ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ಹಿನ್ನೆಲೆಯಲ್ಲಿ ಗುವಾಹಟಿಯಲ್ಲಿ ವಿಧಿಸಲಾಗಿದ್ದ ಕರ್ಫ್ಯೂವನ್ನು ಮಂಗಳವಾರ ಬೆಳಗ್ಗೆ ತೆಗೆದುಹಾಕಲಾಗಿದೆ. ದಿಬ್ರುಗರ್ ಅಧಿಕಾರಿಗಳು ಕೂಡ ಜಿಲ್ಲೆಯ ಕರ್ಫ್ಯೂ ಅನ್ನು ಬೆಳಗ್ಗೆ 6 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ಸಡಿಲಗೊಳಿಸಿದರು. ರಾಜ್ಯದ ಕಾನೂನು ಸುವ್ಯವಸ್ಥೆ ಕುರಿತು ಪರಿಶೀಲನೆ ನಡೆಸಲು ಸಭೆ ನಡೆಸಿದ ನಂತರ ರಾಜ್ಯ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ಈ ನಿರ್ಧಾರ ಕೈಗೊಂಡಿದ್ದಾರೆ. "ಗುವಾಹಟಿ(Guwahati)ಯಲ್ಲಿ ಮಂಗಳವಾರ ಬೆಳಿಗ್ಗೆ 6 ಗಂಟೆಯಿಂದ ಕರ್ಫ್ಯೂ ಅನ್ನು ಸಂಪೂರ್ಣವಾಗಿ ತೆಗೆದುಹಾಕಲು ನಿರ್ಧರಿಸಲಾಗಿದೆ" ಎಂದು ಸಿಎಂಒ ಹೇಳಿಕೆ ಮಂಗಳವಾರ ತಿಳಿಸಿದೆ. ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯಲ್ಲಿ ಅಂತರ್ಜಾಲ ಸೇವೆಗಳನ್ನು ಮಂಗಳವಾರ ಸಂಜೆ 5 ಗಂಟೆಯವರೆಗೆ ಸ್ಥಗಿತಗೊಳಿಸಲಾಗುವುದು ಎಂದು ಹೇಳಲಾಗಿದೆ.


ಪೌರತ್ವ (ತಿದ್ದುಪಡಿ) ಕಾಯ್ದೆ(Citizenship Amendment Act)ಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿವೆ. ವಕೀಲ ಪ್ರಶಾಂತ್ ಭೂಷಣ್ ಅವರ ಮೂಲಕ ಸಲ್ಲಿಸಿದ ಮನವಿಯು ಈ ಕಾಯ್ದೆಯನ್ನು ಅಸಂವಿಧಾನಿಕ ಮತ್ತು ಕಾನೂನುಬಾಹಿರ ಎಂದು ಘೋಷಿಸಲು ಮನವಿ ಮಾಡಿವೆ.


COMMERCIAL BREAK
SCROLL TO CONTINUE READING

“ಈ ಅಧಿಸೂಚನೆಗಳು ಮತ್ತು ತಿದ್ದುಪಡಿ ಕಾಯ್ದೆ ಅಸಂವಿಧಾನಿಕ .ಏಕೆಂದರೆ ಅವು ತಾರತಮ್ಯ ಮತ್ತು ಸಂವಿಧಾನದ ಯೋಜನೆಯಡಿ ಎಲ್ಲ ವ್ಯಕ್ತಿಗಳ ಸಮಾನತೆಯ ಹಕ್ಕನ್ನು ಉಲ್ಲಂಘಿಸುತ್ತವೆ. ಅವರು ಮೂರು ದೇಶಗಳನ್ನು ಹೊರತುಪಡಿಸಿ ಭಾರತದ ನೆರೆಹೊರೆಯ ಇತರ ದೇಶಗಳಿಂದ ಅಕ್ರಮವಾಗಿ ವಲಸೆ ಬಂದವರ ಬಗ್ಗೆ ತಾರತಮ್ಯ ಹೊಂದಿದ್ದಾರೆ ಮತ್ತು ಇತರ ಅಲ್ಪಸಂಖ್ಯಾತ ಸಮುದಾಯಗಳಾದ ಮುಸ್ಲಿಮರು, ಯಹೂದಿಗಳು, ಅಹ್ಮದಿಯರು ಅಥವಾ ನಾಸ್ತಿಕರು ಧಾರ್ಮಿಕ ಗುಂಪಿನೊಂದಿಗೆ ಗುರುತಿಸಿಕೊಳ್ಳದವರ ಬಗ್ಗೆ ತಾರತಮ್ಯ ಹೊಂದಿದ್ದಾರೆ ”ಎಂದು ಮನವಿಯಲ್ಲಿ ತಿಳಿಸಲಾಗಿದೆ.