Crime: 8ನೇ ತರಗತಿ ವಿದ್ಯಾರ್ಥಿನಿಯ ಮೇಲೆ 8 ಯುವಕರಿಂದ ಗ್ಯಾಂಗ್ ರೇಪ್, 50 ಸಾವಿರ ಪಡೆದು ವಿಡಿಯೋ ವೈರಲ್ ಮಾಡಿದ ನೀಚರು
Crime: ಈ ಪ್ರಕರಣದ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು, ಪ್ರಕರಣದ ತನಿಖೆಯನ್ನು ಕಿಶನ್‌ಗಢ್ ಬಾಸ್‌ನ ಡಿಎಸ್‌ಪಿ ಅತುಲ್ ಅಗ್ರೆ ಅವರಿಗೆ ಹಸ್ತಾಂತರಿಸಲಾಗಿದೆ. ಸಂತ್ರಸ್ತೆಯ ವೈದ್ಯಕೀಯ ಪರೀಕ್ಷೆ ನಡೆಸಿದ ಬಳಿಕ ಹೆಚ್ಚಿನ ತನಿಖೆ ನಡೆಸಲಾಗುವುದು ಎಂದು ಅಗ್ರೆ ತಿಳಿಸಿದ್ದಾರೆ. ಇದಲ್ಲದೆ, ಆರೋಪಿಗಳ ಬಂಧನಕ್ಕೆ ಪೊಲೀಸರು ವಿಶೇಷ ತಂಡಗಳನ್ನು ರಚಿಸಿದ್ದಾರೆ. ಆರೋಪಿಗಳ ಗುರುತು ಪತ್ತೆಯಾಗಿದ್ದು, ಶೀಘ್ರವೇ ಬಂಧಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
Crime: ರಾಜಸ್ಥಾನದ ಅಲ್ವಾರ್ ಜಿಲ್ಲೆಯ ಕಿಶನ್‌ಗಢ್ ಬಾಸ್ ಪ್ರದೇಶದಲ್ಲಿ 8 ನೇ ತರಗತಿಯಲ್ಲಿ ಓದುತ್ತಿರುವ 16 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಅಶ್ಲೀಲ ವೀಡಿಯೊಗಳನ್ನು ಚಿತ್ರೀಕರಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. 8 ಮಂದಿ ಈ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ನಂತರ ವಿಡಿಯೋ ಮಾಡಿ ಬ್ಲಾಕ್‌ಮೇಲ್ ಮಾಡುವುದರ ಜೊತೆಗೆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ. ಸಂತ್ರಸ್ತೆಯ ಕುಟುಂಬಸ್ಥರ ದೂರಿನ ಮೇರೆಗೆ ಪೊಲೀಸರು ಎಲ್ಲಾ ಆರೋಪಿಗಳ ವಿರುದ್ಧ ಪೋಕ್ಸೋ ಕಾಯ್ದೆ, ಸಾಮೂಹಿಕ ಅತ್ಯಾಚಾರ ಮತ್ತು ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಈ ಪ್ರಕರಣದ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು, ಪ್ರಕರಣದ ತನಿಖೆಯನ್ನು ಕಿಶನ್‌ಗಢ್ ಬಾಸ್‌ನ ಡಿಎಸ್‌ಪಿ ಅತುಲ್ ಅಗ್ರೆ ಅವರಿಗೆ ಹಸ್ತಾಂತರಿಸಲಾಗಿದೆ. ಸಂತ್ರಸ್ತೆಯ ವೈದ್ಯಕೀಯ ಪರೀಕ್ಷೆ ನಡೆಸಿದ ನಂತರ ಹೆಚ್ಚಿನ ತನಿಖೆ ಕೈಗೊಳ್ಳಲಾಗುವುದು ಎಂದು ಅಗ್ರೆ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದು, ಆರೋಪಿಗಳ ಬಂಧನಕ್ಕೆ ವಿಶೇಷ ತಂಡಗಳನ್ನು ರಚಿಸಿದ್ದಾರೆ. ಪ್ರಸ್ತುತ ಆರೋಪಿಗಳನ್ನು ಗುರುತಿಸಲಾಗಿದ್ದು, ಶೀಘ್ರವೇ ಎಲ್ಲರನ್ನೂ ಬಂಧಿಸುವುದಾಗಿ ಅಗ್ರೆ ಹೇಳಿದ್ದಾರೆ.
ಅಶ್ಲೀಲ ಫೋಟೋ ಕಳುಹಿಸಿ ಬೆದರಿಕೆ
31 ಡಿಸೆಂಬರ್ 2021 ರಂದು ರಾಜೋತ್ ನಿವಾಸಿ ರಫೀಕ್ ಅವರ ಮಗ ಸಾಹಿಲ್ ತನ್ನ ಸಹೋದರನ ಫೋನ್‌ಗೆ ಕರೆ ಮಾಡಿದ್ದಾನೆ ಎಂದು ಸಂತ್ರಸ್ತೆ ತನ್ನ ದೂರಿನಲ್ಲಿ ತಿಳಿಸಿದ್ದಾರೆ. ಈ ವೇಳೆ ತನ್ನ ಬಳಿ ಅಶ್ಲೀಲ ಫೋಟೋಗಳು ಇದ್ದು, ಬರದಿದ್ದರೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದಿದ್ದಾಳೆ.
