ನವದೆಹಲಿ: ಈಗ ಸಾಮಾಜಿಕ ಮಾಧ್ಯಮಗಳು ಅಂದ್ರೆನೆ ಹಾಗೆ ಅದು ಖ್ಯಾತಿಯನ್ನು ತರಬಹುದು ಕುಖ್ಯಾತಿಯನ್ನು ತರಬಹುದು. ಆದ್ರೆ ನಾವು ಸಧ್ಯದ ಮಟ್ಟಿಗೆ ಹೇಳ ಹೊರಟದ್ದು ಮಾತ್ರ ಖ್ಯಾತಿಯ ಕುರಿತಾಗಿ, ಈ ಸೋಶಿಯಲ್ ಮೀಡಿಯಾ ಮೂಲಕ ಈಗ ದೇಶದಲ್ಲೆಡೆ ತಮ್ಮದೇ ಇಮೇಜ್ ಸೃಷ್ಟಿಸಿದ ಕಣ್ಸನ್ನೆ ಪ್ರಿಯಾ ವಾರಿಯರ್,ಡಾನ್ಸಿಂಗ್ ಅಂಕಲ್, ಈಗ ಅವರಿಬ್ಬರ ಸಾಲಿಗೆ ಇನ್ನೊಬ್ಬರು ಸೇರ್ಪಡೆಯಾಗಿದ್ದಾರೆ ಅವರ್ಯಾರೆಂದರೆ ಡಾನ್ಸಿಂಗ್ ಆಂಟಿ!


COMMERCIAL BREAK
SCROLL TO CONTINUE READING


ಹೌದು ಯುವತಿಯೊಬ್ಬಳು ಪಾರ್ಟಿ ಕುರಿತಾಗಿರುವ ಸಾಂಗ್ ಗೆ ವೇದಿಕೆ ಮೇಲೆ ಡಾನ್ಸ್ ಮಾಡುತ್ತಿದ್ದಾಳೆ. ಈ ಆಂಟಿಯ ಡಾನ್ಸ್ ಅಂತು ಯುವತಿಯರನ್ನು ನಾಚಿಸುವಹಾಗೆ ಇದೆ. ಫೇಸ್ ಬುಕ್ ನಲ್ಲಿ ವೈರಲ್ ಆಗಿರುವ ಈ ವೀಡಿಯೋವನ್ನು  ಈಗಾಗಲೇ ಎರಡು ಮಿಲಿಯನ್ ವೀಕ್ಷಕರು ಇದನ್ನು ನೋಡಿದ್ದಾರೆ. ಪಾಪುಲರ್ ಸಿಂಗರ್ ಯೋ ಯೋ ಹನಿಸಿಂಗ್ ಅವರ ಪಾರ್ಟಿ ಇಸ್ ನೈಟ್ ಸಾಂಗ್ ಗೆ ಡ್ಯಾನ್ಸ್ ಮಾಡಿರುವ ಈಕೆ ಈಗ ಡಾನ್ಸಿಂಗ್ ಅಂಕಲ್ ನ ಡಾನ್ಸ್ ಗೆ ಸ್ಪರ್ಧೆ ಕೊಡುವ  ಹಾಗಿದ್ದಾಳೆ.


ಇತ್ತೀಚಿಗೆ ಗೋವಿಂದ್ ಶೈಲಿಯಲ್ಲಿ ಡಾನ್ಸ್ ಮಾಡುವ ಮೂಲಕ ದೇಶಾದ್ಯಂತ ಸುದ್ದಿ ಮಾಡಿದ್ದ ಸಂಜಯ ಶ್ರೀವಾಸ್ತವ್ ಅವರಿಗೆ ಬಾಲಿವುಡ್ ನಟರು ಸಹಿತ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈಗ ಈ ಆಂಟಿಯೂ ಕೂಡ ಅದೇ ರೇಂಜ್ ನಲ್ಲಿ ಹವಾ ಮಾಡುವ ಮುನ್ಸೂಚನೆ ನೀಡಿದ್ದಾಳೆ.