ಪಾಟ್ನಾ: ಬಿಹಾರದ ಬೆಗುಸರಾಯ್ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿರುವ ಜೆಎನ್‌ಯು ವಿದ್ಯಾರ್ಥಿ ಸಂಘದ ಮಾಜಿ ಮುಖಂಡ, ಪಿಹೆಚ್ ಡಿ ಪದವೀಧರ ಕನ್ಹಯ್ಯ ಕುಮಾರ್ ನಿರುದ್ಯೋಗಿಯಾಗಿದ್ದರೂ ಸಹ ಎರಡು ವರ್ಷಗಳ ಅವಧಿಯಲ್ಲಿ 8.5 ಲಕ್ಷ ರೂ. ಆದಾಯ ಹೊಂದಿರುವುದಾಗಿ ಘೋಷಿಸಿದ್ದಾರೆ. 


COMMERCIAL BREAK
SCROLL TO CONTINUE READING

ಈ ಬಗ್ಗೆ ನಾಮಪತ್ರ ಸಲ್ಲಿಸುವ ವೇಳೆ ಚುನಾವಣಾ ಆಯೋಗಕ್ಕೆ ಅಫಿಡವಿಟ್ ಸಲ್ಲಿಸಿರುವ ಕನ್ಹಯ್ಯ ಕುಮಾರ್ ಲೇಖನಗಳ ಬರವಣಿಗೆಯೇ ಮೂಲಕ ಈ ಆದಾಯ ಗಳಿಸಿರುವುದಾಗಿ ವಿವರಿಸಿದ್ದಾರೆ. 


ಬಿಜೆಪಿ ನೇತೃತ್ವದ ಎನ್ಡಿಎ ಮತ್ತು ಅದರ ಸೈದ್ಧಾಂತಿಕ ಕಾರ್ಯಸೂಚಿಗೆ ವಿರುದ್ಧವಾಗಿ ಮಾತನಾಡಿದ್ದ ಕನ್ಹಯ್ಯ ಪ್ರಸ್ತುತ ನಿರುದ್ಯೋಗಿಯಾಗಿದ್ದು, ಕಳೆದ ಎರಡು ವರ್ಷಗಳಲ್ಲಿ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡಿದ್ದಾರೆ. ಅಲ್ಲದೆ, 'ಬಿಹಾರ್ ನಿಂದ ತಿಹಾರ್' ಎಂಬ ಪುಸ್ತಕವನ್ನೂ ಸಹ ಬರೆದು ಮಾರಾಟ ಮಾಡಿದ್ದಾರೆ. ಇದರಿಂದ ಕಳೆದ ಎರಡು ವರ್ಷಗಳಲ್ಲಿ 8.5 ಲಕ್ಷ ರೂ. ಆದಾಯ ಗಳಿಸಿದ್ದಾಗಿ ನಾಮಪತ್ರ ಸಲ್ಲಿಕೆ ವೇಳೆ ವಿವರಣೆ ನೀಡಿದ್ದಾರೆ. 


ಅಫಿಡವಿಟ್ ಪ್ರಕಾರ, ಅವರ ಬಳಿ 24,000 ರೂಪಾಯಿ ನಗದು ಮತ್ತು ಹೂಡಿಕೆ ಹಾಗೂ ಉಳಿತಾಯ 357,848 ರೂ. ಇರುವುದಾಗಿ ತಿಳಿಸಿದ್ದಾರೆ.