ಮಥುರಾ: ಇತ್ತೀಚೆಗೆ ಪ್ರಚಾರದ ಕಾರಣದಿಂದಾಗಿ  ಮಹಿಳೆ ಮತ್ತು ಅಪ್ರಾಪ್ತ ಬಾಲಕಿಯರ ವಿರುದ್ಧದ ಅತ್ಯಾಚಾರ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿವೆ ಎಂದು ಬಿಜೆಪಿ ಸಂಸದೆ ಹೇಮಾ ಮಾಲಿನಿ ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಈ ಕುರಿತಾಗಿ ANIಗೆ ಮಾತನಾಡಿದ ಅವರು ಈ ಹಿಂದೆ ಅಪರಾಧಗಳು ಸಾಮಾನ್ಯವಾಗಿದ್ದವು, ಆದರೆ ಈ ದಿನಗಳಲ್ಲಿ ಇಂತಹ ಪ್ರಕರಣಗಳಿಗೆ ಹೆಚ್ಚಿನ ಪ್ರಚಾರವನ್ನು ನೀಡಲಾಗುತ್ತಿದೆ, ಈ ಹಿಂದೆ ಈ ರೀತಿಯ ಘಟನೆಗಳು ನಡೆಯುತ್ತಿದ್ದರೂ ಸಹಿತ ಯಾರಿಗೂ ಹೆಚ್ಚು ತಿಳಿಯುತ್ತಿರಲಿಲ್ಲ. ಇದಕ್ಕೆ ಸರ್ಕಾರ ಖಂಡಿತವಾಗಿಯೂ ಹೆಚ್ಚಿನ ಮುನ್ನೆಚ್ಚರಿಕೆ ಕ್ರಮವನ್ನು ತೆಗೆದುಕೊಳ್ಳುಬೇಕು ಮತ್ತು ಪರಿಹಾರವನ್ನು ಕಂಡುಕೊಳ್ಳಬೇಕು ಎಂದು ತಿಳಿಸಿದರು.


ಇತ್ತೀಚೆಗೆ, ನಡೆದ ಉತ್ತರಪ್ರದೇಶದ ಉನ್ನೊವೋದಲ್ಲಿನ ಮತ್ತು ಕಾಶ್ಮೀರದ ಕತುವಾದ ಅತ್ಯಾಚಾರ ಮತ್ತು ಹತ್ಯೆ ಪ್ರಕರಣಗಳು ಇಡೀ ದೇಶವನ್ನೇ ಬೆಚ್ಚಿ ಬಿಳಿಸಿದ್ದವು.