ಸ್ಮಾರ್ಟ್ ಫೋನ್ ನಲ್ಲಿನ Dark Mode ನಿಂದ ಕಣ್ಣಿಗೆ ಅಪಾಯವಾಗುವ ಸಾಧ್ಯತೆ, ಶೀಘ್ರವೇ ಈ ಕೆಲಸ ಮಾಡಿ
ಒಂದು ವೇಳೆ ನೀವೂ ಕೂಡ ದೀರ್ಘಕಾಲದಿಂದ ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಡಾರ್ಕ್ ಮೋಡ್ ಬಳಸುತ್ತಿದ್ದರೆ ನಿಮ್ಮ ಕಣ್ಣುಗಳೂ ಕೂಡ ಅದಕ್ಕೆ ಅಡಾಪ್ಟ್ ಆಗಿ ಬಿಡುತ್ತವೆ ಹಾಗೂ ಕಾಲಾಂತರದಲ್ಲಿ ಬಿಳಿ ಬಣ್ಣದ ಅಕ್ಷರಗಳಿಗೆ ಅವು ಹೊಂದಿಕೊಳ್ಳುತ್ತವೆ. ಆದರೆ ಒಂದು ವೇಳೆ ನೀವು ಲೈಟ್ ಮೋಡ್ ಬಳಸಿದರೆ, ಇದು ನಿಮ್ಮ ಕಣ್ಣುಗಳ ಮೇಲೆ ನೇರ ಪರಿಣಾಮ ಬೀರುತ್ತದೆ ಹಾಗೂ ಕಾಲಾಂತರದಲ್ಲಿ ನಿಮ್ಮ ದೃಷ್ಟಿ ಶಕ್ತಿಯನ್ನು ಕಳೆದುಕೊಳ್ಳುತ್ತದೆ.
ನವದೆಹಲಿ: ಕಳೆದ ಕೆಲವು ದಿನಗಳಿಂದ ಸ್ಮಾರ್ಟ್ ಫೋನ್ ಗಳಲ್ಲಿ ಡಾರ್ಕ್ ಮೋಡ್ ತುಂಬಾ ಪಾಪ್ಯುಲರ್ ಅನಿಸಿಕೊಳ್ಳುತ್ತಿದೆ. ಇದೀಗ ವಾಟ್ಸ್ ಆಪ್, ಟ್ವಿಟ್ಟರ್, ಫೇಸ್ ಬುಕ್ ಗಳಲ್ಲಿಯೂ ಕೂಡ ಡಾರ್ಕ್ ಮೋಡ್ ಆಪ್ಶನ್ ಲಭ್ಯವಿದೆ. ಅಷ್ಟೇ ಅಲ್ಲ ಅಂಡ್ರಾಯಿಡ್ 10 ಆವೃತ್ತಿಯಲ್ಲಿ ಗೂಗಲ್ ಸಿಸ್ಟಮ್-ವೈಟ್ ಮೋಡ್ ಆಪ್ಶನ್ ಅನ್ನೂ ಕೂಡ ನೀಡಿದೆ. ಡಾರ್ಕ್ ಮೋಡ್ ಬಳಕೆಯಿಂದ ನಿಮ್ಮ ಫೋನ್ ಬ್ಯಾಟರಿ ಹೆಚ್ಚು ಖರ್ಚಾಗುತ್ತದೆ. ಆದರೆ, ಇದರಿಂದ ಕಣ್ಣುಗಳಿಗೆ ಹೆಚ್ಚಿನ ಆಯಾಸವಾಗುವುದಿಲ್ಲ. ಇನ್ನೊಂದೆಡೆ ನಿರಂತರವಾಗಿ ಈ ಮೋಡ್ ಬಳಕೆ ಮಾಡುವುದರಿಂದ ಅಪಾಯಗಳು ಕೂಡ ಹೆಚ್ಚಾಗಿವೆ. ಅಂದರೆ, ನಿರಂತರ ಡಾರ್ಕ್ ಮೋಡ್ ಬಳಕೆಯಿಂದ ನಿಮ್ಮ ದೃಷ್ಟಿ ಶಿಥಿಲವಾಗುವ ಸಾಧ್ಯತೆ ಇದೆ.
