ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದ ದಿ ಗ್ರೇಟ್ ಖಲಿ
ದಿ ಗ್ರೇಟ್ ಖಲಿ ಎಂದು ಕರೆಯಲ್ಪಡುವ ವೃತ್ತಿಪರ ಕುಸ್ತಿಪಟು ದಲೀಪ್ ಸಿಂಗ್ ರಾಣಾ ದೆಹಲಿಯಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
ನವದೆಹಲಿ: ದಿ ಗ್ರೇಟ್ ಖಲಿ ಎಂದು ಕರೆಯಲ್ಪಡುವ ವೃತ್ತಿಪರ ಕುಸ್ತಿಪಟು ದಲೀಪ್ ಸಿಂಗ್ ರಾಣಾ ದೆಹಲಿಯಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
ಬಿಜೆಪಿ ಸೇರುವ ಕುರಿತು ಮಾತನಾಡಿರುವ ಖಲಿ "ಬಿಜೆಪಿಗೆ ಸೇರ್ಪಡೆಗೊಂಡಿದ್ದಕ್ಕೆ ನನಗೆ ಸಂತೋಷವಾಗಿದೆ.ಪ್ರಧಾನಿ ಮೋದಿಯವರ ರಾಷ್ಟ್ರಕ್ಕಾಗಿ ಮಾಡಿದ ಕೆಲಸವು ಅವರನ್ನು ಸೂಕ್ತ ಪ್ರಧಾನಿಯನ್ನಾಗಿ ಮಾಡುತ್ತದೆ ಎಂದು ನಾನು ಭಾವಿಸುತ್ತೇನೆ.ಹಾಗಾಗಿ, ರಾಷ್ಟ್ರಕ್ಕಾಗಿ ಅವರ ಆಡಳಿತದ ಭಾಗವಾಗಬಾರದೇಕೆ? ಎಂದು ನಾನು ಯೋಚಿಸಿದೆ.
ಇದನ್ನೂ ಓದಿ- R Ashok : 'ಹಿಜಾಬ್ ಮತ್ತು ಕೇಸರಿ ಎರಡೂ ಕಾಲೇಜು ಕ್ಯಾಂಪಸ್ ನಲ್ಲಿ ಬರಬಾರದು'
ಆಗಸ್ಟ್ 27, 1972 ರಂದು ಜನಿಸಿದ ದಲೀಪ್ ಸಿಂಗ್ ರಾಣಾ ಅವರು ಭಾರತೀಯ ವೃತ್ತಿಪರ ಕುಸ್ತಿಪಟು ಮತ್ತು ಕುಸ್ತಿ ಪ್ರವರ್ತಕರಾಗಿದ್ದಾರೆ, ಅವರು ಹಾಲಿವುಡ್ ಮತ್ತು ಬಾಲಿವುಡ್ ಎರಡೂ ಚಲನಚಿತ್ರಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಅವರು ದಿ ಗ್ರೇಟ್ ಖಲಿ ಎಂಬ ರಿಂಗ್ ಹೆಸರಿನಲ್ಲಿ WWE ನಲ್ಲಿ ಅವರ ಟೈಮಿಂಗ್ ಗೆ ಹೆಚ್ಚು ಹೆಸರುವಾಸಿಯಾಗಿದ್ದಾರೆ.ಖಲಿ 2000 ರಲ್ಲಿ ತಮ್ಮ ವೃತ್ತಿಪರ ಕುಸ್ತಿಗೆ ಪಾದಾರ್ಪಣೆ ಮಾಡಿದರು.ಅವರು ತಮ್ಮ WWE ವೃತ್ತಿಜೀವನವನ್ನು ಪ್ರಾರಂಭಿಸುವ ಮೊದಲು ಪಂಜಾಬ್ ಪೋಲಿಸ್‌ಗೆ ಅಧಿಕಾರಿಯಾಗಿದ್ದರು. ಖಲಿ WWE ಚಾಂಪಿಯನ್ ಆದರು.
ಇದನ್ನೂ ಓದಿ- ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಹಿಜಾಬ್ ವಿವಾದ, ಶೀಘ್ರ ವಿಚಾರಣೆ ನಡೆಸುವಂತೆ ಕಪಿಲ್ ಸಿಬಲ್ ಆಗ್ರಹ
ಪಂಜಾಬ್ ಅಸೆಂಬ್ಲಿ ಚುನಾವಣೆಗೆ ಕೆಲವು ದಿನಗಳ ಮುಂಚಿತವಾಗಿ ಖಲಿ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ.ಫೆಬ್ರವರಿ 20 ರಂದು ಪಂಜಾಬ್ ಚುನಾವಣೆ ನಡೆಯಲಿದ್ದು, ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.