ನವದೆಹಲಿ: ನೀತಿ ಆಯೋಗದ ಪ್ರಸ್ತಾವನೆಯನ್ನು ಆಧಾರವಾಗಿಟ್ಟುಕೊಂಡು, ಜನರಲ್ ಇನ್ಶುರೆನ್ಸ್ ಕೌನ್ಸಿಲ್ (ಜಿಐಸಿ) ಆಸ್ಪತ್ರೆಗಳು ಮತ್ತು ವಿಮಾ ಕಂಪನಿಗಳಿಗೆ ಕರೋನಾ ರೋಗಿಗಳಿಗೆ (ಕೋವಿಡ್ -19 ಚಿಕಿತ್ಸಾ ದರಗಳು) ಗರಿಷ್ಠ ಚಿಕಿತ್ಸೆಯ ಶುಲ್ಕ ಪಟ್ಟಿಯ ಅಡ್ವೈಸರಿ ಜಾರಿಗೊಳಿಸಿದೆ.. ಆಯಾ ಪ್ರದೇಶಗಳನ್ನು ಆಧರಿಸಿ ಆಸ್ಪತ್ರೆಗಳು ತಮ್ಮ ಗರಿಷ್ಠ ದರಗಳನ್ನು ನಿರ್ಧರಿಸಬಹುದು ಮತ್ತು ಮೂಲಸೌಕರ್ಯವನ್ನು ಅವಲಂಬಿಸಿ, ಅವರು 35% ವರೆಗೆ ರಿಯಾಯಿತಿಯನ್ನು ಸಹ ನೀಡಬಹುದು.


COMMERCIAL BREAK
SCROLL TO CONTINUE READING

ಈ ಕುರಿತು ಆಸ್ಪತ್ರೆಗಳು ಮತ್ತು ವಿಮಾ ಕಂಪನಿಗಳಿಗೆ ನೂತನ ಅಡ್ವೈಸರಿ ಜಾರಿಗೊಳಿಸಿರುವ ಜನರಲ್ ಇನ್ಸುರೆನ್ಸೆ ಕೌನ್ಸಿಲ್, ಚಿಕಿತ್ಸೆಯ ದರಗಳನ್ನು ನಿಗದಿಪಡಿಸಿದೆ. ಕೊರೋನಾಗೆ ಚಿಕಿತ್ಸೆ ನೀಡುತ್ತಿರುವ ಖಾಸಗಿ ಆಸ್ಪತ್ರೆಗಳು ಅಡ್ವೈಸರಿಯಲ್ಲಿ ನೀಡಲಾಗಿರುವ ದರಗಳ ಆಧಾರದ ಮೇಲೆ ತಮ್ಮ ಶುಲ್ಕವನ್ನು ನಿಗದಿಪಡಿಸಬಹುದಾಗಿದೆ.


ಜನರಲ್ ಇನ್ಸುರೆನ್ಸ್ ಕೌನ್ಸಿಲ್ ನೀತಿ ಆಯೋಗದ ವರದಿಯನ್ನು ಆಧಾರವಾಗಿತತುಕೊಂಡು ಈ ಅಡ್ವೈಸರಿ ಬಿಡುಗಡೆಗೊಳಿಸಿದೆ. 


ಈ ಅಡ್ವೈಸರಿ ಜಾರಿಗೊಂಡ ಬಳಿಕ ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ  ಎಲ್ಲ 32 ಇನ್ಸುರೆನ್ಸ್ ಕಂಪನಿಗಳು, ಪ್ರೈವೇಟ್ ಆಸ್ಪತ್ರೆಗಳ ಜೊತೆಗೆ ಸೇರಿ ಕೊರೊನಾ ರೋಗಿಗಳ ಚಿಕಿತ್ಸೆಗೆ ಕೌನ್ಸಿಲ್ ನ ಪ್ಯಾಕೇಜ್ ಗಳನ್ನು ಅನುಸರಿಸಲಿವೆ.


