Aeronautical test launch : ಈ ಹಿಂದೆ ಬೆಳಗ್ಗೆ 8 ಗಂಟೆಗೆ ಪರೀಕ್ಷಾರ್ಥ ಉಡಾವಣೆ ಮಾಡಲು ಇಸ್ರೋ ಪ್ಲಾನ್ ಮಾಡ್ಕೊಂಡಿತ್ತು. ಇದೀಗ ಸಮಯ ಚೇಂಜ್ ಆಗಿದೆ. ಚಂದ್ರಯಾನ ಆಯ್ತು, ಸೂರ್ಯಯಾನ  ಆಯ್ತು, ಈಗ ಗಗನಯಾನಕ್ಕೆ ಇಸ್ರೋ ಕೈ ಹಾಕಿದೆ. ಚಂದ್ರಯಾನ-3ರ ಯಶಸ್ಸಿನ ಬೆನ್ನಲ್ಲೇ ಗಗನಯಾನದತ್ತ ಇಸ್ರೋ ಗುರಿಯಿಟ್ಟಿದೆ.  


COMMERCIAL BREAK
SCROLL TO CONTINUE READING

ಪರೀಕ್ಷೆ ಉದ್ದೇಶ? 


1. ಸುರಕ್ಷತೆಯ ಖಾತ್ರಿ: ವಿವಿಧ ಪರೀಕ್ಷೆಗಳನ್ನು ಕೈಗೊಳ್ಳುವುದರಿಂದ, ಕ್ರ್ಯೂ ಎಸ್ಕೇಪ್ ಸಿಸ್ಟಮ್ ಸೇರಿದಂತೆ ಎಲ್ಲ ವ್ಯವಸ್ಥೆಗಳು ಉದ್ದೇಶಿತ ರೀತಿಯಲ್ಲಿ ಕಾರ್ಯಾಚರಿಸುತ್ತವೆಯೇ ಅನ್ನೋದು ಖಾತ್ರಿಯಾಗಲಿದೆ.ಇದು ಗಗನಯಾತ್ರಿಗಳ ಸುರಕ್ಷತೆಯನ್ನ ಖಚಿತಪಡಿಸುತ್ತೆ


ಇದನ್ನೂ ಓದಿ: Daily GK Quiz: ಯಾವ ತರಕಾರಿಯನ್ನು ದೇಸಿ ಮಟನ್ ಎಂದು ಕರೆಯಲಾಗುತ್ತದೆ? 


2. ತಂತ್ರಜ್ಞಾನದ ಖಚಿತತೆ : ಪರೀಕ್ಷೆಗಳನ್ನು ನಡೆಸುವ ಮೂಲಕ ಮಾನವ ಸಹಿತ ಗಗನಯಾತ್ರೆ ಕೈಗೊಳ್ಳಲು ಅವಶ್ಯಕವಾದ ಜೀವ ಬೆಂಬಲ ವ್ಯವಸ್ಥೆ ಹಾಗೂ ಬಾಹ್ಯಾಕಾಶ ಕ್ಯಾಪ್ಸೂಲ್ ಸೇರಿದಂತೆ ವಿವಿಧ ಆಧುನಿಕ ತಂತ್ರಜ್ಞಾನಗಳ ಕಾರ್ಯಾಚರಣೆಯನ್ನು ಖಚಿತಪಡಿಸಿಕೊಳ್ಳಲು ಸಾಧ್ಯ


3. ಅಪಾಯಗಳನ್ನ ತಗ್ಗಿಸುವುದು : ಸಮರ್ಪಕವಾಗಿ ಪರೀಕ್ಷೆಗಳನ್ನು ಕೈಗೊಳ್ಳುವುದರಿಂದ, ಸಂಭಾವ್ಯ ಸಮಸ್ಯೆಗಳು ಹಾಗೂ ಅಪಾಯಗಳನ್ನು ಗುರುತಿಸಿ, ನೈಜ ಮಾನವ ಸಹಿತ ಯೋಜನಾ ಜಾರಿಗೂ ಮುನ್ನವೇ ಅದನ್ನು ಸರಿಪಡಿಸಲು ಸಾಧ್ಯ


4. ಸಿಬ್ಬಂದಿ ತರಬೇತಿ : ಸಂಪೂರ್ಣ ಪರೀಕ್ಷೆಗಳನ್ನು ನಡೆಸುವುದರಿಂದ, ಗಗನಯಾತ್ರಿಗಳು ಮತ್ತು ಭೂ ಸಿಬ್ಬಂದಿಗಳಿಗೆ ಪರಿಪೂರ್ಣ ತರಬೇತಿ ಲಭಿಸುತ್ತದೆ. ಎಲ್ಲ ಉಪಕರಣಗಳನ್ನು, ಕಾರ್ಯಾಚರಣೆಗಳನ್ನು ಸರಿಯಾಗಿ ಅರ್ಥೈಸಿಕೊಳ್ಳಲು ಸಾಧ್ಯ


5. ಯೋಜನಾ ಯಶಸ್ಸು: ಎಲ್ಲ ವ್ಯವಸ್ಥೆಗಳು ಸರಿಯಾದ ರೀತಿಯಲ್ಲಿ ಕಾರ್ಯಾಚರಿಸುತ್ತಿವೆ ಎಂದುಖಾತ್ರಿಪಡಿಸಿಕೊಳ್ಳುವುದರಿಂದ, ಯೋಜನೆಯ ಯಶಸ್ಸು ಸಾಧಿಸುವ ಸಾಧ್ಯತೆಗಳು ಹೆಚ್ಚಾಗಿ, ಗಗನಯಾನ ಯೋಜನೆಯ ಗುರಿಗಳನ್ನು ಸಾಧಿಸಲು ನೆರವು


ಇದನ್ನೂ ಓದಿ: ಒಡಿಶಾದ ನೂತನ ರಾಜ್ಯಪಾಲರಾಗಿ ರಘುಬರ್ ದಾಸ್, ತ್ರಿಪುರಾದ ರಾಜ್ಯಪಾಲರಾಗಿ ಇಂದ್ರ ಸೇನಾ ರೆಡ್ಡಿ ನೇಮಕ 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.