ದಾಬೋಲ್ಕರ್,ಪನ್ಸಾರೆ ಹತ್ಯೆ ಪ್ರಕರಣ: ಬಾಂಬೆ ಹೈಕೋರ್ಟನಿಂದ ಸಿಬಿಐಗೆ ಚಿಮಾರಿ
ಮುಂಬೈ: ನರೇಂದ್ರ ದಾಬೋಲ್ಕರ್ ಮತ್ತು ಗೋವಿಂದ ಪನ್ಸಾರೆ ಕೊಲೆ ಪ್ರಕರಣಗಳಲ್ಲಿ ಸಿಬಿಐ ಮತ್ತು ವಿಶೇಷ ತನಿಖಾ ತಂಡ (ಸಿಟ್) ಸಲ್ಲಿಸಿದ ಸ್ಥಿತಿ ವರದಿಯನ್ನು ಬಾಂಬೆ ಹೈಕೋರ್ಟ್ ತಿರಸ್ಕರಿಸಿದೆ.
ಈ ವಿಷಯದಲ್ಲಿ ಸ್ಥಿತಿ ವರದಿಗಳಂತೆ ಪ್ರತಿ ಬಾರಿ ಒಂದೇ ರೀತಿಯ ವರದಿಗಳನ್ನು ಸಲ್ಲಿಸುತ್ತಿರುವುದಕ್ಕೆ ನ್ಯಾಯಾಲಯ ಕಿಡಿಕಾರಿದೆ. ವಿಚಾರವಾದಿ ನರೇಂದ್ರ ದಾಬೋಲ್ಕರ್ ಅವರು ಆಗಸ್ಟ್ 20, 2013 ರಂದು ವಾಕಿಂಗ್ ಮುಗಿಸಿ ಮನೆಗೆ ತೆರಳುತಿದ್ದ ಸಂದರ್ಭದಲ್ಲಿ ಬೈಕ್ ನಲ್ಲಿ ಬಂದು ಹಂತಕರು ಅವರನ್ನು ಗುಂಡಿಕ್ಕಿ ಹತ್ಯೆಮಾಡಿದ್ದರು.ಇದಾದ ನಂತರ ಕಮುನಿಸ್ಟ್ ಪಕ್ಷದ ನಾಯಕರಾಗಿದ್ದ ಪನ್ಸಾರೆಯವರು ಫೆಬ್ರವರಿ 20 2015 ರಂದು ಕೊಲ್ಹಾಪುರದಲ್ಲಿ ಗುಂಡಿನ ದಾಳಿಯಲ್ಲಿ ಗಾಯಗೊಂಡು ನಂತರ ಮೃತಪಟ್ಟಿದ್ದರು.
ಈ ವಿಷಯದಲ್ಲಿ ಸಿಬಿಐ ತನಿಖೆ ನಡೆಸುತ್ತಿದೆ ಮತ್ತು ಬಾಂಬೆ ಹೈಕೋರ್ಟ್ ಮೇಲ್ವಿಚಾರಣೆ ನಡೆಸುತ್ತಿದೆ.ಈ ವಿಚಾರವಾಗಿ ಕೋರ್ಟ್ ಹಲವಾರು ಬಾರಿ ಗಡುವು ಮತ್ತು ಎಚ್ಚರಿಕೆ ನೀಡಿದ್ದರೂ ಸಹಿತ ಪ್ರಕರಣದಲ್ಲಿ ಯಾವುದೇ ಮಹತ್ವದ ಸುಳಿವು ದೊರೆತಿರಲಿಲ್ಲ, ಹೀಗಾಗಿ ಕೋರ್ಟ್ ಸಿಬಿಸಿ ಮತ್ತು ವಿಶೇಷ ತನಿಖಾ ದಳಕ್ಕೆ ಚಿಮಾರಿ ಹಾಕಿದೆ. ತನಿಖೆ ಸಂದರ್ಭದಲ್ಲಿ ಈ ವಿಚಾರವಾದಿಗಳ ಕೊಲೆ ಪ್ರಕರಣಗಳು ಒಂದೇ ಮಾದರಿಯ ಹತ್ಯೆಗಳಾಗಿವೆ ಎಂದು ತನಿಖಾ ಸಂಸ್ಥೆ ಅಭಿಪ್ರಾಯಪಟ್ಟಿತ್ತು. ಆದರೆ ಅದು ಈ ಪ್ರಕರಣವನ್ನು ಬೇದಿಸುವಲ್ಲಿ ವಿಫಲವಾಗಿತ್ತು.