ನವದೆಹಲಿ:ಕೊರೊನಾ ವೈರಸ್ ಚಿಕಿತ್ಸೆಗಾಗಿ ಭಾರತದಲ್ಲಿ ಮತ್ತೊಂದು ವ್ಯಾಕ್ಸಿನ್ ಸಿದ್ಧಗೊಂಡಿದೆ. ಭಾರತ ಬಯೋಟೆಕ್ ಸಿದ್ಧಪಡಿಸಿರುವ ಕೊವ್ಯಾಕ್ಸಿನ್ ಬಳಿಕ ಇದೀಗ ಗುಜರಾತ್ ನ ಅಹ್ಮದಾಬಾದ್ ಮೂಲದ ಜಾಯಡಸ್ ಕ್ಯಾಡಿಲಾ ಹೆಲ್ತ್ ಕೇರ್ ಸಿದ್ಧಪಡಿಸಿರುವ ವ್ಯಾಕ್ಸಿನ್ ನ ಮಾನವ ಪ್ರಯೋಗಗಳಿಗಾಗಿ ಡ್ರಗ್ಸ್ ಕಂಟ್ರೋಲ್ ಜನರಲ್ ಆಫ್ ಇಂಡಿಯಾ (DCGI) ಅನುಮೋದನೆ ನೀಡಿದೆ ಎಂದು ಸರ್ಕಾರದ ಮೂಲಗಳು ಮಾಹಿತಿ ನೀಡಿವೆ.


COMMERCIAL BREAK
SCROLL TO CONTINUE READING

ಕೋವಿಡ್ -19 ಕುರಿತು ರಚಿಸಲಾಗಿರುವ ತಜ್ಞರ ಸಮಿತಿಯ ಪ್ರಸ್ತಾವನೆಯ ಮೇರೆಗೆ ಅನುಮೋದನೆ ಪ್ರಕ್ರಿಯೆಯನ್ನು ತ್ವರಿತಗೊಳಿಸಲಾಗಿದೆ. "ಡಿಸಿಜಿಐನ ವೈದ್ಯ ವಿ.ಜಿ.ಸೋಮಾನಿ ಮಾನವರ ಮೇಲೆ ಹಂತ 1 ಮತ್ತು 2 ನೇ ಹಂತದ ಕ್ಲಿನಿಕಲ್ ಪ್ರಯೋಗಕ್ಕೆ ಅನುಮೋದನೆ ನೀಡಿದ್ದಾರೆ" ಎಂದು ಈ ವಿಷಯಕ್ಕೆ ಸಂಬಂಧಿಸಿದ ಮೂಲವೊಂದರಿಂದ ಮಾಹಿತಿ ಬಂದಿದೆ. ಈ ಕಂಪನಿಯ ಲಸಿಕೆ ಪ್ರಾಣಿಗಳ ಮೇಲಿನ ಪರೀಕ್ಷೆಯಲ್ಲಿ ಯಶಸ್ವಿಯಾಗಿದೆ.


ಏತನ್ಮಧ್ಯೆ, ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ದೇಶದ ಮೊಟ್ಟ ಮೊದಲ ಸ್ವದೇಶಿ ನಿರ್ಮಿತ ಕೋವಿಡ್ -19 ಲಸಿಕೆಯಾಗಿರುವ ಕೊವಾಕ್ಸಿನ್‌ನ ಕ್ಲಿನಿಕಲ್ ಪ್ರಯೋಗಕ್ಕಾಗಿ ಒಟ್ಟು 12 ಸಂಸ್ಥೆಗಳನ್ನು ಆಯ್ಕೆ ಮಾಡಿದೆ. ಐಸಿಎಂಆರ್, ಭಾರತ್ ಬಯೋಟೆಕ್ ಇಂಟರ್ನ್ಯಾಷನಲ್ ಲಿಮಿಟೆಡ್ ಸಹಯೋಗದೊಂದಿಗೆ ಸ್ಥಳೀಯ ಕೋವಿಡ್ -19 ಲಸಿಕೆ (ಬಿಬಿವಿ 152 ಕೋವಿಡ್ ಲಸಿಕೆ) ಅಭಿವೃದ್ಧಿಪಡಿಸಿದೆ.


ವಿಶ್ವಾಧ್ಯಂತ ಪ್ರಸ್ತುತ ಒಟ್ಟು 141 ಕೊವಿಡ್-19 ಲಸಿಕೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಹಾ ನಿರ್ದೇಶಕ ಡಾ. ಡಾ. ಟೆಡ್ರೊಸ್ ಗೇಬ್ರೀಸೆಸ್ ಹೇಳಿದ್ದಾರೆ.  "ಲಸಿಕೆ ಅಭಿವೃದ್ಧಿಪಡಿಸುತ್ತಿರುವ ಪ್ರಮುಖ ಕಂಪನಿಗಳು ಲಸಿಕೆಯ ಯಶಸ್ಸಿನಿಂದ ಕೆಲವೇ ತಿಂಗಳುಗಳಷ್ಟು ದೂರವಿರಬಹುದು. ಲಸಿಕೆಯ ಕುರಿತಾದ ಸಂಪೂರ್ಣ ಸುರಕ್ಷತೆಯ ಬಗ್ಗೆ ನಾವು ಏನನ್ನು ಸುನಿಶ್ಚಿತಗೊಳಿಸಲು ಬಯಸುವುದಿಲ್ಲ ಆದರೆ. ಈ ಕುರಿತು ಭರವಸೆ ಹೊಂದಿದ್ದೇವೆ" ಎಂದು ಅವರು ಹೇಳಿದ್ದಾರೆ. ಕಳೆದ ಮಾರ್ಚ್ 11 ರಂದು ವಿಶ್ವ ಆರೋಗ್ಯ ಸಂಸ್ಥೆ ಕೊರೊನಾ ಪ್ರಕೋಪವನ್ನು ಒಂದು ಮಹಾಮಾರಿ ಎಂದು ಘೋಷಿಸಿತ್ತು. ಜಾನ್ ಹಾಫ್ಕಿನ್ಸ್ ವಿಶ್ವವಿದ್ಯಾಲಯದ ಅಂಕಿ-ಅಂಶಗಳ ಪ್ರಕಾರ ವಿಶ್ವಾದ್ಯಂತ ಸುಮಾರು 1.8 ಕೋಟಿ ಜನರು ಕೊರೊನಾ ಸೋಂಕಿನಿಂದ ಬಳಲುತ್ತಿದ್ದು, 515,000 ಜನರು ಈ ಮಾರಕ ಕಾಯಿಲೆಗೆ ಬಲಿಯಾಗಿದ್ದಾರೆ.