ಮನೆಗೆ ನುಗ್ಗಿ ಎದೆಗೆ ಗುಂಡಿಕ್ಕಿ ಪತ್ರಕರ್ತನ ಬರ್ಬರ ಹತ್ಯೆ..!
ಬಂದೂಕುಧಾರಿಗಳು ಪತ್ರಕರ್ತನ ಬಾಗಿಲು ಬಡಿದು 5:30 AM ಸುಮಾರಿಗೆ ಅವರ ಹೆಸರನ್ನು ಕರೆದು ಬಾಗಿಲು ತೆರೆದು ಗುಂಡು ಹಾರಿಸಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಿಹಾರ್ : ಶುಕ್ರವಾರ ನಸುಕಿನ ವೇಳೆ ಬಿಹಾರದ ಅರಾರಿಯಾ ಜಿಲ್ಲೆಯಲ್ಲಿ ದುಷ್ಕರ್ಮಿಗಳು ಪತ್ರಕರ್ತರೊಬ್ಬರನ್ನು ಗುಂಡಿಕ್ಕಿ ಕೊಂದಿದ್ದಾರೆ. ರಾಣಿಗಂಜ್ ಬಜಾರ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಮೃತರನ್ನು ವಿಮಲ್ ಕುಮಾರ್ ಯಾದವ್ ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಕಾರ, ಬೆಳಿಗ್ಗೆ 5:30ರ ಸುಮಾರಿಗೆ ಬಂದೂಕುಧಾರಿಗಳು ಅವರ ಮನೆ ಬಾಗಿಲು ಬಡಿದು ಹೆಸರು ಕರೆದು, ಅವರು ಬಾಗಿಲು ತೆರೆಯುತ್ತಿದ್ದಂತೆ ಎದೆಗೆ ಗುಂಡು ಹಾರಿಸಿ ಅಲ್ಲಿಂದ ಎಸ್ಕೇಪ್ ಆಗಿದ್ದಾರೆ ಎನ್ನಲಾಗಿದೆ.
ಹೌದು... ರಾಣಿಗಂಜ್ ಬಜಾರ್ ಪ್ರದೇಶದಲ್ಲಿ ಪತ್ರಕರ್ತ ವಿಮಲ್ ಕುಮಾರ್ ಯಾದವ್ ಎಂಬುವರನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ.. ಮರಣೋತ್ತರ ಪರೀಕ್ಷೆ ನಡೆಯುತ್ತಿದೆ. ಕೊಲೆಯಾದ ಸ್ಥಳಕ್ಕೆ ಶ್ವಾನದಳವನ್ನು ಕರೆಸಲಾಗಿದೆ... ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಅರಾರಿಯಾ ಜಿಲ್ಲೆಯಲ್ಲಿ ಪತ್ರಕರ್ತನ ಹತ್ಯೆಗೆ ಪ್ರತಿಕ್ರಿಯಿಸಿದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಘಟನೆ ದುರದೃಷ್ಟಕರ ಎಂದಿದ್ದಾರೆ. ಅಲ್ಲದೆ, ಈ ಬಗ್ಗೆ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾಗಿ ತಿಳಿಸಿದರು.
ಇದನ್ನೂ ಓದಿ: ಯಜಮಾನನಿಲ್ಲದ ಮನೆ, ಡ್ರೈವರ್ ಇಲ್ಲದ ಡಕೋಟಾ ಇಂಜಿನ್!: ಬಿಜೆಪಿ ವಿರುದ್ಧ ಕಾಂಗ್ರೆಸ್ ವ್ಯಂಗ್ಯ
35 ವರ್ಷದ ವಿಮಲ್ ಕುಮಾರ್ ದೈನಿಕ್ ಜಾಗರಣ್ ಪತ್ರಿಕೆಯಲ್ಲಿ ಸ್ಥಳೀಯ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಾಥಮಿಕ ತನಿಖೆಯ ಆಧಾರದ ಮೇಲೆ, ನೆರೆಹೊರೆಯವರೊಂದಿಗಿನ ಹಳೇ ದ್ವೇಷವೇ ಹತ್ಯೆಗೆ ಕಾರಣ ಎಂದು ತಿಳಿಸಿದ್ದಾರೆ. ಎರಡು ವರ್ಷಗಳ ಹಿಂದೆ ಸರಪಂಚ್ ಆಗಿದ್ದ ವಿಮಲ್ ಕುಮಾರ್ ಸಹೋದರ ಕೂಡ ಇದೇ ರೀತಿ ಹತ್ಯೆಗೀಡಾಗಿರುವುದು ಕುತೂಹಲ ಮೂಡಿಸಿದೆ.
ವಿಮಲ್ ಕುಮಾರ್ ಯಾದವ್ ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದು, ಆತನ ಕೊಲೆಗೂ ಇದಕ್ಕೂ ಸಂಬಂಧವಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಆಪಾದಿತ ಬೆದರಿಕೆಗಳ ಹೊರತಾಗಿಯೂ ನಡೆಯುತ್ತಿರುವ ನ್ಯಾಯಾಲಯದ ವಿಚಾರಣೆಯ ಸಂದರ್ಭದಲ್ಲಿ ಯಾದವ್ ತನ್ನ ಸಹೋದರನ ಕೊಲೆಗಾರನ ವಿರುದ್ಧ ಸಾಕ್ಷ್ಯ ನೀಡಿದರು ಎಂದು ತಿಳಿದು ಬಂದಿದೆ. ಸಧ್ಯ ತನಿಖೆ ಮುಂದುವರೆದಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.