ನವದೆಹಲಿ: ಕೊರೊನಾವೈರಸ್ (Coronavirus) ಸೋಂಕಿನ ವಿರುದ್ಧದ ಹೋರಾಟದಲ್ಲಿ ಜಗತ್ತು ದೊಡ್ಡ ಹಿನ್ನಡೆ ಅನುಭವಿಸಿದೆ. ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮತ್ತು ಅಸ್ಟ್ರಾಜೆನೆಕಾದ ಕೋವಿಡ್ -19 ಲಸಿಕೆಯ ಮಾನವ ಪ್ರಯೋಗಗಳನ್ನು ಪ್ರಸ್ತುತ ನಿಲ್ಲಿಸಲಾಗಿದೆ. ಟ್ರಯಲ್ ನಲ್ಲಿ ಭಾಗಿಯಾಗಿರುವ ವ್ಯಕ್ತಿಯ ಪರಿಸ್ಥಿತಿ ಹದಗೆಟ್ಟ ಹಿನ್ನೆಲೆ ಈ ಟ್ರಯಲ್  ನಿಲ್ಲಿಸಲಾಗಿದೆ. ಅಸ್ಟ್ರಾಜೆನೆಕಾ ಪ್ರಕಾರ, ಇದೊಂದು ರುಟೀನ್ ಅಡೆತಡೆ ಎಂದೇ ಹೇಳಲಾಗುತ್ತಿದೆ, ಏಕೆಂದರೆ ಪರೀಕ್ಷೆಯಲ್ಲಿ ಭಾಗಿಯಾಗಿರುವ ವ್ಯಕ್ತಿಯ ಅನಾರೋಗ್ಯದ ಬಗ್ಗೆ ಹೆಚ್ಚಿನ ಮಾಹಿತಿ ಬಂದಿಲ್ಲ ಹೀಗಾಗಿ ಇದೊಂದು ರುಟೀನ್ ಅಡಚಣೆ ಎಂದೇ ಹೇಳಲಾಗುತ್ತಿದೆ.


COMMERCIAL BREAK
SCROLL TO CONTINUE READING

ಆಕ್ಸ್‌ಫರ್ಡ್ ಮತ್ತು ಅಸ್ಟ್ರಾಜೆನೆಕಾದ ಈ ಲಸಿಕೆಯನ್ನು AZD1222 ಎಂದು ಹೆಸರಿಸಲಾಯಿತು. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಪ್ರಕಾರ, ವಿಶ್ವದ ಇತರ ಲಸಿಕೆ ಪ್ರಯೋಗಗಳಿಗೆ ಹೋಲಿಸಿದರೆ ಇದು ಮುಂದಿತ್ತು. ಭಾರತ ಸೇರಿದಂತೆ ಹಲವು ದೇಶಗಳು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಲಸಿಕೆ ಮೇಲೆ ನಿಗಾವಹಿಸಿವೆ . ಇದಕ್ಕೂ ಮೊದಲು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಲಸಿಕೆಯು ಮಾರುಕಟ್ಟೆಗೆ  ಮೊದಲು ಬರಲಿದೆ ಎಂಬ ಭರವಸೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದರು. 


AFP ಪ್ರಕಟಿಸಿರುವ ವರದಿಯೊಂದರ ಪರಕಾರ, ಸಂಪೂರ್ಣ ವಿಶ್ವದಲ್ಲಿ ನಡೆಸಲಾಗುತ್ತಿದ್ದ ಈ ಲಸಿಕೆಯ ಟ್ರಯಲ್ ಗಳನ್ನು ನಿಲ್ಲಿಸಲಾಗಿದ್ದು. ಸ್ವತಂತ್ರ ತನಿಖೆಯ ಬಳಿಕ ಮಾತ್ರ ಇದನ್ನು ಮತ್ತೆ ಆರಂಭಿಸಲಾಗುವುದು ಎನ್ನಲಾಗಿದೆ. ವ್ಯಾಕ್ಸಿನ್ ನ 3 ನೇ ಹಂತದ ಟ್ರಯಲ್ ನಲ್ಲಿ ಸಾವಿರಾರು ಜನರು ಶಾಮೀಲಾಗಿದ್ದಾರೆ. ಪ್ರಸ್ತುತ ಇದರ ಮೂರನೇ ಹಂತದ ಪರೀಕ್ಷೆಯಲ್ಲಿ ಸುಮಾರು 30 ಸಾವಿರ ಜನರು ಶಾಮೀಲಾಗಿದ್ದಾರೆ. ಸಾಮಾನ್ಯವಾಗಿ ಒಂದು ವ್ಯಾಕ್ಸಿನ್ ಟ್ರಯಲ್ ನಲ್ಲಿ ಹಲವು ವರ್ಷಗಳೇ ಬೇಕಾಗುತ್ತವೆ. ಆದರೆ, ಕೊರೊನಾ ಪ್ರಕೋಪದ ತೀವ್ರತೆಯ ಹಿನ್ನೆಲೆ ಈ ಪರೀಕ್ಷೆಗಳನ್ನು ತುಂಬಾ ವೇಗವಾಗಿ ನಡೆಸಲಾಗುತ್ತಿದೇ.


ಈ ಕುರಿತು ಹೇಳಿಕೆ ನೀಡಿರುವ ಆಕ್ಸ್ಫರ್ಡ್ ಯುನಿವೆರ್ಸಿಟಿ ವಕ್ತಾರರು, ದೊಡ್ಡ ಪ್ರಮಾಣದ ಟ್ರಯಲ್ ನಲ್ಲಿ ಅಸ್ವಸ್ತತೆ ಎದುರಾಗುವುದು ಸಾಮಾನ್ಯ. ಆದರೆ, ಇದರ ಸ್ವತಂತ್ರ ತನಿಖೆ ನಡೆಸುವುದು ಅವಶ್ಯಕ. ಎರಡನೇ ಬಾರಿಗೆ ಆಕ್ಸ್ಫರ್ಡ್ ಯುನಿವೆರ್ಸಿಟಿ ವ್ಯಾಕ್ಸಿನ್ ಪರೀಕ್ಷೆಯನ್ನು ಸ್ಥಗಿತಗೊಳಿಸಲಾಗಿದೆ ಎಂಬುದು ಇಲ್ಲಿ ಉಲ್ಲೇಖನೀಯ.