ನವದೆಹಲಿ: ಕ್ರಿಕೆಟ್ ಆಟಗಾರ ಮೊಹಮ್ಮದ್ ಶಮಿ ತನಗೆ ಮಾನಸಿಕ ಹಿಂಸೆ ನೀಡಿದ್ದಾನೆ ಎಂದು ಅಪಾದಿಸಿ ಪತ್ನಿ ಹಾಸಿನ್ ಜಹಾನ್ ಕಾನೂನಾತ್ಮಕ ಕ್ರಮ ಕೈಗೊಳ್ಳಲು ಮುಂದಾಗಿದ್ದಾಳೆ.


COMMERCIAL BREAK
SCROLL TO CONTINUE READING

ಈ ಕುರಿತಾಗಿ ಫೇಸ್ ಬುಕ್ ಪೋಸ್ಟ್ ನಲ್ಲಿ ಬರೆದು ಕೊಂಡಿರುವ ಹಾಸಿನ್ " ಶಮಿಗೊಸ್ಕರ ನಾನೆಲ್ಲವನ್ನು ಮಾಡಿದ್ದೇನೆ ಆದರೆ ಅವನು ನನ್ನನ್ನು ಎಂದಿಗೂ ಕೂಡಾ ಪತ್ನಿಯಂತೆ ಕಾಣಲಿಲ್ಲ, ನಾನು ಅವನಿಗೆ ವಿಚ್ಚೇದನ ನೀಡುತ್ತೇನೆ, ನನ್ನ ಕೊನೆ ಉಸಿರಿರೋವರೆಗೂ ಅವನನ್ನು ಕೋರ್ಟಿನ ಕಟಕಟೆಯಲ್ಲಿ ನಿಲ್ಲಿಸಲು ಎಲ್ಲ ರೀತಿಯ ಸಾಕ್ಷ್ಯದಾರಗಳು ನನ್ನ ಬಳಿ ಇವೆ" ಎಂದು  ದೂರಿದ್ದಾರೆ. ಆದರೆ ಇದುವರೆಗೂ ಅದು ಫೇಸ್ ಬುಕ್ ಖಾತೆಯು ಅವರದೇ ಎನ್ನುವುದು ಧೃಡಪಟ್ಟಿಲ್ಲ ಎಂದು ಹೇಳಲಾಗಿದೆ.



ಆದರೆ ಹಾಸನ್ ಆರೋಪವನ್ನು  ಅಲ್ಲಗಳೆದಿರುವ ಮೊಹಮ್ಮದ್ ಶಮಿ ತನ್ನ ಕ್ರಿಕೆಟ್ ಕರಿಯರ್ ಅಂತ್ಯಗೊಳಿಸಲು ಈ ರೀತಿಯಾಗಿ ಯಾರೋ ಸಂಚು  ಮಾಡಿದ್ದಾರೆ ಎಂದು ಅವರು ಅಪಾದಿಸಿದ್ದಾರೆ.