಮತ್ತು ಕೊರೊನಾ ವೈರಸ್ ಪರೀಕ್ಷೆಯು ನೆಗೆಟಿವ್ ಬರುವವರೆಗೆ ಜನಸಂದಣಿ ಇರುವ ಸ್ಥಳಗಳಿಗೆ ಹೋಗುವುದನ್ನು ತಪ್ಪಿಸಿ. ಇದಲ್ಲದೇ ಪಾಸಿಟಿವ್ ರಿಪೋರ್ಟ್ ಬಂದಾಗ ವೈದ್ಯರ ಸೂಚನೆಗಳನ್ನು ಪಾಲಿಸಿ.


ಇದನ್ನೂ ಓದಿ: ಡೇಟಾದ ಟೆನ್ಷನ್‍ಗೆ ಹೇಳಿ ಗುಡ್‍ಬೈ! ಒಮ್ಮೆ ರೀಚಾರ್ಜ್ ಮಾಡಿದ್ರೆ ವರ್ಷಪೂರ್ತಿ ಪ್ರಯೋಜನ!


ಭಾರತದಲ್ಲಿ ಸಕ್ರಿಯ ಕೊರೊನಾ ರೋಗಿಗಳು


ಕೇಂದ್ರದ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ಶನಿವಾರ ಭಾರತದಲ್ಲಿ 24 ಗಂಟೆಗಳಲ್ಲಿ 201 ಹೊಸ ಕೊರೊನಾವೈರಸ್ ಪ್ರಕರಣಗಳು ವರದಿಯಾಗಿದ್ದು, ದೇಶದಲ್ಲಿ ಒಟ್ಟು ಕೊರೊನಾ ರೋಗಿಗಳ ಸಂಖ್ಯೆ 3397ಕ್ಕೆ ಏರಿಕೆಯಾಗಿದೆ. ಆದರೆ 24 ಗಂಟೆಗಳಲ್ಲಿ ಕೋವಿಡ್-19 ಸೋಂಕಿತ ಒಬ್ಬ ರೋಗಿಯೂ ಸಾವನ್ನಪ್ಪಿಲ್ಲ ಎಂಬುದು ಸಮಾಧಾನದ ಸಂಗತಿಯಾಗಿದೆ. ದೇಶದ ಕೊರೊನಾ ಸೋಂಕಿನ ಧನಾತ್ಮಕ ಪ್ರಮಾಣವು ಶೇ.0.14ರಷ್ಟು ಆಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.