ನವದೆಹಲಿ: ಮಂಗಳವಾರದಂದು ಫನಿ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇರುವುದರಿಂದ ಈಗ ಗೃಹ ಸಚಿವಾಲಯ ಹಾಗೂ ವಿಪತ್ತು ನಿರ್ವಹಣಾ ಪಡೆ ಮೀನುಗಾರಿಗೆ ಹಾಗೂ ಸಮುದ್ರ ತೀರದಲ್ಲಿ ವಾಸಿಸುವ ಜನರಿಗೆ ಮುನ್ನೆಚ್ಚರಿಕೆ ನೀಡಿದೆ.



COMMERCIAL BREAK
SCROLL TO CONTINUE READING

ಸೋಮವಾರ ಬೆಳಗ್ಗೆ ಫನಿ ಚಂಡಮಾರುತ  ಚೆನ್ನೈನ ಆಗ್ನೇಯ ದಿಕ್ಕಿನಲ್ಲಿ 880 ಕಿ.ಮೀ. ದೂರದಲ್ಲಿದೆ ಮತ್ತು ಇದು ವಾಯುವ್ಯಕ್ಕೆ ಸ್ಥಳಾಂತರಗೊಳ್ಳಲಿದೆ, ಅದು ಬುಧವಾರದಿಂದ ಈಶಾನ್ಯಕ್ಕೆ ತನ್ನ ಮಾರ್ಗವನ್ನು ಬದಲಾಯಿಸುತ್ತದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ತಮಿಳುನಾಡು ಮತ್ತು ಆಂಧ್ರಪ್ರದೇಶದ ಪ್ರದೇಶಗಳ ಮೇಲೆ ಚಂಡಮಾರುತದ ಪ್ರಭಾವ ಅಧಿಕವಿರಲಿದೆ ಎನ್ನಲಾಗಿದೆ.ಆದರೆ ಒಡಿಸ್ಸಾದಲ್ಲಿಯೂ ಕೂಡ ಮುನ್ನೆಚರಿಕೆ ವಹಿಸಲಾಗುತ್ತದೆ. 



ಈಗಾಗಲೇ ವಿಪತ್ತು ನಿರ್ವಹಣಾ ತಂಡ ಹಾಗೂ ಭಾರತೀಯ ಕೋಸ್ಟ್ ಗಾರ್ಡ್ ತಂಡವು ಈ ಸ್ಥಳಗಲ್ಲಿ ಈಗಾಗಲೇ ಪರಿಸ್ಥಿತಿ ನಿಯಂತ್ರಣಕ್ಕೆ ಸಜ್ಜಾಗಿವೆ ಎನ್ನಲಾಗಿದೆ.ಚಂಡಮಾರುತದ ಹಿನ್ನಲೆಯಲ್ಲಿ ಈಗಾಗಲೇ ಏಪ್ರಿಲ್ 25 ರಿಂದ ನಿರಂತರ ಸೂಚನೆಗಳನ್ನು ನೀಡಲಾಗಿದೆ ಎಂದು ಅದು ತಿಳಿಸಿದೆ. 


ಪ್ರಧಾನಿ ನರೇಂದ್ರ ಮೋದಿ ಪರಿಸ್ಥಿತಿಯನ್ನು ಪರಿಶೀಲಿಸುತ್ತಿದ್ದು ಈಗಾಗಲೇ ಕ್ಯಾಬಿನೆಟ್ ಕಾರ್ಯದರ್ಶಿ ಪಿ.ಕೆ.ಸಿನ್ಹಾ ಅವರಿಗೆ ಪರಿಸ್ಥಿತಿಯನ್ನು ನಿಭಾಯಿಸಲು ತಯಾರಿ ನಡೆಸಬೇಕೆಂದು ಸೂಚನೆ ನೀಡಿದ್ದಾರೆ.