ಸದ್ಯ ಸ್ಮಾರ್ಟ್ ಫೋನ್ ನ ವಿವಿಧ ಆಪ್ ಗಳಲ್ಲಿ ಡಾರ್ಕ್ ಮೋಡ್ ವೈಶಿಷ್ಟ್ಯ ತುಂಬಾ ಟ್ರೆಂಡಿಂಗ್ ನಲ್ಲಿದೆ. ಈ ಆಪ್ಶನ್ ಅನ್ನು ಸಕ್ರೀಯಗೊಳಿಸುತ್ತಲೇ ನಿಮ್ಮ ಡಿಸ್ಪ್ಲೇ ಸ್ಕ್ರೀನ್ ಡಾರ್ಕ್ ಅಥವಾ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಇದರಿಂದ ಕಡಿಮೆ ಪ್ರಮಾಣದಲ್ಲಿ ನಿಮ್ಮ ಮೊಬೈಲ್ ಬೆಳಕು ಕಣ್ಣುಗಳಿಗೆ ಸೇರುತ್ತದೆ ಹಾಗೂ ಹೆಚ್ಚಿನ ಸಮಯದವರೆಗೆ ನಿಮ್ಮ ಕಣ್ಣುಗಳಿಗೆ ಯಾವುದೇ ರೀತಿಯ ಆಯಾಸವಿಲ್ಲದೆ ನೀವು ನಿಮ್ಮ ಫೋನ್ ಅನ್ನು ಬಳಸಬಹುದಾಗಿದೆ. ಆದರೆ, ಬೆಳಗಿನ ಹೊತ್ತಿನಲ್ಲಿ ವೈಟ್ ಮೋಡ್ ಒಂದು ಉತ್ತಮ ವಿಕಲ್ಪವಾಗಿ ಸಾಬೀತಾದರೆ, ಹಗಲು-ರಾತ್ರಿಯ ಎರಡೂ ಹೊತ್ತು ಡಾರ್ಕ್ ಮೋಡ್ ಬಳಸುವುದು ನಿಮ್ಮ ಕಣ್ಣಿಗೆ ಅಪಾಯ ಉಂಟು ಮಾಡುತ್ತದೆ.
ಕಣ್ಣಿನ ದೃಷ್ಟಿ ದುರ್ಬಲವಾಗುತ್ತದೆ
ಒಂದು ವೇಳೆ ನೀವೂ ಕೂಡ ದೀರ್ಘಕಾಲದಿಂದ ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಡಾರ್ಕ್ ಮೋಡ್ ಬಳಸುತ್ತಿದ್ದರೆ ನಿಮ್ಮ ಕಣ್ಣುಗಳೂ ಕೂಡ ಅದಕ್ಕೆ ಅಡಾಪ್ಟ್ ಆಗಿ ಬಿಡುತ್ತವೆ ಹಾಗೂ ಕಾಲಾಂತರದಲ್ಲಿ ಬಿಳಿ ಬಣ್ಣದ ಅಕ್ಷರಗಳಿಗೆ ಅವು ಹೊಂದಿಕೊಳ್ಳುತ್ತವೆ. ಆದರೆ ಒಂದು ವೇಳೆ ನೀವು ಲೈಟ್ ಮೋಡ್ ಬಳಸಿದರೆ, ಇದು ನಿಮ್ಮ ಕಣ್ಣುಗಳ ಮೇಲೆ ನೇರ ಪರಿಣಾಮ ಬೀರುತ್ತದೆ ಹಾಗೂ ಕಾಲಾಂತರದಲ್ಲಿ ನಿಮ್ಮ ದೃಷ್ಟಿ ದುರ್ಬಲವಾಗುತ್ತದೆ. ಅತಿಯಾಗಿ ಡಾರ್ಕ್ ಮೋಡ್ ಬಳಸುವುದು ಕಣ್ಣು ನೋವಿಗೆ ಕಾರಣವಾಗುವ ಸಾಧ್ಯತೆ ಇದೆ. ಲೈಟ್ ನಿಂದ ಡಾರ್ಕ್ ಟೆಕ್ಸ್ಟ್ ಗೆ ಸ್ವಿಚ್ ಮಾಡಿದ ಬಳಿಕ ನಿಮ್ಮ ಕಣ್ಣುಗಳು ಈ ಬದಲಾವಣೆಗೆ ಬೇಗನೆ ಹೊಂದಿಕೊಳ್ಳುವುದಿಲ್ಲ ಹಾಗೂ ಇದರಿಂದ ಬ್ರೈಟ್ ಬರ್ನ್ ಸ್ಥಿತಿ ಕೂಡ ಕಾಣಿಸಿಕೊಳ್ಳಲಿದೆ.
