ನವದೆಹಲಿ: ದೇಶದೆಲ್ಲೆಡೆ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳ ಹಿನ್ನಲೆಯಲ್ಲಿ ಪ್ರಧಾನಿ ಮೋದಿಗೆ ಪತ್ರ ಬರೆದಿರುವ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಕೊರೊನಾವನ್ನು ನೈಸರ್ಗಿಕ ವಿಕೋಪ ಎಂದು ಘೋಷಿಸಬೇಕೆಂದು ಮನವಿ ಮಾಡಿದ್ದಾರೆ.


COMMERCIAL BREAK
SCROLL TO CONTINUE READING

ಎಸ್‌ಡಿಆರ್ಎಫ್ ಹಣವನ್ನು ಆರ್ಥಿಕ ಪರಿಹಾರ ನೀಡಲು ಬಳಸಬೇಕೆಂದು ಅವರು ಕೋರಿದ್ದಾರೆ.ಮಹಾರಾಷ್ಟ್ರದಲ್ಲಿ ಈಗಾಗಲೇ ಆರು ಲಕ್ಷಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳನ್ನು ಹೊಂದಿದೆ.ಈ ಹಿನ್ನಲೆಯಲ್ಲಿ ಮಹಾರಾಷ್ಟ್ರ ಮತ್ತು ಇತರ ರಾಜ್ಯಗಳಲ್ಲಿ ಜನರಿಗೆ ವಿತ್ತೀಯ ನೆರವು ಇಲ್ಲದಿದ್ದರೆ ಮಿನಿ ಲಾಕ್ ಡೌನ್ ಅಗತ್ಯವಾಗುತ್ತದೆ ಎಂದು ಹೇಳಿದರು.


Basavaraj Bommai: 'ರೆಮ್‌ಡೆಸಿವಿರ್' ಕದ್ದು ಮಾರುವವರಿಗೆ ಖಡಕ್ ಎಚ್ಚರಿಕೆ ನೀಡಿದ ಗೃಹ ಸಚಿವ!


COVID-19 ಸಾಂಕ್ರಾಮಿಕದ ದೃಷ್ಟಿಯಿಂದ...ಮಿನಿ-ಲಾಕ್‌ಡೌನ್ ಅವಶ್ಯಕತೆಯಾಗಿದೆ...ಸಾಂಕ್ರಾಮಿಕವನ್ನು ಎಸ್‌ಡಿಆರ್‌ಎಫ್ ಅಡಿಯಲ್ಲಿ ನೈಸರ್ಗಿಕ ವಿಪತ್ತು ಎಂದು ಘೋಷಿಸಬಹುದು.ಅದರಂತೆ ಅಂತೋದಯಾ ಅನ್ನ ಯೋಜನೆ ಮತ್ತು ಪಿಎಚ್‌ಹೆಚ್ ಪಡಿತರ ಚೀಟಿ ಹೊಂದಿರುವವರಿಗೆ ಲಾಕ್‌ಡೌನ್ ಸಮಯದಲ್ಲಿ ದಿನಕ್ಕೆ ವಯಸ್ಕರಿಗೆ ₹ 100 ಮತ್ತು ಮಗುವಿಗೆ ದಿನಕ್ಕೆ ₹ 60 ರಂತೆ ಗ್ರಾಟ್ಯುಟಸ್ ರಿಲೀಫ್ ನೀಡಲು ರಾಜ್ಯವನ್ನು ಅನುಮತಿಸಬಹುದು "ಎಂದು ಉದ್ಧವ್ ಠಾಕ್ರೆ ಬರೆದಿದ್ದಾರೆ.


Kumbh Mela 2021: ಕುಂಭಮೇಳ 5 ದಿನಗಳಲ್ಲಿ 1,700 ಕೊರೋನಾ ಪ್ರಕರಣಗಳು ಪತ್ತೆ!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.