ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಗೆ ಇಂದು ದಿನಾಂಕಗಳ ಘೋಷಣೆಯಾಗಿದೆ. ರಾಷ್ಟ್ರರಾಜಧಾನಿಯ ಒಟ್ಟು ೭೦ ವಿಧಾನಸಭಾ ಕ್ಷೇತ್ರಗಳಿಗೆ ಫೆಬ್ರುವರಿ 8ಕ್ಕೆ ಮತದಾನ ನಡೆಯಲಿದೆ. ಈ ಎಲ್ಲ ಸ್ಥಾನಗಳಲ್ಲಿ ಒಂದೇ ಹಂತದಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದ್ದು, ಫೆಬ್ರುವರಿ ೧೧ಕ್ಕೆ ಮತ ಎಣಿಕೆ ಕಾರ್ಯ ನಡೆಯಲಿದೆ. ಚುನಾವಣಾ ದಿನಾಂಕ ಪ್ರಕಟಿಸಿರುವ ಭಾರತದ ಮುಖ್ಯ ಚುನಾವಣಾ ಆಯುಕ್ತ ಸುನೀಲ್ ಆರೋರಾ, ಚುನಾವಣೆಗೆ ದಿನಾಂಕಗಳ ಘೋಷಣೆಯೊಂದಿಗೆ ನವದೆಹಲಿಯಲ್ಲಿ ನೀತಿ ಸಂಹಿತೆ ಜಾರಿಗೆ ಬಂದಿದೆ ಎಂದು ಘೋಷಿಸಿದ್ದಾರೆ. ದೆಹಲಿಯ ಒಟ್ಟು ೭೦ ಸ್ಥಾನಗಳ ಪೈಕಿ ೧೨ ಸ್ಥಾನಗಳು ಹಿಂದುಳಿದ ವರ್ಗಗಳಿಗೆ ಮೀಸಲಾಗಿವೆ. ಚುನಾವಣಾ ಆಯೋಗದ ಅಂಕಿ-ಅಂಶಗಳ ಪ್ರಕಾರ ದೆಹಲಿಯಲ್ಲಿ ಒಟ್ಟು ೧.46 ಲಕ್ಷ ಮತದಾರರಿದ್ದು, ಇವರಿಗಾಗಿ ಒಟ್ಟು ೧೩,೭೫೦ ಮತಗಟ್ಟೆಗಳನ್ನು ನಿರ್ಮಿಸಲಾಗಿದೆ.


COMMERCIAL BREAK
SCROLL TO CONTINUE READING

ಈ ಕೆಳಗಿನ ದಿನಾಂಕಗಳನ್ನು ನೆನಪಿಡಿ
- ಜನವರಿ ೧೪: ಅಧಿಸೂಚನೆ ಜಾರಿಗೆ ಬರಲಿದೆ
- ಜನವರಿ ೨೧: ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ.
- ಜನವರಿ ೨೨: ನಾಮಪತ್ರಗಳ ಪರಿಶೀಲನೆ.
- ಜನವರಿ ೨೪: ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ.
- ಫೆಬ್ರವರಿ ೦೮: ಶನಿವಾರ ಮತದಾನ ನಡೆಯಲಿದೆ.
- ಫೆಬ್ರವರಿ ೧೧: ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ.


ಕಳೆದ ಬಾರಿ ೨೦೧೫ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಅರವಿಂದ್ ಕೆಜ್ರಿವಾಲ್ ಅವರ ನೇತೃತ್ವದ ಆಮ್ ಆದ್ಮಿ ಪಕ್ಷ ೭೦ ಸದಸ್ಯರನ್ನೋಳಗೊಂಡ ವಿಧಾನಸಭೆಯಲ್ಲಿ ಒಟ್ಟು ೬೭ ಸ್ಥಾನಗಳನ್ನು ಗೆದ್ದು ದಾಖಲೆ ನಿರ್ಮಿಸಿತ್ತು. ಒಂದೆಡೆ ಬಿಜೆಪಿ ಕೇವಲ ಒಂದು ಸ್ಥಾನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು ಮತ್ತು ಕಾಂಗ್ರೆಸ್ ಖಾತೆ ತೆರೆಯಲು ವಿಫಲವಾಗಿತ್ತು.


