ಭುವನೇಶ್ವರ: Cyclone Yaas - ಬಂಗಾಳಕೊಲ್ಲಿಯಲ್ಲಿ ನಿರ್ಮಾಣಗೊಂಡ ಚಂಡಮಾರುತದ ಹಿನ್ನೆಲೆ ರಾಜ್ಯದ (Odisha) ಎಲ್ಲ ಕರಾವಳಿ ಹಾಗೂ ಅಕ್ಕಪಕ್ಕದ ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೊಶಿಸಲಾಗಿದೆ. ಈ ಕುರಿತು ಶುಕ್ರವಾರ  ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿರುವ  ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಸುರೇಶ್ ಚಂದ್ರ ಮಹಾಪಾತ್ರಾ, ಒಂದು ವೇಳೆ ರಾಜ್ಯದ ಮೇಲೆ 'ಯಾಸ್' ಚಂಡಮಾರುತ ಪ್ರಭಾವ ಬೀರಿದರೆ ರಾಜ್ಯಾಡಳಿತ  ಪರಿಸ್ಥಿತಿಯನ್ನು ನಿಯಂತ್ರಿಸಲು ಸಿದ್ಧವಾಗಿದೆ ಎಂದು ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಎನ್‌ಡಿಆರ್‌ಎಫ್, ಕೋಸ್ಟ್‌ಗಾರ್ಡ್, ಐಎನ್‌ಎಸ್ ಚಿಲ್ಕಾ, ಡಿಜಿ ಪೊಲೀಸ್ ಮತ್ತು ಡಿಜಿ ಅಗ್ನಿಶಾಮಕ ವಿಭಾಗಗಳ ಅಧಿಕಾರಿಗಳ ಜೊತೆಗೆ  ಶುಕ್ರವಾರ ಸಭೆ ನಡೆಸಲಾಗಿದೆ ಎಂದು ಮಹಾಪಾತ್ರ ಹೇಳಿದ್ದಾರೆ. ಸಂಬಂಧಪಟ್ಟ ಇಲಾಖೆಗಳಾದ ವಿದ್ಯುತ್ ಕಂಪನಿಗಳು, ಆರೋಗ್ಯ ಇಲಾಖೆ, ಗ್ರಾಮೀಣ ಮತ್ತು ನಗರ ನೀರು ಸರಬರಾಜು ಇಲಾಖೆ, ಒಡಿಶಾ ವಿಪತ್ತು ನಿರ್ವಹಣಾ ಪಡೆ ಮತ್ತು ಎನ್‌ಡಿಆರ್‌ಎಫ್ ತಂಡಗಳು ಅಗತ್ಯ ಮಾನವಶಕ್ತಿ ಮತ್ತು ಅಗತ್ಯ ಸಾಮಗ್ರಿಗಳೊಂದಿಗೆ ಸಿದ್ಧವಾಗಲು ಎಚ್ಚರಿಕೆ ವಹಿಸಲಾಗಿದೆ ಎಂದು ಮಹಾಪಾತ್ರಾ ಹೇಳಿದ್ದಾರೆ. .


ಎರಡು-ಮೂರು ದಿನಗಳಲ್ಲಿ ಸ್ಥಿತಿ ಇನ್ನಷ್ಟು ಸ್ಪಷ್ಟವಾಗಲಿದೆ (Cyclone Yaas News)
ಒಡಿಶಾ ಆಡಳಿತವು ಚಂಡಮಾರುತವನ್ನು ಎದುರಿಸಲು ಸಂಪೂರ್ಣವಾಗಿ ಸಿದ್ಧವಾಗಿದೆ ಎಂದು ಸುರೇಶ್ ಮಹಾಪಾತ್ರ ಹೇಳಿದ್ದಾರೆ. ಜೊತೆಗೆ "ಮುಂದಿನ ಎರಡು-ಮೂರು ದಿನಗಳಲ್ಲಿ ಚಂಡಮಾರುತದ ದಾರಿಯ ಬಗ್ಗೆ ವಿಷಯಗಳು ಹೆಚ್ಚಿನ ವಿವರಗಳು ಸ್ಪಷ್ಟವಾಗಲಿದ್ದು, ನಂತರ ಎಲ್ಲಿ ಹೆಚ್ಚು ಗಮನಹರಿಸಬೇಕೆಂದು ನಾವು ನಿರ್ಧರಿಸಲಿದ್ದೇವೆ. ಆಶ್ರಯ ತಾಣಗಳು ಮತ್ತು ಸುರಕ್ಷಿತ ಕಟ್ಟಡಗಳನ್ನು ಗುರುತಿಸುವ ಪ್ರಕ್ರಿಯೆಯನ್ನು ಈಗಾಗಲೇ ಪ್ರಾರಂಭಿಸಲಾಗಿದೆ" ಎಂದು ಸುರೇಶ ಮಹಾಪಾತ್ರ ಹೇಳಿದ್ದಾರೆ.


ಇನ್ನೊಂದೆಡೆ ರಾಜ್ಯಕ್ಕೆ ಚಂಡಮಾರುತ (Cyclone) ಬರುವ ಮುನ್ನವೇ ಮೀನುಗಾರಿಕಾ ದೋಣಿಗಳು ಮತ್ತು ಹಡಗುಗಳು ತೀರಕ್ಕೆ ಬರಲು ಎರಡು ಭಾರತೀಯ ಕೋಸ್ಟ್ ಗಾರ್ಡ್ ವಿಮಾನಗಳು ಮತ್ತು ಹಡಗುಗಳು ಸಮುದ್ರದಲ್ಲಿ ಗಸ್ತು ತಿರುಗುತ್ತಿವೆ ಎಂದು ವಿಶೇಷ ಪರಿಹಾರ ಆಯುಕ್ತ ಪ್ರದೀಪ್ ಕೆ. ಜೋನಾ ಹೇಳಿದ್ದಾರೆ.


