ನವದೆಹಲಿ: ಕೊರೋನಾವೈರಸ್ ಭೀತಿಯ ನಡುವೆ ದೇಶದಲ್ಲಿ ಕೆಲವೇ ಗಂಟೆಗಳಲ್ಲಿ ಅಮ್ಫಾನ್ ಚಂಡಮಾರುತ (Cyclone Amphan) ಉಗ್ರ ಸ್ವರೂಪ ತಾಳಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. 


COMMERCIAL BREAK
SCROLL TO CONTINUE READING

ಅಮ್ಫಾನ್ ಚಂಡಮಾರುತದ ದೃಷ್ಟಿಯಿಂದ, ಬಂಗಾಳ-ಒರಿಸ್ಸಾ ಕರಾವಳಿ ಪ್ರದೇಶಗಳಲ್ಲಿ ಅಲರ್ಟ್ ಜಾರಿಗೊಳಿಸಲಾಗಿದೆ. ಮುಂದಿನ 6 ಗಂಟೆಗಳಲ್ಲಿ ಚಂಡಮಾರುತವು ಇನ್ನಷ್ಟು ಅಪಾಯಕಾರಿ ರೂಪವನ್ನು ಪಡೆಯಲಿದೆ ಎಂದು ಹವಾಮಾನ ಇಲಾಖೆ ಭವಿಷ್ಯ ನುಡಿದಿದೆ. ಚಂಡಮಾರುತವನ್ನು ಗಮನದಲ್ಲಿಟ್ಟುಕೊಂಡು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವೂ ಎಚ್ಚರಿಕೆ ನೀಡಿದೆ. 


ಹವಾಮಾನ ಇಲಾಖೆ ಎಚ್ಚರಿಕೆ ಹಿನ್ನೆಲೆಯಲ್ಲಿ ಪರಿಸ್ಥಿತಿ ಮತ್ತು ಸನ್ನದ್ಧತೆ ಕುರಿತು ಸೋಮವಾರ ಸಂಜೆ ಪ್ರಧಾನಿ ನರೇಂದ್ರ ಮೋದಿ ಅವರು ಗೃಹ ಸಚಿವಾಲಯ ಮತ್ತು ಎನ್‌ಡಿಎಂಎ ಜೊತೆ ಉನ್ನತ ಮಟ್ಟದ ಸಭೆ ನಡೆಸಲಿದ್ದಾರೆ.


ಚಂಡಮಾರುತದ ವೇಗ:
ಹವಾಮಾನ ಇಲಾಖೆಯು ಉಪಗ್ರಹದಿಂದ ತೆಗೆದ ಚಿತ್ರಗಳಲ್ಲಿ ಚಂಡಮಾರುತದ ದೃಶ್ಯವನ್ನು ಸ್ಪಷ್ಟವಾಗಿ ಕಾಣಬಹುದು. ಚಂಡಮಾರುತದ ದೃಷ್ಟಿಯಿಂದ ಒಡಿಶಾ ಸರ್ಕಾರ ತನ್ನ 12 ಜಿಲ್ಲೆಗಳಲ್ಲಿ ಎಚ್ಚರಿಕೆಯನ್ನು ಘೋಷಿಸಿದೆ. ಅಂದಾಜಿನ ಪ್ರಕಾರ ಮೇ 19ರ ವೇಳೆಗೆ ಚಂಡಮಾರುತದ ವೇಗ ಗಂಟೆಗೆ 200 ಕಿಲೋಮೀಟರ್ ಆಗಿರಬಹುದು. ಈ ವೇಗದಲ್ಲಿ ಈ ಚಂಡಮಾರುತವು ಕರಾವಳಿಯನ್ನು ಅಪ್ಪಳಿಸಬಹುದು. ಈ ಕಾರಣದಿಂದಾಗಿ ಬಂಗಾಳದ ಒಡಿಶಾದಲ್ಲಿ ಎರಡು ದಿನಗಳವರೆಗೆ ಭಾರಿ ಮಳೆಯಾಗುವ ಸಾಧ್ಯತೆಯೂ ಇದೆ.


ಈ ರಾಜ್ಯಗಳಲ್ಲಿ ಹವಾಮಾನ ಬದಲಾವಣೆ:
ಹವಾಮಾನ ಇಲಾಖೆಯ ಪ್ರಕಾರ ಬಂಗಾಳಕೊಲ್ಲಿಯಲ್ಲಿ ಚಂಡಮಾರುತದ ಉಲ್ಬಣದಿಂದಾಗಿ, ದೆಹಲಿ ಮತ್ತು ಎನ್‌ಸಿಆರ್ ಪ್ರದೇಶದಲ್ಲೂ ಹವಾಮಾನದಲ್ಲಿನ ಬದಲಾವಣೆಗಳನ್ನು ಕಾಣಬಹುದು. ಅದೇ ಸಮಯದಲ್ಲಿ ಮುಂದಿನ 72 ಗಂಟೆಗಳು ಬಿಹಾರಕ್ಕೆ ಮುಖ್ಯವಾಗಿವೆ. ಈ ಚಂಡಮಾರುತದಿಂದಾಗಿ  ಜಾರ್ಖಂಡ್‌ನಲ್ಲಿಯೂ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.


ಮೀನುಗಾರರಿಗೆ ಎಚ್ಚರಿಕೆ:
ಆಂಫೋನ್ ಚಂಡಮಾರುತದಿಂದಾಗಿ ಮುಂದಿನ 4 ದಿನಗಳವರೆಗೆ ಭಾರಿ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ಮುಂದಿನ 24 ಗಂಟೆಗಳಲ್ಲಿ ದಕ್ಷಿಣ ಬಂಗಾಳಕೊಲ್ಲಿಗೆ ಹೋಗದಂತೆ ಮೀನುಗಾರರಿಗೆ ಸೂಚಿಸಲಾಗಿದೆ. 17-18 ಮೇ ಅವಧಿಯಲ್ಲಿ ಮಧ್ಯ ಬಂಗಾಳ ಕೊಲ್ಲಿ ಮತ್ತು 2020ರ ಮೇ 18-20ರ ಅವಧಿಯಲ್ಲಿ ಉತ್ತರ ಬಂಗಾಳ ಕೊಲ್ಲಿಯಲ್ಲಿ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ.