Covishield+Covaxin Cocktail: ಸರ್ಕಾರದ ನಿರ್ದೇಶನಗಳ ಹೊರತಾಗಿ ಸರ್ಕಾರಿ ಆಸ್ಪತ್ರೆಯಲ್ಲಿ 20 ಜನರ ಮೇಲೆ Covishield+Covaxin ಪ್ರಯೋಗ
Covishield+Covaxin Cocktail - ಇದು ಖಂಡಿತವಾಗಿಯೂ ಒಂದು ತಪ್ಪು ಎಂದು ಸಿದ್ಧಾರ್ಥನಗರದ ಮುಖ್ಯ ವೈದ್ಯಾಧಿಕಾರಿ ಸಂದೀಪ್ ಚೌಧರಿ ಹೇಳಿದ್ದಾರೆ. ಲಸಿಕೆಗಳ ಕಾಕ್ಟೈಲ್‌ಗಳನ್ನು ನೀಡಲು ಸರ್ಕಾರದಿಂದ ಯಾವುದೇ ಸೂಚನೆಗಳಿಲ್ಲ. ನಾವು ತನಿಖೆಗೆ ಆದೇಶಿಸಿದ್ದೇವೆ ಮತ್ತು ವರದಿಯನ್ನು ಸ್ವೀಕರಿಸಲಾಗಿದೆ. ತಪ್ಪಿತಸ್ಥರಿಂದ ನಾನು ಸ್ಪಷ್ಟನೆ ಕೋರಿದ್ದೇನೆ ಎಂದಿದ್ದಾರೆ.
ನವದೆಹಲಿ: Covishield+Covaxin Cocktail - ಉತ್ತರ ಪ್ರದೇಶದಲ್ಲಿ ವ್ಯಾಕ್ಸಿನೆಶನ್ ವೇಳೆ ದೊಡ್ಡ ಅಚಾತುರ್ಯ ಸಂಭವಿಸಿದೆ. ಅಲ್ಲಿನ ಒಂದು ಸರ್ಕಾರಿ ಆಸ್ಪತ್ರೆಯಲ್ಲಿ ಗ್ರಾಮಸ್ಥರಿಗೆ ವಿವಿಧ ವ್ಯಾಕ್ಸಿನ್ (Corona Vaccine) ಡೋಸ್ ನೀಡಲಾಗಿದೆ. ಈ ಪ್ರಕರಣ ನೇಪಾಳಕ್ಕೆ ಹೊಂದಿಕೊಂಡಂತೆ ಇರುವ ಸಿದ್ಧಾರ್ಥನಗರ ಜಿಲ್ಲೆಯಿಂದ ವರದಿಯಾಗಿದೆ. ಅಲ್ಲಿನ 20 ಗ್ರಾಮಸ್ಥರಿಗೆ ಕೊವ್ಯಾಕ್ಸಿನ್ (Covaxin) ಹಾಗೂ ಕೋವಿಶೀಲ್ಡ್ (Covishield) ವ್ಯಾಕ್ಸಿನ್ ಗಳ ಒಂದೊಂದು ಲಸಿಕೆಯಂತೆ ಎರಡು ಡೋಸ್ ಗಳನ್ನು ನೀಡಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿರುವ ಅಧಿಕಾರಿಗಳು ಲಸಿಕೆ ಹಾಕಿಸಿಕೊಂಡವರು ಸಂಪೂರ್ಣ ಆರೋಗ್ಯದಿಂದ ಇದ್ದಾರೆ ಎಂದಿದ್ದಾರೆ. ಬೇರೆ ಬೇರೆ ವ್ಯಾಕ್ಸಿನ್ (Different Vaccine Dose) ನೀಡಿರುವುದರಿಂದ ಅವರ ಆರೋಗ್ಯದ ಮೇಲೆ ಯಾವುದೇ ಗಂಭೀರ ಪರಿಣಾಮ ಉಂಟಾಗಿಲ್ಲ ಎಂದು ಅವರು ಹೇಳಿದ್ದಾರೆ.
ಉತ್ತರ ಪ್ರದೇಶದ ರಾಜಧಾನಿ ಲಖನೌನಿಂದ ಸುಮಾರು 270 ಕಿ.ಮೀ ದೂರದಲ್ಲಿರುವ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಈ ವ್ಯಾಕ್ಸಿನೆಶನ್ ಕಾರ್ಯಕ್ರಮ ನಡೆದಿತ್ತು. ಇಲ್ಲಿನ ಗ್ರಾಮಸ್ಥರಿಗೆ ಏಪ್ರಿಲ್ ಮೊದಲವಾರದಲ್ಲಿ ಕೊವಿಶೀಲ್ಡ್ ವ್ಯಾಕ್ಸಿನ್ ನ ಮೊದಲ ಪ್ರಮಾಣ ನೀಡಲಾಗಿತ್ತು. ಆ ಬಳಿಕ ಮೇ 14 ರಂದು ಅವರಿಗೆ ಎರಡನೆಯ ಪ್ರಮಾಣದ ರೂಪದಲ್ಲಿ ಕೊವ್ಯಾಕ್ಸಿನ್ ಲಸಿಕೆಯನ್ನು ಹಾಕಲಾಗಿದೆ.
ಇದು ಖಂಡಿತವಾಗಿಯೂ ಒಂದು ತಪ್ಪು ಎಂದು ಸಿದ್ಧಾರ್ಥನಗರದ ಮುಖ್ಯ ವೈದ್ಯಾಧಿಕಾರಿ ಸಂದೀಪ್ ಚೌಧರಿ ಹೇಳಿದ್ದಾರೆ. ಲಸಿಕೆಗಳ ಕಾಕ್ಟೈಲ್‌ಗಳನ್ನು (Vaccine Cocktail) ನೀಡಲು ಸರ್ಕಾರದಿಂದ ಯಾವುದೇ ಸೂಚನೆಗಳಿಲ್ಲ. ನಾವು ತನಿಖೆಗೆ ಆದೇಶಿಸಿದ್ದೇವೆ ಮತ್ತು ವರದಿಯನ್ನು ಸ್ವೀಕರಿಸಲಾಗಿದೆ. ತಪ್ಪಿತಸ್ಥರಿಂದ ನಾನು ಸ್ಪಷ್ಟನೆ ಕೋರಿದ್ದೇನೆ ಎಂದಿದ್ದಾರೆ.
ಇದನ್ನೂ ಓದಿ- PM Modiಗೆ ಪತ್ರ ಬರೆದ IMA, Baba Ramdev ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲು ಮನವಿ
ನಮ್ಮ ತಂಡವು ಕರೋನಾದ ವಿಭಿನ್ನ ಲಸಿಕೆಗಳನ್ನು ಪಡೆದ ಎಲ್ಲ ಜನರೊಂದಿಗೆ ಸಂವಹನ ನಡೆಸಿದ್ದು, ಅವರೆಲ್ಲರೂ ಆರೋಗ್ಯವಂತರಾಗಿದ್ದಾರೆ. ಪ್ರಸ್ತುತ ಯಾರಿಗೂ ಯಾವುದೇ ಸಮಸ್ಯೆ ಎದುರಾಗಿಲ್ಲ. ಆದರೆ, ಮತ್ತೊಂದೆಡೆ, ಆರೋಗ್ಯ ಇಲಾಖೆಯಿಂದ ಯಾರೂ ತನಿಖೆ ನಡೆಸಲು ಬಂದಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.