ಕಣ್ಣುಗಳಲ್ಲಿ ಎಸ್ಟಿಗ್ಮ್ಯಾಟಿಜಂ ಆಗುವ ಸಾಧ್ಯತೆ ಇದೆ
ಇದಕ್ಕೆ ಸಂಬಂಧಿಸಿದಂತೆ ವರದಿ ನೀಡಿರುವ ಅಮೆರಿಕಾದ ಆಪ್ಟೋಮೆಟ್ರಿಕ್ ಅಸೋಸಿಯೇಷನ್, ಡಾರ್ಕ್ ಮೋಡ್ ಬಳಸುವ ಜನರಲ್ಲಿ ಎಸ್ಟಿಗ್ಮ್ಯಾಟಿಜಂ ಹೆಸರಿನ ಕಾಯಿಲೆ ಉಂಟಾಗುತ್ತಿದೆ. ಈ ಕಾಯಿಲೆಯಲ್ಲಿ ನಿಮ್ಮ ಒಂದು ಕಣ್ಣು ಅಥವಾ ಎರಡೂ ಕಣ್ಣುಗಳ ಕಾರ್ನಿಯಾ ವಿಚಿತ್ರ ಆಕಾರ ಪಡೆಯುತ್ತದೆ ಹಾಗೂ ನಿಮಗೆ ಮಸುಕಾಗಿ ಕಾಣಿಸಲಿದೆ. ಇದರಿಂದ ಬ್ಲಾಕ್ ಬ್ಯಾಕ್ ಗ್ರೌಂಡ್ ನಲ್ಲಿ ವೈಟ್ ಟೆಕ್ಸ್ಟ್ ಕಾಣಿಸುವುದು ಸುಲಭವಾಗುವುದಿಲ್ಲ. ಡಿಸ್ಪ್ಲೇ ಬ್ರೈಟ್ ಆಗುವ ಕಾರಣ ಐರಿಶ್ ಗಾತ್ರ ಕುಗ್ಗುತ್ತದೆ. ಇಂದರಿಂದ ನಿಮ್ಮ ಕಣ್ಣುಗಳ ಫೋಕಸ್ ಮೇಲೆ ಪರಿಣಾಮ ಉಂಟಾಗುವ ಸಾಧ್ಯತೆ ಇದೆ.
ಉಪಾಯ ಏನು?
ಕಣ್ಣುಗಳ ಮೇಲೆ ಡಾರ್ಕ್ ಮೋಡ್ ಪ್ರಭಾವ ಬೀರದಂತೆ ನೋಡಿಕೊಳ್ಳಬೇಕು. ಇದಕ್ಕಾಗಿ ನೀವು ಡಾರ್ಕ್ ಮೋಡ್ ಹಾಗೂ ಲೈಟ್ ಮೋಡ್ ಗಳನ್ನು ನಿರಂತರವಾಗಿ ಬದಲಾಯಿಸುತ್ತಲೇ ಇರಬೇಕು. ಸಾಧ್ಯವಾದಷ್ಟು ನಿಮ್ಮ ಸ್ಮಾರ್ಟ್ ಫೋನ್ ಬ್ರೈಟ್ ನೆಸ್ ಕಡಿಮೆಯಾಗಿಡಲು ಪ್ರಯತ್ನಿಸಿ. ದಿನದ ಅವಧಿಯಲ್ಲಿ ಲೈಟ್ ಮೋಡ್ ಬಳಸಿದರೆ, ರಾತ್ರಿ ಹೊತ್ತು ಡಾರ್ಕ್ ಮೋಡ್ ನ ಬಳಕೆ ಮಾಡುವುದು ಉಚಿತ.