Cyclone Yaas : ಒಡಿಶಾ, ಪಶ್ಚಿಮ ಬಂಗಾಳದಲ್ಲಿ ನಗರಗಳಿಗೆ ನುಗ್ಗಿದ ನೀರು, ರಕ್ಷಣಾ ಕಾರ್ಯದಲ್ಲಿ ಸೇನೆ
ಯಾಸ್ ಚಂಡಮಾರುತ ಪಶ್ಚಿಮ ಬಂಗಾಳದ ಕರಾವಳಿ ಪ್ರದೇಶಗಳನ್ನು ಪ್ರವೇಶಿಸಿದೆ. ಕರಾವಳಿ ಪ್ರದೇಶಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಸಮುದ್ರಗಳಲ್ಲಿ ರಕ್ಕಸ ಗಾತ್ರದ ಅಲೆಗಳು ಏಳಲಾರಂಭಿಸಿವೆ.
ನವದೆಹಲಿ : ಯಾಸ್ ಚಂಡಮಾರುತ ಪಶ್ಚಿಮ ಬಂಗಾಳದ ಕರಾವಳಿ ಪ್ರದೇಶಗಳನ್ನು ಪ್ರವೇಶಿಸಿದೆ. ಕರಾವಳಿ ಪ್ರದೇಶಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಸಮುದ್ರಗಳಲ್ಲಿ ರಕ್ಕಸ ಗಾತ್ರದ ಅಲೆಗಳು ಏಳಲಾರಂಭಿಸಿವೆ. ದಿಘಾ ಮತ್ತು ಶಂಕರ್‌ಪುರ ಸೇರಿದಂತೆ ಅನೇಕ ಕರಾವಳಿ ಪ್ರದೇಶಗಳಿಗೆ ಸಮುದ್ರದ ನೀರು ನುಗ್ಗಿದೆ. ಭಾರತೀಯ ಸೇನೆಯ 17 ತುಕಡಿಗಳು ರಕ್ಷಾಣಾ ಕಾರ್ಯದಲ್ಲಿ ನಿರತವಾಗಿವೆ. ಎನ್ ಡಿಆರ್ ಎಫ್ ತಂಡ ಕೂಡಾ ಪರಿಹಾರ ಕಾರ್ಯದಲ್ಲಿ ತೊಡಗಿದೆ. ಕರಾವಳಿ ಪ್ರದೇಶಗಳಿಂದ ಈಗಾಗಲೇ ಸುಮಾರು 15 ಲಕ್ಷ ಜನರನ್ನು ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banarjee) ಅಧಿಕಾರಿಗಳೊಂದಿಗೆ ನಿರಂತರ ಮಾತುಕತೆ ನಡೆಸುತ್ತಿದ್ದು, ಪರಿಸ್ಥಿತಿಯನ್ನು ನಿಭಾಯಿಸುತ್ತಿದ್ದಾರೆ. ಪೂರ್ವ ಮೆಡ್ನಿಪುರದ 51 ಅಣೆಕಟ್ಟುಗಳು ಕುಸಿದಿವೆ. ಅನೇಕ ಪ್ರದೇಶಗಳು ಸಂಪೂರ್ಣವಾಗಿ ಜಲಾವೃತವಾಗಿವೆ.
Cyclone Yaas: ಒಡಿಶಾ, ಬಂಗಾಳದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ ಇಲ್ಲಿದೆ Video
ಯಾಸ್ ಚಂಡಮಾರುತದ (Yaas cyclone) ಗರಿಷ್ಠ ವೇಗ ಗಂಟೆಗೆ 175 ಕಿ.ಮೀ ಆಗಿರಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ. ಯಾಸ್ ಬಂಗಾಳಕ್ಕೆ ಪ್ರವೇಶಿಸಿದಾಗ, ಸಮುದ್ರದಲ್ಲಿ ಅಲೆಗಳು 8–12 ಅಡಿಗಳವರೆಗೆ ಏರಬಹುದು ಎನ್ನಲಾಗಿದೆ. ಪರಿಸ್ಥಿತಿಯನ್ನು ನಿಭಾಯಿಸಲು ದಿಘಾದಲ್ಲಿ ಸೇನೆ ಕಣಕ್ಕಿಳಿದಿದೆ. ಅತಿಯಾದ ನೀರಿನ ಸೆಳೆತದಿಂದಾಗಿ, ನಾಮ್ಖಾನಾದ ಅಣೆಕಟ್ಟು ಒಡೆದುಹೋಗಿದೆ. ಕೋಲ್ಕತಾ ವಿಮಾನ ನಿಲ್ದಾಣದಲ್ಲಿ (Airport) ವಿಮಾನ ಸೇವೆಗಳನ್ನು ಸದ್ಯಕ್ಕೆ ರದ್ದುಪಡಿಸಲಾಗಿದೆ. ಜೊತೆಗೆ ಅನೇಕ ರೈಲುಗಳನ್ನು (Train) ಸಹ ರದ್ದುಪಡಿಸಲಾಗಿದೆ.
ಇನ್ನು ಒಡಿಶಾದಲ್ಲೂ (Odisha) ಕರಾವಳಿ ಪ್ರದೇಶಗಳಿಗೆ ಸಮುದ್ರದ ನೀರು ನುಗ್ಗಿದೆ.
Extremely Heavy Rain : ಯಾಸ್ ಸೈಕ್ಲೋನ್ ಪರಿಣಾಮ ಭಾರೀ ಬಿರುಗಾಳಿ ಜೊತೆ ಭಾರೀ ಮಳೆ!
ಯಾಸ್ ಚಂಡಮಾರುತದ ಹಿನ್ನೆಲೆಯಲ್ಲಿ ರಾಂಚಿ ಜಾರ್ಖಂಡ್ ನಲ್ಲೂ (Jarkhand) ಹವಾಮಾನ ಬದಲಾಗಿದೆ. ಭಾರೀ ಗಾಳಿ ಬೀಸುತ್ತಿದ್ದು ಕೆಲವೆಡೆ ಮಳೆಯಾಗಿರುವ ಬಗ್ಗೆ ವರದಿಯಾಗಿದೆ.
Cyclone Yaas : 90 ರೈಲುಗಳನ್ನು ರದ್ದು ಮಾಡಿದ Indian Railway, ವಿಮಾನ ಸೇವೆಯ ಮೇಲೆಯೂ ಪ್ರಭಾವ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.