Coronavirus: ತನ್ನ ಬಳಕೆದಾರರಿಗೆ ಬಹುದೊಡ್ಡ ಗಿಫ್ಟ್ ನೀಡಿಯ Paytm
ಡಿಜಿಟಲ್ ಪೇಮೆಂಟ್ ನ ಮುಂಚೂಣಿಯಲ್ಲಿರುವ ಕಂಪನಿ ಪೇಟಿಎಂ ತನ್ನ ಬಳಕೆದಾರರಿಗೆ ವಿಶೇಷ ಕೊಡುಗೆಯೊಂದನ್ನು ನೀಡಿದೆ. ಹೌದು, ಇದಕ್ಕಾಗಿ ಪೇಟಿಎಂ ಇಂಡೆನ್ ಗ್ಯಾಸ್ ಲಿಮಿಟೆಡ್ (IOC) ಜೊತೆ ಒಪ್ಪಂದವೊಂದನ್ನು ಮಾಡಿಕೊಂಡಿದೆ.
ನವದೆಹಲಿ: ಕೊರೊನಾ ವೈರಸ್ ನಿಂದ ಹೆಚ್ಚಾಗುತ್ತಿರುವ ಪ್ರಕೋಪದ ಹಿನ್ನೆಲೆ ಪ್ರೈವೇಟ್ ಕಂಪನಿಗೂ ಕೂಡ ಅತ್ಯಾವಶ್ಯಕ ನಿರ್ಣಯಗಳನ್ನು ಕೈಗೊಳ್ಳುತ್ತಿವೆ. ಈ ಹಿನ್ನೆಲೆಯಲ್ಲಿ ತನ್ನ ಗ್ರಾಹಕರಿಗೆ ಸಾಧ್ಯವಾದಷ್ಟು ಸೌಕರ್ಯಗಳನ್ನು ನೀಡಲು ಮುಂದಾಗುತ್ತಿವೆ. ಅದರಲ್ಲೂ ವಿಶೇಷವಾಗಿ ಡಿಜಿಟಲ್ ಟ್ರಾನ್ಸಾಕ್ಶನ್ ಸೇವೆ ಒದಗಿಸುವ ಕಂಪನಿಗಳು ಇವುಗಳಲ್ಲಿ ಮುಂಚೂಣಿಯಲ್ಲಿವೆ. ಡಿಜಿಟಲ್ ಪೇಮೆಂಟ್ ಸೇವೆ ಒದಗಿಸುವ ಪೇಟಿಎಂ ತನ್ನ ಬಳಕೆದಾರರನ್ನು ಗಮನದಲ್ಲಿಟ್ಟುಕೊಂಡು ಇಂತಹುದೇ ಒಂದು ಹೆಜ್ಜೆಯನ್ನು ಇಟ್ಟಿದೆ. ಇದಕ್ಕಾಗಿ ಪೇಟಿಎಂ ಇಂಡೆನ್ ಗ್ಯಾಸ್ ಲಿಮಿಟೆಡ್ (IOC) ಜೊತೆ ಒಪ್ಪಂದವೊಂದನ್ನು ಮಾಡಿಕೊಂಡಿದೆ. ಈ ಒಪ್ಪಂದದ ಬಳಿಕ ಪೇಟಿಎಂ ಬಳಕೆದಾರರು ಆನ್ಲೈನ್ ನಲ್ಲಿ ಗ್ಯಾಸ್ ಸಿಲಿಂಡರ್ ಬುಕ್ ಮಾಡಬಹುದಾಗಿದೆ. ಅಷ್ಟೇ ಅಲ್ಲ ಸಿಲಿಂಡರ್ ಗಾಗಿ ಹಣವನ್ನು ಕೂಡ ನೀವು ಆನ್ಲೈನ್ ನಲ್ಲಿ ಪಾವತಿಸಬಹುದಾಗಿದೆ. ಇದನ್ನು ಹೊರತುಪಡಿಸಿ ಪೆಟ್ರೋಲ್ ಪಂಪ್ ಗಳ ಮೇಲೂ ಕೂಡ ನೀವು ಈ ಸೌಕರ್ಯದ ಲಾಭ ಪಡೆಯಬಹುದಾಗಿದೆ.
ಕೊರೊನಾ ವೈರಸ್ ನಿಂದ ರಕ್ಷಿಸಿಕೊಳ್ಳಬಹುದು
ಈ ಕುರಿತು ಹೇಳಿಕೆ ನೀಡಿರುವ IOC ಗ್ರಾಹಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ಹೆಜ್ಜೆಯನ್ನು ಇಡಲಾಗಿದೆ ಎಂದು ಹೇಳಿದೆ. ಇಂಡೆನ್ ಗ್ಯಾಸ್ ಬಳಕೆದಾರರು ಈ ಸೌಕರ್ಯದ ಲಾಭ ಪಡೆಯಬಹುದಾಗಿದೆ. ಇದರಿಂದ ಗ್ರಾಹಕರು ಕೊರೊನಾ ವೈರಸ್ ಸೋಂಕಿನಿಂದ ಪಾರಾಗಬಹುದು ಎಂದು ಹೇಳಿರುವ ಕಂಪನಿ, ತಮ್ಮ ಕಂಪನಿಯ ಕಾರ್ಮಿಕರು ಮಾಸ್ಕ್ ಮತ್ತು ಹ್ಯಾಂಡ್ ಗ್ಲೌಸ್ ಗಳನ್ನೂ ಧರಿಸಿ ಗ್ರಾಹಕರ ಮನೆಬಾಗಿಲಿಗೆ ಸಿಲಿಂಡರ್ ತಲುಪಿಸಲಿದ್ದಾರೆ ಎಂದು ಹೇಳಿದೆ. ಇನ್ನೊಂದೆಡೆ ಗ್ರಾಹಕರೂ ಕೂಡ QR ಕೋಡ್ ಬಳಸಿ ತಮ್ಮ ಹಣವನ್ನು ಪಾವತಿಸಬಹುದಾಗಿದೆ.
