Cyclone Yaas : 90 ರೈಲುಗಳನ್ನು ರದ್ದು ಮಾಡಿದ Indian Railway, ವಿಮಾನ ಸೇವೆಯ ಮೇಲೆಯೂ ಪ್ರಭಾವ
ಯಾಸ್ ಚಂಡಮಾರುತವು ಮೇ 26 ರಂದು ಬಂಗಾಳ ಮತ್ತು ಒಡಿಶಾದ ತೀರಕ್ಕೆ ಅಪ್ಪಳಿಸಲಿದೆ. ಚಂಡಮಾರುತದ ಪರಿಣಾಮ ಇಂದಿನಿಂದಲೇ ಕೆಲ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದೆ. ಒಡಿಶಾದ ಕರಾವಳಿ ಪ್ರದೇಶಗಳಾದ ಬಾಲಸೋರ್ ಮತ್ತು ಚಂಡಿಪುರದಲ್ಲಿ ಭಾರಿ ಮಳೆ ಪ್ರಾರಂಭವಾಗಿದೆ.
ನವದೆಹಲಿ : ಒಂದೆಡೆ ಕರೋನಾ ಸಾಂಕ್ರಾಮಿಕ ದೇಶದಲ್ಲಿ ಸಾವು ನೋವಿಗೆ ಕಾರಣವಾಗಿದೆ. ಇನ್ನೊಂದೆಡೆ ಒಂದರ ಹಿಂದೆ ಒಂದರಂತೆ ಬರುತ್ತಿರುವ ಚಂಡಮಾರುತಗಳು (Cyclone) ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸುತ್ತಿದೆ. ಇತ್ತೀಚೆಗೆ, ತೌಕ್ತೆ ಚಂಡಮಾರುತದಿಂದಾಗಿ ಬಹಳಷ್ಟು ನಷ್ಟ ಸಂಭವಿಸಿತ್ತು. ಯಾಸ್ ಚಂಡಮಾರುತವು (Yaas Cyclone) ಬಂಗಾಳಕೊಲ್ಲಿಯಲ್ಲಿ ವೇಗವನ್ನು ಪಡೆದುಕೊಂಡಿದೆ. ಮುಂದಿನ 24 ಗಂಟೆಗಳಲ್ಲಿ ಬಂಗಾಳ ಮತ್ತು ಒಡಿಶಾದ ತೀರವನ್ನು ಅಪ್ಪಳಿಸಬಹುದು ಎನ್ನಲಾಗಿದೆ. ಈಗಾಗಲೇ ಸರ್ಕಾರ ಎಲ್ಲಾ ರೀತಿಯಲ್ಲೂ ಸುರಕ್ಷತಾ ಕ್ರಮಗಳನ್ನು ಕೈಗೊಂಡಿದೆ.
ಕೆಲವೆಡೆ ಭಾರೀ ಮಳೆ :
ಯಾಸ್ ಚಂಡಮಾರುತವು (Yaas Cyclone) ಮೇ 26 ರಂದು ಬಂಗಾಳ ಮತ್ತು ಒಡಿಶಾದ ತೀರಕ್ಕೆ ಅಪ್ಪಳಿಸಲಿದೆ. ಚಂಡಮಾರುತದ ಪರಿಣಾಮ ಇಂದಿನಿಂದಲೇ ಕೆಲ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದೆ (Heavy rain) . ಒಡಿಶಾದ ಕರಾವಳಿ ಪ್ರದೇಶಗಳಾದ ಬಾಲಸೋರ್ ಮತ್ತು ಚಂಡಿಪುರದಲ್ಲಿ ಭಾರಿ ಮಳೆ ಪ್ರಾರಂಭವಾಗಿದೆ. ಸಮುದ್ರಗಳಲ್ಲೂ ದೊಡ್ಡ ದೊಡ್ಡ ಅಲೆಗಳು ಏಳುತ್ತಿವೆ. ಸಮುದ್ರ ತೀರದ ಜನರನ್ನು ಸುರಕ್ಷತಾ ಸ್ಥಳಗಳಿಗೆ ತೆರಳುವಂತೆ ಈಗಾಗಲೇ ಸ್ಥಳೀಯ ಆಡಳಿತ ಸೂಚಿಸಿದೆ.