ಈ ಬೆದರಿಕೆಯ ನಂತರ ಅವಳು ಸಾಹಿಲ್ ಬಳಿ ತಲುಪಿದಾಗ, 8 ಹುಡುಗರು ಅಲ್ಲಿದ್ದರು ಮತ್ತು ಬೆದರಿಸಿ ಬಲವಂತವಾಗಿ ಬಟ್ಟೆಗಳನ್ನೆಲ್ಲ ಬಿಚ್ಚಿಸಿ ಅಶ್ಲೀಲ ವಿಡಿಯೋ ಮಾಡಿದ್ದಾರೆ. ಇದಾದ ಬಳಿಕ 'ಈ ಅಶ್ಲೀಲ ವೀಡಿಯೋವನ್ನು ವೈರಲ್ ಮಾಡಿ, ಎಲ್ಲಿಯೂ ಮುಖ ತೋರಿಸದಂತೆ ಮಾಡುತ್ತೇವೆ' ಎಂದು ಬೆದರಿಕೆಯೋಡ್ಡಿದ್ದಾರೆ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾಳೆ.
ಅತ್ಯಾಚಾರದ ವಿಡಿಯೋ ಮಾಡುವ ಮೂಲಕ ಸಾಮೂಹಿಕ ಅತ್ಯಾಚಾರ
ಸಂತ್ರಸ್ತೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ 'ಇವರು ನನ್ನ ವಿಡಿಯೋ ಮಾಡಿದ್ದಾರೆ ಮತ್ತು ನಂತರ ಎಲ್ಲರೂ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ. ನಾನು ಹಲವಾರು ಗಂಟೆಗಳ ಕಾಲ ಪ್ರಜ್ಞಾಹೀನ ಸ್ಥಿತಿಯಲ್ಲಿ ಮಲಗಿದ್ದೆ ಮತ್ತು ನಂತರ ಹೇಗಾದರೂ ಮಾಡಿ ನನ್ನ ಮನೆಗೆ ಮರಳಿದ್ದೇನೆ' ಎಂದು ತಿಳಿಸಿದ್ದಾರೆ.
ಇದನ್ನೂ ಓದಿ-ಸತತ ಆರನೇ ಬಾರಿಗೆ ಸ್ವಚ್ಛ ನಗರಿ ಸ್ಥಾನ ಪಡೆದ ಇಂದೋರ್
ಸಂತ್ರಸ್ತೆಯ ಪ್ರಕಾರ, ಈ ಎಲ್ಲಾ ಆರೋಪಿಗಳು ಆಕೆಯನ್ನು ಯಾರಿಗಾದರೂ ಹೇಳಿದರೆ, ವೀಡಿಯೊ ವೈರಲ್ ಆಗುತ್ತದೆ ಎಂದು ಬೆದರಿಕೆ ಹಾಕಿದ್ದರು ಎನ್ನಲಾಗಿದೆ, ಅದಕ್ಕೆ ಅವರು ಬೆದರಿದ್ದಾಳೆ. ಇದಾದ ಬಳಿಕ ಆರೋಪಿಗಳು ಆಕೆಯನ್ನು ಬ್ಲಾಕ್ ಮೇಲ್ ಮಾಡಿ ನಿಧಾನವಾಗಿ ಹಣ ಸುಲಿಗೆ ಆರಂಭಿಸಿದ್ದರು. ಏತನ್ಮಧ್ಯೆ ಜನವರಿ 3 ಮತ್ತು ಏಪ್ರಿಲ್ 6 ರಂದು ಕೂಡ ಕರೆ ಮಾಡಿ ಆರೋಪಿಗಳು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ-5G Launch in India : ಆಗ 1GB ಡೇಟಾ ಬೆಲೆ ₹300 ಈಗ ಪ್ರತಿ GB ಗೆ ₹10 : ದೇಶದಲ್ಲಿ 5G ಸೇವೆ!
2.5 ಲಕ್ಷ ಹಣ ನೀಡದ ಕಾರಣಕ್ಕೆ ಅತ್ಯಾಚಾರದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್
ಏತನ್ಮಧ್ಯೆ, ಆರೋಪಿಗಳು ಈ ಹಿಂದೆ ಸಂತ್ರಸ್ತೆಯಿಂದ 2.5 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು, ಅದನ್ನು ಪೂರೈಸಲು ಸಂತ್ರಸ್ತೆಗೆ ಸಾಧ್ಯವಾಗಿಲ್ಲ, ನಂತರ ಅವರು ಸಂತ್ರಸ್ತೆಯ ಅಶ್ಲೀಲ ವೀಡಿಯೊವನ್ನು ವೈರಲ್ ಮಾಡಿದ್ದಾರೆ. ಬಾಲಕಿಯ ವಿಡಿಯೋ ಕುಟುಂಬಸ್ಥರಿಗೆ ತಲುಪಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದ್ದು, ಬಾಲಕಿಯನ್ನು ವಿಚಾರಿಸಿದಾಗ ನಡೆದ ಘಟನೆಯ ಕುರಿತು ಅವರು ಪೋಷಕರಿಗೆ ಮಾಹಿತಿ ನೀಡಿದ್ದಾಳೆ. ಸಂತ್ರಸ್ತೆ ನಂತರ ಕುಟುಂಬ ಸದಸ್ಯರೊಂದಿಗೆ ಪೊಲೀಸ್ ಠಾಣೆಗೆ ಬಂದು ಆರೋಪಿಗಳ ವಿರುದ್ಧ ಹೆಸರನ್ನು ಉಲ್ಲೇಖಿಸಿ ರಿಪೋರ್ಟ್ ದಾಖಲಿಸಿದ್ದಾಳೆ.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.