ನವದೆಹಲಿ:  ಇತ್ತೀಚೆಗೆ  ಸುಪ್ರಿಂ ಕೋರ್ಟ್  ಪ್ರತಿರೋಧ ಎನ್ನುವುದು ಪ್ರಜಾಪ್ರಭುತ್ವದ ರಕ್ಷಾ ಕವಚ ಎಂದು ತೀರ್ಪು ನೀಡಿತ್ತು. ಅದಾದ ನಂತರ ಈಗ ಕಾನೂನು ಆಯೋಗ ಸರ್ಕಾರವನ್ನು ಟೀಕಿಸುವುದು ದೇಶದ್ರೋಹವಲ್ಲ ಎನ್ನುವ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯದ ಮೌಲ್ಯವನ್ನು ಎತ್ತಿ  ಹಿಡಿದಿದೆ.


COMMERCIAL BREAK
SCROLL TO CONTINUE READING

ಇತ್ತೀಚಿಗೆ ಸರ್ಕಾರ ಐವರು ಮಾವನ ಹಕ್ಕು ಹೋರಾಟಗಾರರನ್ನು ಬಂಧಿಸಿದ ನಂತರ  ಕಾನೂನು ಆಯೋಗದ ಹೇಳಿಕೆ ಮಹತ್ವ ಪಡೆದಿದೆ.ಈ ಕುರಿತಾಗಿ ತನ್ನ ಹೇಳಿಕೆ ನೀಡಿರುವ ಆಯೋಗ " ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತಂದು ಹಿಂಸಾಚಾರವನ್ನು ಉಂಟು ಮಾಡಿದ್ದಲ್ಲಿ ಮಾತ್ರ ಅದು ದೇಶ ದ್ರೋಹವಾಗುತ್ತದೆ ಎಂದು ಕಾನೂನು ಆಯೋಗ ಅಭಿಪ್ರಾಯಪಟ್ಟಿದೆ.


ಪ್ರತಿಯೊಂದು ಬೇಜಾವಾಬ್ದಾರಿಯುತ ಮುಕ್ತ ಹೇಳಿಕೆಗಳನ್ನು ದೇಶದ್ರೋಹ ಎಂದು ವಾಖ್ಯಾನಿಸಲು ಬರುವುದಿಲ್ಲ.ಅಲ್ಲದೆ ಕೇವಲ ವಿಚಾರವನ್ನು ವ್ಯಕ್ತಪಡಿಸುವ ಕಾರಣಕ್ಕಾಗಿ ವ್ಯಕ್ತಿಯನ್ನು ಈ ಕಾಯ್ದೆಯಡಿಯಲ್ಲಿ  ಬಂಧಿಸಲು ಬರುವುದಿಲ್ಲ ಎಂದು ಹೇಳಿದೆ.


ರಾಷ್ಟ್ರದಲ್ಲಿನ ವಿಧ್ಯಮಾನಗಳ ಕುರಿತಾಗಿ ಪ್ರತಿರೋಧ ವ್ಯಕ್ತಪಡಿಸುವುದು ಕೂಡ ಈ ಕಾಯ್ದೆಯ ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂದು ಆಯೋಗ ತಿಳಿಸಿದೆ.