ಇದನ್ನೂ ಓದಿ : Cyclone Yaas Latest Update : ವಿನಾಶಕಾರಿಯಾಗಿರಲಿದೆ ಯಾಸ್ ಚಂಡಮಾರುತ; ಈ ರಾಜ್ಯಗಳಿಗೆ ಹೆಚ್ಚಿನ ಅಪಾಯ
90ಕ್ಕೂ ಅಧಿಕ ರೈಲುಗಳ ಸಂಚಾರ ರದ್ದು :
ಚಂಡಮಾರುತದ (Cyclone) ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಪಶ್ಚಿಮ ಬಂಗಾಳ ಮತ್ತು ಒಡಿಶಾ ಮಾರ್ಗಗಳಲ್ಲಿ ಚಲಿಸುವ 90 ರೈಲುಗಳನ್ನು ಭಾರತೀಯ ರೈಲ್ವೆ (Indian Railway) ರದ್ದುಗೊಳಿಸಿದೆ. ಇನ್ನು ದೆಹಲಿಯಿಂದ ಒಡಿಶಾ ಭುವನೇಶ್ವರ ಮತ್ತು ಪುರಿಗೆ ಸಂಚರಿಸುವ ಒಂದು ಡಜನ್ ಗೂ ಅಧಿಕ ರೈಲುಗಳನ್ನು ಉತ್ತರ ರೈಲ್ವೆ ಕೂಡಾ ರದ್ದು ಮಾಡಿದೆ. ದಕ್ಷಿಣ ರೈಲ್ವೆ ಸಹ ಅನೇಕ ರೈಲು ಸೇವೆಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿದೆ. ಪೂರ್ವ ರೈಲ್ವೆ ಮೇ 29 ರವರೆಗೆ 25 ರೈಲುಗಳನ್ನು ರದ್ದುಗೊಳಿಸಿ ಭಾನುವಾರವೇ ಆದೇಶ ಹೊರಡಿಸಿತ್ತು.
ವಿಮಾನಯಾನದ ಮೇಲೆ ಪ್ರಭಾವ :
ಯಾಸ್ ಚಂಡಮಾರುತದಿಂದಾಗಿ ಭುವನೇಶ್ವರ, ಕೋಲ್ಕತಾ, ಜಾರ್ಸುಗುಡಾ ಮತ್ತು ದುರ್ಗಾಪುರ ವಿಮಾನ ನಿಲ್ದಾಣಗಳಲ್ಲಿ (Airport) ವಿಮಾನಗಳ ಕಾರ್ಯಾಚರಣೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಚಂಡಮಾರುತದ ಹಿನ್ನೆಲೆಯಲ್ಲಿ ಎಚ್ಚರದಿಂದ ಇರುವಂತೆ, ಏರ್‌ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ (AAI) ಪೂರ್ವ ಪ್ರದೇಶದ ಇತರ ವಿಮಾನ ನಿಲ್ದಾಣಗಳಿಗೆ ಸೂಚಿಸಿದೆ. 'ಭುವನೇಶ್ವರ, ಕೋಲ್ಕತಾ, ಝಾರ್ ಸುಗುಡ ಮತ್ತು ದುರ್ಗಾಪುರ ವಿಮಾನ ನಿಲ್ದಾಣಗಳಲ್ಲಿನ ವಿಮಾನ (Flight) ಕಾರ್ಯಾಚರಣೆಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ. ಇದಲ್ಲದೆ, ರಾಂಚಿ, ಪಾಟ್ನಾ, ರಾಯ್‌ಪುರ, ಜಮ್‌ಶೆಡ್‌ಪುರ, ಬಾಗ್ದೋಗ್ರಾ, ಕೂಚ್ ಬೆಹಾರ್, ವಿಶಾಖಪಟ್ಟಣಂ ಮತ್ತು ರಾಜಮಂಡ್ರಿ ವಿಮಾನ ನಿಲ್ದಾಣಗಳಲ್ಲೂ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ.
ಇದನ್ನೂ ಓದಿ : #CycloneYaas ಪೀಡಿತ ಪ್ರದೇಶಗಳಿಂದ ನಿರಾಶ್ರಿತರ ಶಿಬಿರಕ್ಕೆ ತೆರಳುವಂತೆ ಒಡಿಶಾ ಸಿಎಂ ಮನವಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.