ನವದೆಹಲಿ:ಕೊರೊನಾ ಸಂಕಷ್ಟದ ನಡುವೆಯೇ ಪ್ರಕೃತಿ ಕೂಡ ತನ್ನ ಪ್ರಕೋಪ ಹೊರಹಾಕುವ ಸಾಧ್ಯತೆ ಇದೆ. ಇಡೀ ದೇಶಾದ್ಯಂತ ಹವಾಮಾನ ಸೂಕ್ಷ್ಮ ಸ್ಥಿತಿಯಲ್ಲಿರುವ ಕಾರಣ ಹಲವೆಡೆ ಸತತ ಬಿರುಗಾಳಿಯಿಂದ ಕೂಡಿದ ಮಳೆ ಬೀಳುತ್ತಿದೆ. ಏತನ್ಮಧ್ಯೆ ಇದೀಗ ಬಂಗಾಳ ಕೊಲ್ಲಿಯಲ್ಲಿ 'ಅಮ್ಫನ್' ಹೆಸರಿನ ಚಂಡಮಾರುತದ ಆತಂಕ ಎದುರಾಗಿದೆ.


COMMERCIAL BREAK
SCROLL TO CONTINUE READING

ಭಾರಿ ಚಂಡಮಾರುತದ ಹಿನ್ನೆಲೆ ಪಶ್ಚಿಮ ಬಂಗಾಳ ಹಾಗೂ ಕರಾವಳಿ ತೀರದಲ್ಲಿ ಹೈ ಅಲರ್ಟ್ ಜಾರಿಗೊಳಿಸಲಾಗಿದೆ. ಓಡಿಷಾ, ಚತ್ತೀಸ್ಗಡ, ಬಂಗಾಳ ಹಾಗೂ ಆಂಧ್ರ ಪ್ರದೇಶದ ಕರಾವಳಿ ತೀರದ ಅನರಿಗೆ ಅಲರ್ಟ್ ಜಾರಿಗೊಳಿಸಲಾಗಿದೆ. ಅಷ್ಟೇ ಅಲ್ಲ ಮುಂಬರುವ 5 ರಿಂದ 6 ದಿನಗಳವರೆಗೆ ಹವಾಮಾನ ಕೂಡ ವಿಪರೀತವಾಗಿರಲಿದೆ ಎಂದು ಎಚ್ಚರಿಕೆ ನೀಡಲಾಗಿದೆ.


ಚತ್ತೀಸ್ಗಡ್ ನ ಸುಕಮಾ ಪ್ರಾಂತ್ಯದಲ್ಲಿ ಶನಿವಾರ ಸಂಜೆ 6.30ರ ಸುಮಾರಿಗೆ ದೊರ್ನಾಪಾಲ್ ಬಳಿ ಬಿರುಗಾಳಿಯೊಂದು ಪಾಪರ ಹಾನಿಯನ್ನುಂಟು ಮಾಡಿದ್ದು, ಈ ಬಿರುಗಾಳಿಗೆ ಡಜನ್ ಗೂ ಅಧಿಕ ಮನೆಗಳ ಚಾವಣಿಗಳಿಗೆ ಹಾನಿ ಉಂಟಾಗಿದ್ದು, ಅನೇಕ ಸ್ಥಳಗಳು ಮರಗಳು ನೆಲಕ್ಕುರುಳಿ ಜನರ ಆಸ್ತಿಪಾಸ್ತಿಗೆ ಧಕ್ಕೆಯುಂಟು ಮಾಡಿವೆ.



