ಮುಂಬೈ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಭಾರತಕ್ಕೆ ಮರಳಲು ಬಯಸಿದ್ದಾನೆ. ಇದಕ್ಕಾಗಿ ನರೇಂದ್ರ ಮೋದಿ ಸರ್ಕಾರದೊಂದಿಗೆ ಮಾತುಕತೆ ನಡೆಸಿದ್ದಾನೆ ಎಂದು ಮಹಾರಾಷ್ಟ್ರದ ನವ ನಿರ್ಮಾಣ ಸೇನಾ ಅಧ್ಯಕ್ಷ ರಾಜ್ ಠಾಕ್ರೆ ನೇರ ಆರೋಪ ಮಾಡಿದ್ದಾರೆ. 


COMMERCIAL BREAK
SCROLL TO CONTINUE READING

ಗುರುವಾರ ಪಕ್ಷದ ಫೇಸ್ಬುಕ್ ಪುಟದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ರಾಜ್ ಠಾಕ್ರೆ ಈ ವಿಷಯವನ್ನು ತಿಳಿಸಿದರು. 


ಸದ್ಯ ಅನಾರೋಗ್ಯದಿಂದ ಬಳಲುತ್ತಿರುವ ದಾವೂದ್ ಇಬ್ರಾಹಿಂ ದುರ್ಬಳನಾಗಿದ್ದು, ಭಾರತಕ್ಕೆ ಮರಳಿ ತನ್ನ ತಾಯಿನಾಡಿನಲ್ಲಿ ಕೊನೆಯುಸಿರೆಳೆಯುವ ಹಂಬಲವನ್ನು ಹೊಂದಿದ್ದಾನೆ. ಹೀಗಾಗಿಯೇ ಅವನು ಮೋದಿ ಸರ್ಕಾರದ ಜೊತೆ ಸಮಾವೇಶದಲ್ಲಿ ತೊಡಗಿದ್ದಾನೆ ಎಂದು ಠಾಕ್ರೆ ವಿವರಿಸಿದರು.


ಆಡಳಿತಾರೂಢ ಭಾರತೀಯ ಜನತಾ ಪಕ್ಷವು ಭೂಗತ ಪಾತಕಿಯ ಈ ಒಲವನ್ನು ಬಳಸಿಕೊಳ್ಳಲು ಮುಂದಾಗಿದೆ. ದಾವೂದ್ ನನ್ನು ಚುನಾವಣೆಗೆ ಮುನ್ನವೇ ಭಾರತಕ್ಕೆ ಕರೆತರುವ ಮೂಲಕ ಮತಗಳನ್ನು ಸೆಳೆಯಲು ಸಜ್ಜಾಗಿದೆ ಎಂದು ರಾಜ್ ಠಾಕ್ರೆ ಊಹಿಸಿದ್ದಾರೆ.