ನವದೆಹಲಿ: ಭಾರತಕ್ಕೆ ಮಾದಕದ್ರವ್ಯದ ಕಳ್ಳಸಾಗಣೆ ಮತ್ತು ಶಸ್ತ್ರಾಸ್ತ್ರ ಪೂರೈಕೆಯ ಪ್ರಕರಣದಲ್ಲಿ  ಇಪ್ಪತ್ತು ದಿನಗಳ ಮೊದಲು ದಾವೂದ್ ಇಬ್ರಾಹಿಂ ಅವರ ಹತ್ತಿರದ ಸಹಯೋಗಿ ಡ್ಯಾನಿಷ್ ಅಲಿಯನ್ನು ಭಾರತಕ್ಕೆ ಕರೆತರಲಾಯಿತು. ಭದ್ರತಾ ಕಾರಣಗಳಿಗಾಗಿ ಈ ಮಾಹಿತಿಯನ್ನು ರಹಸ್ಯವಾಗಿರಿಸಲಾಗಿತ್ತು. ಈಗ ಅಧಿಕಾರಿಗಳು ದಾವೂದ್ ಇಬ್ರಾಹಿಂ ಸೋದರಳಿಯ ಸೋಹೇಲ್ ಕಸ್ಕರ್ ಶೀಘ್ರದಲ್ಲೇ ಭಾರತಕ್ಕೆ ಕರೆತರಲು ಪ್ರಯತ್ನಿಸುತ್ತಿದ್ದಾರೆ. ಮಾಹಿತಿ ಪ್ರಕಾರ, ಕಸ್ಕರ್ ಅಮೇರಿಕಾದಲ್ಲಿದ್ದಾರೆ.


COMMERCIAL BREAK
SCROLL TO CONTINUE READING

ಡ್ಯಾನಿಷ್ ಅಲಿಯನ್ನು ನಿರಂತರವಾಗಿ ತನಿಖೆ ಮಾಡುತ್ತಿರುವ ಅಧಿಕಾರಿಗಳು:
ಡ್ಯಾನಿಷ್ ಅಲಿಯನ್ನು ಭಾರತಕ್ಕೆ ಕರೆತರುವಲ್ಲಿ ಯಶಸ್ವಿಯಾದ ಅಧಿಕಾರಿಗಳು, ಬಳಿಕ  ಆತನನ್ನು ನಿರಂತರವಾಗಿ ತನಿಖೆ ಮಾಡುತ್ತಿದ್ದಾರೆ. ಸೋಹೈಲ್ ಕಸ್ಕರ್ ಯುಎಸ್ನಲ್ಲಿದ್ದರೆ. ಭಾರತೀಯ ಅಧಿಕಾರಿಗಳು ಇನ್ನೂ ರಾಜತಾಂತ್ರಿಕ ಮಾರ್ಗಗಳ ಮೂಲಕ ಅವರನ್ನು ವಶಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.

ಮತ್ತೊಂದೆಡೆ, ಹಸ್ತಾಂತರದ ನಂತರ ಮುಂಬೈ ಕ್ರೈಂ ಬ್ರಾಂಚ್ ನಕಲಿ ಆರೋಪಗಳ ಮೇಲೆ  ಡ್ಯಾನಿಶ್ ಅಲಿಯನ್ನು ಬಂಧಿಸಿದೆ. ಡ್ಯಾನಿಶ್ ಮೂಲತಃ ದೆಹಲಿಯ ಜಾಮಾ ಮಸೀದಿ ಪ್ರದೇಶದ ನಿವಾಸಿಯಾಗಿದ್ದು, ಅವರ ಕುಟುಂಬವು ಆರ್ಥಿಕವಾಗಿ ದುರ್ಬಲವಾಗಿದೆ. ಅವನ ವಿರುದ್ಧ ದೆಹಲಿಯಲ್ಲಿ ಅನೇಕ ಪ್ರಕರಣಗಳು ದಾಖಲಾಗಿದ್ದು, ಆತನನ್ನು ದೆಹಲಿ ಸ್ಪೆಶಲ್ ಸೆಲ್ಗೆ ಹಸ್ತಾಂತರಿಸಲಾಗುವುದು. 


ಡ್ಯಾನಿಷ್ ಅಲಿಯನ್ನು ಪ್ರಶ್ನಿಸುವಾಗ ಸೋಹೈಲ್ ಕಸ್ಕರ್ ಮತ್ತು ದಾವೂದ್ ಇಬ್ರಾಹಿಂ ಗ್ಯಾಂಗ್ಗೆ ಸಂಬಂಧಿಸಿದ ಪ್ರಮುಖ ಮಾಹಿತಿಗಳನ್ನು ಸಂಗ್ರಹಿಸಬಹುದು ಎಂಬ ಭರವಸೆಯನ್ನು  ಪೊಲೀಸರು ಮತ್ತು ಭದ್ರತಾ ಸಂಸ್ಥೆಗಳು ಹೊಂದಿವೆ ಎನ್ನಲಾಗಿದೆ.