ಛತ್ತೀಸ್ ಗಡ್: ನಕ್ಸಲರ ವಿರುದ್ಧ ಗುಂಡಿನ ಚಕಮಕಿ, ಕರ್ನಾಟಕದ ಸಿಆರ್ಪಿಎಫ್ ಯೋಧ ಹುತಾತ್ಮ
ಛತ್ತೀಸ್ ಗಡ್ ದ ಬಿಜಾಪುರ ಜಿಲ್ಲೆಯ ಕೇಶಕುತುಲ್ ಪ್ರದೇಶದಲ್ಲಿ ಭದ್ರತಾ ಪಡೆ ಮತ್ತು ನಕ್ಸಲರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) ಕನಿಷ್ಠ ಮೂವರು ಸೈನಿಕರು ಮೃತಪಟ್ಟಿದ್ದಾರೆ. ಮೃತಪಟ್ಟಿರುವ ಮೂವರು ಸೈನಿಕರಲ್ಲಿ ಕರ್ನಾಟಕದ ಯೋಧರೊಬ್ಬರು ಸಹಿತ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ನವದೆಹಲಿ: ಛತ್ತೀಸ್ ಗಡ್ ದ ಬಿಜಾಪುರ ಜಿಲ್ಲೆಯ ಕೇಶಕುತುಲ್ ಪ್ರದೇಶದಲ್ಲಿ ಭದ್ರತಾ ಪಡೆ ಮತ್ತು ನಕ್ಸಲರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) ಕನಿಷ್ಠ ಮೂವರು ಸೈನಿಕರು ಮೃತಪಟ್ಟಿದ್ದಾರೆ. ಮೃತಪಟ್ಟಿರುವ ಮೂವರು ಸೈನಿಕರಲ್ಲಿ ಕರ್ನಾಟಕದ ಯೋಧರೊಬ್ಬರು ಸಹಿತ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಗುಲ್ಬರ್ಗಾದ ಪಿ.ಮಹಾದೇವ, ಅಲಿಗಡ್ ನ ಮದನ್ ಪಾಲ್ ಸಿಂಗ್, ಕೇರಳದ ಇಡುಕ್ಕಿ ನಿವಾಸಿ ಸಾಜು.ಒ.ಪಿ ಎಂದು ಮೃತಪಟ್ಟಿರುವ ಸೈನಿಕರನ್ನು ಗುರುತಿಸಲಾಗಿದೆ.ವರದಿಗಳ ಪ್ರಕಾರ ಎನ್ ಕೌಂಟರ್ ನಡೆದ ಸ್ಥಳದಲ್ಲಿಯೇ ಒಬ್ಬ ಸಿಆರ್‌ಪಿಎಫ್ ಯೋಧ ಮೃತಟ್ಟರೆ, ಉಳಿದವರು ನಂತರ ಮೃತಪಟ್ಟಿದ್ದಾರೆ ಎನ್ನಲಾಗಿದೆ.ಈಗ ಎನ್‌ಕೌಂಟರ್ ನಡೆದ ಸ್ಥಳಕ್ಕೆ ಬ್ಯಾಕಪ್ ಪಾರ್ಟಿಯನ್ನು ಸಹ ರವಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ನಕ್ಸಲರ ವಿರುದ್ಧ ನಡೆದ ಕಾರ್ಯಾಚರಣೆ ಸಂದರ್ಭದಲ್ಲಿ 199 ಬೆಟಾಲಿಯನ್‌ನ ಸಿಆರ್‌ಪಿಎಫ್ ಸಿಬ್ಬಂದಿ ಕಾರ್ಯನಿರತರಾಗಿದ್ದರು ಎಂದು ಹೇಳಲಾಗಿದೆ. ಸಿಆರ್ಪಿಎಫ್ ಮತ್ತು ನಕ್ಸಲರ ನಡುವೆ ಎನ್‌ಕೌಂಟರ್ ನಡೆಯುತ್ತಿದ್ದಾಗ ಆ ಪ್ರದೇಶದಲ್ಲಿ ಪಿಕ್ ಅಪ್ ವ್ಯಾನ್ ಬಂದಿದ್ದು, ವಾಹನದಲ್ಲಿದ್ದ ಗ್ರಾಮಸ್ಥರೊಬ್ಬರು ಗಾಯಗೊಂಡು ತದನಂತರ ಮೃತಪಟ್ಟಿದ್ದಾರೆ ಎನ್ನಲಾಗಿದೆ.