ನವದೆಹಲಿ: ರೈಲ್ವೆ ಪಾರ್ಸೆಲ್ ಮೂಲಕ ಹಣ ಕಳ್ಳ ಸಾಗಾಣೆ ಮಾಡುತ್ತಿದ್ದ ಪ್ರಕರಣ ಮಂಗಳವಾರ ನವದೆಹಲಿ ರೈಲು ನಿಲ್ದಾಣದಲ್ಲಿ ಬೆಳಕಿಗೆ ಬಂದಿದೆ. ರೂ. 10 ಮತ್ತು ರೂ. 50ರ ಮುಖಬೆಲೆಯ ಸುಮಾರು 24.60 ಲಕ್ಷ ರೂಪಾಯಿಗಳನ್ನು ಡುರಾಂಟೊ ಎಕ್ಸ್ಪ್ರೆಸ್ ಮೂಲಕ 8 ಬ್ಯಾಗ್ ಗಳಲ್ಲಿ ದೆಹಲಿಗೆ ಕಳ್ಳ ಸಾಗಾಣೆ ಮಾಡಲಾಗಿದೆ. ಈ ಹಣವನ್ನು ಯಾರು ಕಳುಹಿಸಿದರು ಮತ್ತು ದೆಹಲಿಯಲ್ಲಿ ಯಾರಿಗೆ ರವಾನೆಯಾಗುತ್ತಿತ್ತು ಎಂಬುದರ ಬಗ್ಗೆ ಕಸ್ಟಮ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.


COMMERCIAL BREAK
SCROLL TO CONTINUE READING

ಮಂಗಳವಾರ ಮಧ್ಯಾಹ್ನ 12:30ರ ಸುಮಾರಿಗೆ ಹೊಸದಿಲ್ಲಿ ರೈಲು ನಿಲ್ದಾಣದ ನಿರ್ದೇಶಕ ಸಂದೀಪ್ ಗಹ್ಲೋಟ್ ಬಳಿ ಆಗಮಿಸಿದರು. ಸೀಲ್ದಾಹ್ ನಿಂದ ನವದೆಹಲಿಗೆ ಆಗಮಿಸುವ  ಡುರಾಂಟೊ ಎಕ್ಸ್ಪ್ರೆಸ್ನಲ್ಲಿ ದೊಡ್ಡ ಪ್ರಮಾಣದಲ್ಲಿ ಹಣ ಕಳ್ಳಸಾಗಣೆ ಮಾಡಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಈ ರೂಪಾಯಿ ಪುನಶ್ಚೇತನಕ್ಕಾಗಿ ವಿಶೇಷ ತಂಡವನ್ನು ರಚಿಸಲಾಗಿತ್ತು. ಈ ತಂಡದಲ್ಲಿ ರೈಲ್ವೆ ಮತ್ತು ಕಸ್ಟಮ್ಸ್ ಇಲಾಖೆಯ ಕೆಲವು ಅಧಿಕಾರಿಗಳಿದ್ದರು.


ಸೀಲ್ದಾಹ್ ಡುರಾಂಟೊ ಎಕ್ಸ್ಪ್ರೆಸ್ ಸುಮಾರು 01:30ರ ವೇಳೆಗೆ ನವದೆಹಲಿ ರೈಲು ನಿಲ್ದಾಣದ ಫ್ಲಾಟ್ ಫಾರ್ಮ್ ನಂ. 8ಕ್ಕೆ ಬಂದಿತು. ಇಲ್ಲಿ ರೈಲಿನ ಲಗೇಜ್ ವ್ಯಾಗನ್ SLR(ರೈಲ್ವೆದಲ್ಲಿ ಕಾಯ್ದಿರಿಸಿದ ಸರಕುಗಳನ್ನು ಸಾಗಿಸುವ ವ್ಯಾಗನ್)ನಲ್ಲಿ ಹಣ ತುಂಬಿದ್ದ ಬ್ಯಾಗ್ ಗಳನ್ನು ಲೋಡ್ ಮಾಡಲಾಗಿದೆ. ಈ ಸಮಯದಲ್ಲಿ ಸಂದೇಹದ ಆಧಾರದ ಮೇಲೆ ಎಂಟು ಬ್ಯಾಗ್ ಗಳನ್ನು ತೆಗೆದು ನೋಡಲಾಯಿತು. ಈ ಬ್ಯಾಗ್ ಗಳನ್ನು ತೆರೆದಾಗ, ಅವುಗಳಲ್ಲಿ ಒಂದರ ಹಿಂದೆ ಒಂದರಂತೆ ಎಂಟು ಬ್ಯಾಗ್ ಗಳಲ್ಲಿ ಕಂತೆ ಕಂತೆ ನೋಟುಗಳು ಕಂಡುಬಂದಿವೆ. ಈ ಎಲ್ಲವೂ ರೂ. 10 ಮತ್ತು ರೂ. 50ರ ಮುಖಬೆಲೆಯ ಹೊಸ ನೋಟುಗಳು. ಕಳ್ಳ ಸಾಗಾಣಿಕೆಯಾಗುತ್ತಿದ್ದ ಈ ಹಣವನ್ನು ಕಸ್ಟಮ್ಸ್ ವಿಭಾಗದ ಅಧಿಕಾರಿಗಳು ಜಪ್ತಿ ಮಾಡಿದ್ದು, ಈಶಾನ್ಯದಿಂದ ಬರುವ ಹೆಚ್ಚಿನ ರೈಲುಗಳೊಂದಿಗೆ ಹಣವನ್ನು ಒಂದು ಸ್ಥಳದಿಂದ ಮತ್ತೊಂದಕ್ಕೆ ಕಳುಹಿಸಲಾಗುವುದು ಎಂದು ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. 


ರೈಲ್ವೆ ಪಾರ್ಸಲ್ ನಿಯಮಗಳ ಅಡಿಯಲ್ಲಿ ಪಾರ್ಸಲ್ ಕಳುಹಿಸುವ ವ್ಯಕ್ತಿಯು ಪ್ಯಾಕ್ ಮಾಡಿದ ಪೆಟ್ಟಿಗೆಯಲ್ಲಿ ಅಥವಾ ಬ್ಯಾಗ್ ನಲ್ಲಿ ಯಾವ ಸರಕುಗಳನ್ನು ಇರಿಸಲಾಗಿದೆ ಎಂಬುದನ್ನು ಪಾರ್ಸೆಲ್ ಪುಸ್ತಕದಲ್ಲಿ ಘೋಷಿಸಬೇಕಾಗುತ್ತದೆ. ರೈಲ್ವೆ ಕೆಲಸಗಾರರು ಕೆಲವೊಮ್ಮೆ ಅನುಮಾನದ ಆಧಾರದ ಮೇಲೆ ಪಾರ್ಸೆಲ್ ಬಾಕ್ಸ್ ಅಥವಾ ಬ್ಯಾಗ್ ಅನ್ನು ಪರಿಶೀಲಿಸುತ್ತಾರೆ.