ಆದರೆ ೨೦೧೫ರ ವಿಧಾನಸಭೆ ಚುನಾವಣೆಗಳ ಬಳಿಕ MCDಗೆ ನಡೆದ ಚುನಾವಣೆಗಳಲ್ಲಿ ಬಿಜೆಪಿ ಅದ್ಭುತ ಪ್ರದರ್ಶನ ನೀಡಿ, ದೆಹಲಿಯ ಮೂರು ನಿಗಮಗಳಲ್ಲಿ ತನ್ನ ಸರ್ಕಾರ ರಚಿಸಿತ್ತು. ೨೦೧೯ರ ಚುನಾವಣೆಯಲ್ಲಿಯೂ ಕೂಡ ದೆಹಲಿಯ ಆಡಳಿತಾರೂಢ AAP ಪಕ್ಷ ಲೋಕಸಭೆಯ ೭ ಸ್ಥಾನಗಳ ಪೈಕಿ ಒಂದು ಸ್ಥಾನದಲ್ಲಿಯೂ ಕೂಡ ಗೆಲುವು ದಾಖಲಿಸಿರಲಿಲ್ಲ. ಇವುಗಳಲ್ಲಿ ಹಲವು ಸ್ಥಾನಗಳಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳು ತಮ್ಮ ಜಮಾನತ್ತು ಕಳೆದುಕೊಂಡಿದ್ದರು. ಆದರೆ, ಈ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ, ಆಮ್ ಆದ್ಮಿ ಪಕ್ಷಕ್ಕಿಂತ ಉತ್ತಮ ಪ್ರದರ್ಶನ ನೀಡಿತ್ತು.


ದೆಹಲಿ ವಿಧಾನಸಭೆ ಚುನಾವಣೆಗಳಿಗಾಗಿ ಬಿಜೆಪಿ ಈಗಾಗಲೇ ತನ್ನ ಸಿದ್ಧತೆ ಪೂರ್ಣಗೊಳಿಸಿದೆ. ದೆಹಲಿಯ ಅನಧಿಕೃತ ಕಾಲೋನಿಗಳಲ್ಲಿ ವಾಸಿಸುತ್ತಿರುವ ಜನರಿಗೆ ಅವರ ಆಸ್ತಿ ಹಕ್ಕುಪತ್ರ ನೀಡುವ ಕೆಲಸ ಬಿಜೆಪಿ ಮಾಡಿದೆ. ಸದ್ಯ ದೆಹಲಿಯ ಬಿಜೆಪಿ ಮುಖಂಡರು ದೆಹಲಿಯಲ್ಲಿನ ವಾಯುಮಾಲಿನ್ಯ ಹಾಗೂ ಕಲುಷಿತ ಕುಡಿಯುವ ನೀರನ್ನು ಚುನಾವಣಾ ವಿಷಯವಾಗಿ ಬಿಂಬಿಸುತ್ತಿದೆ. ಇನ್ನೊಂದೆಡೆ ಆಡಳಿತಾರೂಢ ಆಮ್ ಆದ್ಮಿ ಪಕ್ಷ ಅಗ್ಗದ ದರದಲ್ಲಿ ವಿದ್ಯುತ್, ಶುಲ್ಕರಹಿತ ನೀರು, ಉತಮ ಶೈಕ್ಷಣಿಕ ವ್ಯವಸ್ಥೆ ಹಾಗೂ ಆರೋಗ್ಯ ವ್ಯವಸ್ಥೆಯಲ್ಲಿನ ಸುಧಾರಣೆಯನ್ನು ಮುಂದಿಟ್ಟುಕೊಂಡು ಚುನಾವಣಾ ಅಖಾಡಕ್ಕೆ ಇಳಿಯಲು ನಿರ್ಧರಿಸಿದೆ. ಚುನಾವಣೆಗಳಿಗೂ ಮುನ್ನ ದೆಹಲಿಯ ಹಲವು ಕಾಲೋನಿಗಳಲ್ಲಿ ಸಿಸಿಟಿವಿ ಕ್ಯಾಮರಾಗಳ ಅಳವಡಿಕೆ ಹಾಗೂ ವೈಫೈ ಸೇವೆ ನೀಡಿರುವ ಕ್ರೆಡಿಟ್ ಕೂಡ ಆಮ್ ಆದ್ಮಿ ಪಕ್ಷ ಪಡೆದುಕೊಳ್ಳುತ್ತಿದೆ.