ಇದನ್ನೂ ಓದಿ-Corona Death: ವರದಿಯಾಗಿರುವುದು ಕೆಲವೇ ಅಂಕಿ-ಅಂಶ, ವಾಸ್ತವಿಕ ಸಂಖ್ಯೆ ದ್ವಿಗುಣವಾಗಿರಬಹುದು- WHO


ಭಾರತೀಯ ನೌಕಾಪಡೆಯ ಹಡಗು INS ಚಿಲ್ಕಾ ಮತ್ತು ಭಾರತೀಯ ನೌಕಾಪಡೆಯ ಅಧಿಕಾರಿಗಳಿಗೆ ಈ ಕುರಿತು ಈಗಾಗಲೇ ಎಚ್ಚರಿಕೆ ರವಾನಿಸಲಾಗಿದ್ದು, ಸಂಭವನೀಯ ವಿಪತ್ತಿನಿಂದ ಎದುರಾಗುವ ಸವಾಲುಗಳನ್ನು ಎದುರಿಸಲು ರಾಜ್ಯ ಸರ್ಕಾರದೊಂದಿಗೆ ಅವರು ಸಂಪರ್ಕದಲ್ಲಿದ್ದಾರೆ. ಎನ್‌ಡಿಆರ್‌ಎಫ್‌ನ 5 ತಂಡಗಳು ಈಗಾಗಲೇ ಗುಜರಾತ್‌ನಿಂದ ಒಡಿಶಾಗೆ ಮರಳಿವೆ ಎಂದು ಜೆನಾ ಮಾಹಿತಿ ನೀಡಿದ್ದಾರೆ. ಎನ್‌ಡಿಆರ್‌ಎಫ್‌ನ ಒಟ್ಟು 17 ತಂಡಗಳು, ಒಡ್ರಾಫ್‌ನ 20 ಬೆಟಾಲಿಯನ್‌ಗಳು ಮತ್ತು ಅಗ್ನಿಶಾಮಕ ದಳದ 100 ತಂಡಗಳು ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗೆ ಈಗಾಗಲೇ ಸಿದ್ಧರಾಗಿದ್ದಾರೆ ಎಂದು ಜೇನಾ ಮಾಹಿತಿ ನೀಡಿದ್ದಾರೆ.


ಇದನ್ನೂ ಓದಿ-ರಾಜ್ಯದಲ್ಲಿ ಮೇ 25 ರವರೆಗೆ ಗುಡುಗು ಸಿಡಿಲು ಸಹಿತ ಭಾರೀ ಮಳೆ : ಹವಾಮಾನ ಇಲಾಖೆ


ಮೇ 26ರವರೆಗೆ ಈ ಚಂಡಮಾರುತ ಓಡಿಶಾ ಹಾಗೂ ಪಶ್ಚಿಮ ಬಂಗಾಳದ ಗಡಿ ತಲುಪಲಿದೆ ಎಂದು ಅಂದಾಜಿಸಲಾಗಿದೆ (Cyclone Yaas Latest Updates)
ಹವಾಮಾನ ಇಲಾಖೆಯ (Meteorological Department) ಮುನ್ಸೂಚನೆಯ ಪ್ರಕಾರ, ಮೇ 26 ರ ಬೆಳಿಗ್ಗೆ ಚಂಡಮಾರುತವು (Cyclone Yaas) ಒಡಿಶಾ-ಪಶ್ಚಿಮ ಬಂಗಾಳ ಕರಾವಳಿಯನ್ನು ತಲುಪಬಹುದು. ಸಂಭವನೀಯ ಪರಿಸ್ಥಿತಿಯನ್ನು ಎದುರಿಸಲು ಭಾರತೀಯ ನೌಕಾಪಡೆ ಮತ್ತು ಭಾರತೀಯ ಕೋಸ್ಟ್ ಗಾರ್ಡ್ ಸಿದ್ಧರಾಗಿರಬೇಕು ಎಂದು ರಾಜ್ಯ ಸರ್ಕಾರ ಆಗ್ರಹಿಸಿದೆ. ಇದೇ ವೇಳೆ  ಸಂಭವನೀಯ ಚಂಡಮಾರುತದಿಂದಾಗಿ ಮರಗಳನ್ನು ತೆಗೆಯಲು ಅರಣ್ಯ ಇಲಾಖೆಗೆ ಅಲರ್ಟ್ ಜಾರಿಗೊಳಿಸಲಾಗಿದೆ. ವಿಪತ್ತು ನಿರ್ವಹಣೆಯ ಬಳಿಕ ಕೂಡಲೇ ವಿದ್ಯುತ್ ಶಕ್ತಿ ಪೂರೈಕೆಯನ್ನು ಮತ್ತೆ ಪುನರಾರಂಭಿಸಲು ಸಿದ್ಧರಾಗಿರುವಂತೆ ವಿದ್ಯುತ್ ವಿತರಣಾ ಕಂಪನಿಗಳಿಗೆ  ಸೂಚಿಸಲಾಗಿದೆ.


ಇದನ್ನೂ ಓದಿ-Lack of Vaccine: ಸರ್ಕಾರದ ನೀತಿಗಳನ್ನು ದೂಷಿಸಿದ ಸೀರಮ್ ಸಂಸ್ಥೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.