ಕೌನ್ಸಿಲ್ ಕೈಗೊಂಡಿರುವ ಈ ಕ್ರಮದಿಂದಾಗಿ, ಇನ್ಮುಂದೆ ವಿವಿಧ ಆಸ್ಪತ್ರೆಗಳು ವಿಭಿನ್ನ ಶುಲ್ಕ ವಿಧಿಸುವ ಬಗ್ಗೆ ಯಾವುದೇ ದೂರು ಇರುವುದಿಲ್ಲ. ರೋಗಿಗಳು ತಮ್ಮ ಬಳಿ ಇರುವ ಪಾಲಸಿಗೆ ಅನುಗುಣವಾಗಿ ಆಸ್ಪತ್ರೆಯನ್ನು ಆಯ್ಕೆ ಮಾಡುವ ಆಯ್ಕೆಯನ್ನು ಸಹ ಹೊಂದಿರುತ್ತಾರೆ.


ದೇಶದ ಅನೇಕ ಆಸ್ಪತ್ರೆಗಳಲ್ಲಿ ಕರೋನಾ ಚಿಕಿತ್ಸೆಗೆ ಈಗಾಗಲೇ ದರಗಳನ್ನು ನಿಗದಿಪಡಿಸಿವೆ. ಆದರೂ ಕೂಡ ಇನ್ನೂ ಹಲವಾರು ಆಸ್ಪತ್ರೆಗಳಲ್ಲಿ ಚಾರ್ಜ್ ಬಗ್ಗೆ  ಇನ್ನೂ ಸ್ಪಷ್ಟತೆ ಇಲ್ಲ.


ಆದರೆ, ಪ್ರತಿ ತಿಂಗಳಿಗೆ ಈ ದರಗಳನ್ನು ಸಹ ಪರಿಶೀಲಿಸಲಾಗುವುದು ಎಂದು ಸಾಮಾನ್ಯ ವಿಮಾ ಮಂಡಳಿ (GIC) ಹೇಳಿದೆ. ಏಕೆಂದರೆ ಕೇಂದ್ರ ಸೇರಿದಂತೆ ರಾಜ್ಯ ಸರ್ಕಾರಗಳು ಸಹ ಕಾಲಕಾಲಕ್ಕೆ ಈ ಕುರಿತು ನಿರ್ಧಾರಗಳನ್ನು ತೆಗೆದುಕೊಳ್ಳುತ್ತವೆ.


ಜನರಲ್ ಇನ್ಸುರೆನ್ಸ್ ಕೌನ್ಸಿಲ್ ನ ನೂತನ ದರಗಳ ಪ್ರಕಾರ ಮೆಟ್ರೋ ನಗರಗಳಲ್ಲಿರುವ ICU ಗಳು ಮತ್ತು ವೆಂಟಿಲೇಟರ್ ಗಳಿಗೆ ನಿತ್ಯ ಗರಿಷ್ಟ ಅಂದರೆ 15000 ಚಾರ್ಜ್ ಮಾಡಬಹುದಾಗಿದೆ. ನಾನ್-ಮೆಟ್ರೋ ನಗರಗಳಲ್ಲಿ ಈ ಚಾರ್ಜ್ ಗರಿಷ್ಟ ಅಂದಂತೆ 11,250/ದಿನ ಇರಲಿದೆ 


ಐಸೋಲೆಶನ್ ಬೆಡ್ (ಪ್ರತ್ಯೇಕ ಹಾಸಿಗೆ) ಗಾಗಿ ರೂ.8000/ದಿನ, ಬಾಡಿ ಸ್ಟೋರೇಜ್ ಗಾಗಿ ರೂ.5000 ಗರಿಷ್ಟ ಚಾರ್ಜ್ ನಿರ್ಧರಿಸಲಾಗಿದೆ. ಬ್ಲಡ್ ಶುಗರ್ ಟೆಸ್ಟ್, ಎಕ್ಸ್ ರೇ ಹಾಗೋ ECG ಟೆಸ್ಟ್ ಗೂ ಕೂಡ ಕೌನ್ಸಿಲ್ ಗರಿಷ್ಟ ಶುಲ್ಕ ಎಷ್ಟಿರಬೇಕು ಎಂಬುದನ್ನೂ ಕೂಡ ಕೌನ್ಸಿಲ್ ನಿಗದಿಪಡಿಸಿದೆ.