ಭಾನುವಾರ ಸಂಜೆ ಚಂಡಮಾರುತ ಅಪ್ಪಳಿಸುವ ಸಾಧ್ಯತೆ
ಈ ಚಂಡಮಾರುತದ ಪ್ರಭಾವದ ಹಿನ್ನೆಲೆ ಮೇ 19 ರಿಂದ ಪಶ್ಚಿಮ ಬಂಗಾಳದ ಕರಾವಳಿ ಜಿಲ್ಲೆಗಳಲ್ಲಿ ಭಾರಿ ಪ್ರಮಾಣದ ಮಳೆ ಬೇಯುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕಡಿಮೆ ಒತ್ತಡ ವಿರುವ ಪ್ರದೇಶವಾಗಿದ್ದರಿಂದ ಭಾನುವಾರ ಸಂಜೆಯ ಹೊತ್ತಿಗೆ ಈ ಬಿರುಗಾಳಿ ಚಂಡಮಾರುತದ ರೂಪ ಪಡೆಯುವ ಸಾಧ್ಯತೆ ಇದ್ದೆ ಎಂದು ಇಲಾಖೆ ಹೇಳಿದೆ. ಮೇ 17 ರವರೆಗೆ ಇದು ಉತ್ತರ-ವಾಯುವ್ಯ ದಿಕ್ಕಿಗೆ ಚಲಿಸುವ ಸಾಧ್ಯತೆ ಇದೆ ಎಂದು ಪ್ರಾದೇಶಿಕ ಹವಾಮಾನ ಇಲಾಖೆ ತಿಳಿಸಿದ್ದು, ಮೇ 18 ರಿಂದ ಮೇ 20ರ ಅವಧಿಯಲ್ಲಿ ಇದು ಈಶಾನ್ಯದೆಡೆಗೆ ಮತ್ತು ನಂತರ ಪಶ್ಚಿಮ ಬಂಗಾಳದ ಕರಾವಳಿಯತ್ತ ವಾಲುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಮೀನುಗಾರರಿಗೆ ಕಡಲಿಗೆ ತೆರಳದಂತೆ ಮುನ್ಸೂಚನೆ
ಚಂಡಮಾರುತದ ಪರಿಣಾಮ ಪಶ್ಚಿಮ ಬಂಗಾಳದ ಕರಾವಳಿ ಜಿಲ್ಲೆಗಳಾಗಿರುವ ಉತ್ತರ ಮತ್ತು ದಕ್ಷಿಣ 24 ಪರಗನಾ, ಕೊಲ್ಕತ್ತಾ, ಪೂರ ಮತ್ತು ಪಶ್ಚಿಮ ಮಿಡ್ನಾಪುರ್, ಹೌರಾ ಮತ್ತು ಹೂಗ್ಲಿ ಜಿಲ್ಲೆಗಳಲ್ಲಿ ಮೇ 19 ರಿಂದ 20ರ ನಡುವೆ ಭಾರಿ ಮಳೆಯಾಗುವ ನಿರೀಕ್ಷೆ ಇದೆ. ಮೇ 18 ರಿಂದ ಮೇ 21ರ ಅವಧಿಯಲ್ಲಿ ಪಶ್ಚಿಮ ಬಂಗಾಳ-ಓಡಿಷಾ ಕರಾವಳಿ ಮತ್ತು ಉತ್ತರ ಬಂಗಾಳ ಕೊಲ್ಲಿಯ ಮೀನುಗಾರಿಕೆಗೆ ತೆರಳದಂತೆ ಮೀನುಗಾರರಿಗೆ ಮುನ್ನೆಚ್ಚರಿಕೆ ನೀಡಲಾಗಿದೆ. ಅಷ್ಟೇ ಅಲ್ಲ ಈಗಾಗಲೇ ಮೀನುಗಾರಿಕೆಗೆ ತೆರಳಿದವರು ಮೇ 17ರ ಸಂಜೆಯ ಒಳಗೆ ತೀರಕ್ಕೆ ಮರಳಲು ಸೂಚಿಸಲಾಗಿದೆ.


ಈ ಸಂದರ್ಭದಲ್ಲಿ ಪಶ್ಚಿಮ ಬಂಗಾಳದ ಕರಾವಳಿ ಪ್ರದೇಶ ಮತ್ತು ಸುತ್ತಮುತ್ತಲಿನಪ್ರದೇಶಗಳಲ್ಲಿ  ಗಂಟೆಗೆ 45 ರಿಂದ 55 ಕಿ.ಮೀ ವೇಗದಲ್ಲಿ ಮತ್ತು ನಂತರ ಮೇ 19 ರ ಮಧ್ಯಾಹ್ನದಿಂದ ಗಂಟೆಗೆ 65 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮೇ 20 ರ ಬೆಳಗ್ಗೆ ಬಿರುಗಾಳಿಯ ವೇಗ ಗಂಟೆಗೆ 75 ರಿಂದ 85 ಕಿ.ಮೀ ಇರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.