ಭುವನೇಶ್ವರ: ಚಂಡಮಾರುತ ಯಾಸ್ ರಾಜ್ಯಕ್ಕೆ ಸಮೀಪಿಸುತ್ತಿದ್ದು ಕರಾವಳಿ ಪ್ರದೇಶಗಳಲ್ಲಿ ವಾಸಿಸುವ ಜನರು, ವಿಶೇಷವಾಗಿ ತಗ್ಗು ಪ್ರದೇಶಗಳಲ್ಲಿ ವಾಸಿಸುವವರು, ಆಡಳಿತದೊಂದಿಗೆ ಸಹಕರಿಸಬೇಕು ಮತ್ತು ಆಶ್ರಯ ಮನೆಗಳಿಗೆ ಸ್ಥಳಾಂತರಗೊಳ್ಳಬೇಕು. ಈ ಸಂದರ್ಭದಲ್ಲಿ ಕೋವಿಡ್-19 (COVID-19) ಗೆ ಸಂಬಂಧಿಸಿದ ಎಲ್ಲಾ ಪ್ರೋಟೋಕಾಲ್ಗಳನ್ನು ಅನುಸರಿಸುವಂತೆ  ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಸೋಮವಾರ ಕರಾವಳಿ ಪ್ರದೇಶದ ಜನರಿಗೆ ಮನವಿ ಮಾಡಿದ್ದಾರೆ.


COMMERCIAL BREAK
SCROLL TO CONTINUE READING

ಪ್ಯಾರದೀಪ್‌ನ ಆಗ್ನೇಯಕ್ಕೆ 540 ಕಿ.ಮೀ ದೂರದಲ್ಲಿರುವ ಚಂಡಮಾರುತವು ಬುಧವಾರ ಒಡಿಶಾ-ಬಂಗಾಳ ಕರಾವಳಿಯನ್ನು ದಾಟುವ ಸಾಧ್ಯತೆಯಿದೆ. ಇದು ಬಾಲಸೋರ್ ಜಿಲ್ಲೆಯ ಹಲವೆಡೆ ಭೂಕುಸಿತಕ್ಕೆ ಕಾರಣವಾಗಬಹುದು ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.


ಇದನ್ನೂ ಓದಿ - Black Fungus: ಖಾಸಗಿ ಅಂಗಗಳ ಮೇಲೂ Mucormycosis ದಾಳಿ ಇಡುತ್ತಂತೆ ಎಚ್ಚರ!


ಯಾಸ್ ಚಂಡಮಾರುತಕ್ಕೆ ಸಂಬಂಧಿಸಿದಂತೆ ವಿಡಿಯೋ ಸಂದೇಶ ರವಾನಿಸಿರುವ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್(Naveen Patnaik), ಚಂಡಮಾರುತಗಳು ನಮಗೆ ಹೊಸತೇನಲ್ಲ, ಆದರೆ ಸ್ವಲ್ಪ ನಿರ್ಲಕ್ಷ್ಯವು ದೊಡ್ಡ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಎಲ್ಲಾ 4.5 ಕೋಟಿ ಜನರ ಜೀವನವು ನನ್ನ ಕುಟುಂಬ ಸದಸ್ಯರೆಂದು ಪರಿಗಣಿಸುವುದರಿಂದ ನನಗೆ ಅಮೂಲ್ಯವಾಗಿದೆ. ದಯವಿಟ್ಟು ಆಡಳಿತ ಅಧಿಕಾರಿಗಳಿಗೆ ಸಹಕರಿಸಿ  ಎಂದು ಮನವಿ ಮಾಡಿದ್ದಾರೆ.


Cyclone Yaas) ರೂಪದಲ್ಲಿ ನಮಗೆ ಮತ್ತೊಂದು ಸವಾಲಾಗಿ ಎದುರಾಗಿದೆ. ಪ್ರತಿ ಜೀವವನ್ನು ಉಳಿಸುವುದು ಆದ್ಯತೆಯಾಗಿದೆ, ಚಂಡಮಾರುತ ಪೀಡಿತ ಪ್ರದೇಶಗಳಲ್ಲಿರುವ ಎಲ್ಲರಿಗೂ ಆಶ್ರಯ ಮನೆಗಳಿಗೆ ತೆರಳಿ ಆಡಳಿತಕ್ಕೆ ಸಹಕರಿಸುವಂತೆ ನಾನು ವಿನಂತಿಸುತ್ತೇನೆ ಎಂದು ಒಡಿಶಾ ಸಿಎಂ ನವೀನ್ ಪಟ್ನಾಯಕ್ ರಾಜ್ಯದ ಕರಾವಳಿ ಭಾಗದ ಜನರನ್ನು ಕೋರಿದ್ದಾರೆ.


ಇದನ್ನೂ ಓದಿ - COVID-19: ಕರ್ತ್ಯವ್ಯದಲ್ಲಿದ್ದ ಮಹಿಳಾ ವೈದ್ಯರ ಮೇಲಿನ ದಾಳಿ ಶಿಕ್ಷಾರ್ಹ ಅಪರಾಧ


ಈ ಸಂದರ್ಭದಲ್ಲಿ ಯಾರೂ ಕೂಡ ಕರೋನಾವೈರಸ್ ಬಗ್ಗೆ ನಿರ್ಲಕ್ಷ್ಯ ವಹಿಸದಂತೆಯೂ ಎಚ್ಚರಿಕೆ ನೀಡಿರುವ ಸಿಎಂ ನವೀನ್ ಪಟ್ನಾಯಕ್, ಸೋಂಕು ಹರಡುವುದನ್ನು ತಡೆಗಟ್ಟಲು ಕೇವಲ ಒಂದು ಮಾಸ್ಕ್ ಸಾಕಾಗುವುದಿಲ್ಲ. ಹಾಗಾಗಿ ಪ್ರತಿಯೊಬ್ಬರೂ ಡಬಲ್ ಮಾಸ್ಕ್ ಧರಿಸಬೇಕು. ಸಾಬೂನು ಮತ್ತು ಸ್ಯಾನಿಟೈಜರ್ ಗಳಿಂದ ಆಗಾಗ್ಗೆ ನಿಮ್ಮ ಕೈ ತೊಳೆಯಬೇಕು ಎಂದು ವಿನಂತಿಸಿದ್ದಾರೆ.


ಕಳೆದ ವರ್ಷವೂ ಕರೋನಾ ಸಾಂಕ್ರಾಮಿಕದ ಮಧ್ಯೆ ನಾವು ಆಂಫಾನ್ ಚಂಡಮಾರುತವನ್ನು ಅನುಭವಿಸಿದ್ದೇವೆ. ಜನರ ಸಹಕಾರದಿಂದ ಆ ಕಠಿಣ ಸಂದರ್ಭವನ್ನು ಯಶಸ್ವಿಯಾಗಿ ನಿಭಾಯಿಸಲಾಯಿತು. ಈ ಬಾರಿಯೂ ನಾವೆಲ್ಲರೂ ವಿಪತ್ತು ಮತ್ತು ಸಾಂಕ್ರಾಮಿಕ ರೋಗವನ್ನು ಎದುರಿಸಲು ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಸಿಎಂ ವಿಶ್ವಾಸ ವ್ಯಕ್ತಪಡಿಸಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.