ಕೌನ್ಸಿಲ್ ನಿಗದಿಪಡಿಸಿದ ದರಗಳಲ್ಲಿ ಪಿಪಿಇ ಕಿಟ್‌ಗಳು, ಕೋವಿಡ್ ಪರೀಕ್ಷೆ, ಕನ್ಸಲ್ಟೆಶನ್ ಶುಲ್ಕ , ಔಷಧಿಧ ಮತ್ತು ಮೆಡಿಕಲ್ ಕನ್ಸ್ಯೂಮೆಬಲ್ ಐಟಮ್ ಗಳೂ ಕೂಡ ಶಾಮೀಲಾಗಿವೆ.. MRP ಯ ಆಧಾರದ ಮೇಲೆ ಮಾತ್ರ ಔಷಧಿಗಳ ಚಾರ್ಜ್ ಮಾಡಬೇಕು ಎಂದು ಸ್ಪಷ್ಟಪಡಿಸಲಾಗಿದೆ.


ಮೆಟ್ರೋ ನಗರಗಳ ಪ್ರತಿ ದಿನದ ಶುಲ್ಕ 
ಪ್ರತ್ಯೇಕ ಹಾಸಿಗೆ (ಆಮ್ಲಜನಕ ಸೌಲಭ್ಯದೊಂದಿಗೆ) - 10,000 ರೂ
ಐಸಿಯು ಶುಲ್ಕ (ವೆಂಟಿಲೇಟರ್ ಆರೈಕೆಯಿಲ್ಲದೆ) - 15,000 ರೂ
ಐಸಿಯು ಶುಲ್ಕ (ವೆಂಟಿಲೇಟರ್ ಆರೈಕೆಯೊಂದಿಗೆ) - 18,000 ರೂ


ರಾಜಧಾನಿ ನಗರಗಳಲ್ಲಿ ಪ್ರತಿ ದಿನ ಶುಲ್ಕ 
ಪ್ರತ್ಯೇಕ ಹಾಸಿಗೆ (ಆಮ್ಲಜನಕ ಸೌಲಭ್ಯದೊಂದಿಗೆ) - 9,000 ರೂ
ಐಸಿಯು ಶುಲ್ಕ (ವೆಂಟಿಲೇಟರ್ ಆರೈಕೆಯಿಲ್ಲದೆ) - 13,500 ರೂ
ಐಸಿಯು ಶುಲ್ಕ (ವೆಂಟಿಲೇಟರ್ ಆರೈಕೆಯೊಂದಿಗೆ) - 16,000 ರೂ


ದೇಶದ ಇತರೆ ಭಾಗಗಳಲ್ಲಿನ ಶುಲ್ಕ/ದಿನ 
ಪ್ರತ್ಯೇಕ ಹಾಸಿಗೆ (ಆಮ್ಲಜನಕ ಸೌಲಭ್ಯದೊಂದಿಗೆ) - 7,500 ರೂ
ಐಸಿಯು ಶುಲ್ಕ (ವೆಂಟಿಲೇಟರ್ ಆರೈಕೆಯಿಲ್ಲದೆ) - 11,250 ರೂ
ಐಸಿಯು ಶುಲ್ಕ (ವೆಂಟಿಲೇಟರ್ ಆರೈಕೆಯೊಂದಿಗೆ) - 13,500 ರೂ


ಟೆಸ್ಟ್ ಗಳ ದರಪಟ್ಟಿ
ರಕ್ತ ಆಮ್ಲಜನಕ ಪರೀಕ್ಷೆ (ಎಬಿಜಿ) - 400 ರೂ
ರಕ್ತದಲ್ಲಿನ ಸಕ್ಕರೆ ಮಟ್ಟ (ಬಿಎಸ್‌ಎಲ್) - 100 ರೂ
ಡಿ-ಡೈಮರ್ ಮಟ್ಟ - 800 ರೂ
ಹಿಮೋಗ್ಲೋಬಿನ್ ಪರೀಕ್ಷೆ - 150 ರೂ
ಎದೆಯ ಸಿಟಿ ಸ್ಕ್ಯಾನ್ - 3500 ರೂ
ಎದೆಯ ಎಕ್ಸರೆ (ಎಕ್ಸ್ ರೇ ಎದೆ) - 500 ರೂ
ಇಸಿಜಿ ಚೆಕ್ (ಇಸಿಜಿ) - 300 ರೂ