Paytm ನಿಂದ ವಿಶೇಷ POS ಮಶೀನ್
ಇದಕ್ಕಾಗಿ Paytm ನ POS ಯಂತ್ರಕ್ಕೆ ಇಂಡೆನ್ ಗ್ಯಾಸ್ ಡಿಲೆವರಿ ಆಪ್ ಸಪೋರ್ಟ್ ನೀಡಲಾಗಿದೆ. ಈ ಆಪ್ ನಲ್ಲಿ LPG ಗ್ಯಾಸ್ ಸಿಲಿಂಡರ್ ಗೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಅತ್ತ ಮಶೀನ್ ಕೂಡ ನಿಮ್ಮ ಹಣಪಾವತಿಗೆ ಸಂಬಧಿಸಿದಂತೆ ಇ-ಇನ್ವೈಸ್ ಹಾಗೂ ಫಿಸಿಕಲ್ ಕಾಪಿ ಕೂಡ ಜನರೇಟ್ ಮಾಡಲು ಸಕ್ಷಮವಾಗಿದೆ. Paytmನ ಈ ಯಂತ್ರಗಳನ್ನು ಇಂಡೆನ್ ಗ್ಯಾಸ್ ಲಿಮಿಟೆಡ್ ನ ಎಲ್ಲ ಆಫಿಸ್ ನಲ್ಲಿ ಬಳಕೆಗಾಗಿ ಇಡಲಾಗಿದೆ.
ಆನ್ಲೈನ್ ಬುಕಿಂಗ್ ಮಾಡುವುದು ಹೇಗೆ?
ಗ್ಯಾಸ್ ಸಿಲಿಂಡರ್ ಬುಕ್ ಮಾಡಲು ಮೊದಲು ನೀವು ನಿಮ್ಮ Paytm ಆಪ್ ಅನ್ನು ಓಪನ್ ಮಾಡಿ.
ಬಳಿಕ ಆಪ್ ನ 'Other Services' ಸೆಕ್ಷನ್ ನಲ್ಲಿ ನೀಡಲಾಗಿರುವ ಬುಕ್ ಸಿಲಿಂಡರ್ ಆಪ್ಶನ್ ಮೇಲೆ ಕ್ಲಿಕ್ಕಿಸಿ.
ಗ್ಯಾಸ್ ಸಂಖ್ಯೆ, ಗ್ಯಾಸ್ ಏಜೆನ್ಸಿ ಸಂಖ್ಯೆ ಹಾಗೂ ನಿಮ್ಮ ಡಿಟೇಲ್ ಗಳನ್ನೂ ನಮೂದಿಸಿ.
ಈಗ ನಿಮ್ಮ ಗ್ಯಾಸ್ ಬುಕ್ ಆಗಲಿದೆ.
ಇದಕ್ಕೂ ಮೊದಲು ಪೇಟಿಎಂ HP ಗ್ಯಾಸ್ ಜೊತೆ ಒಪ್ಪಂದ ಮಾಡಿಕೊಂಡಿದೆ.
ಇದಕ್ಕೂ ಮೊದಲು ಕ್ಯಾಶ್ ಲೆಸ್ ಪೇಮೆಂಟ್ ಗಾಗಿ paytm, HP ಗ್ಯಾಸ್ ಕಂಪನಿಯ ಜೊತೆಗೆ ಒಪ್ಪಂದ ಮಾಡಿಕೊಂಡಿದೆ. ಇದರಿಂದ ಡಿಜಿಟಲ್ ಇಂಡಿಯಾಗೆ ಒತ್ತು ಸಿಗಲಿದೆ ಎಂಬುದು ಕಂಪನಿಯ ಉದ್ದೇಶವಾಗಿದೆ ಎಂದಿತ್ತು. ಅಷ್ಟೇ ಅಲ್ಲ ಈ ಕುರಿತು ಹೇಳಿಕೊಂಡಿರುವ Paytm ಕೂಡ ಕ್ಯಾಶ್ ಲೆಸ್ ಪೇಮೆಂಟ್ ಗಾಗಿ ಇನ್ಮುಂದೆಯೂ ಕೂಡ ಇಂತಹ ಒಪ್ಪಂದಗಳನ್ನೂ ಮಾಡಿಕೊಳ್ಳಲಿದೆ ಮತ್ತು ಸರ್ಕಾರದ ಡಿಜಿಟಲ್ ಇಂಡಿಯಾ ಮಿಶನ್ ಗೆ ಒಟ್ಟು ನೀಡಲು ನಿರಂತರ ತನ್ನ ಪ್ರಯತ್ನ ಮುಂದುವರೆಸಲಿದೆ ಎಂದು ಹೇಳಿದೆ.